More

    ಬೆಂಕಿ ಅವಘಡದಲ್ಲಿ ಪತ್ನಿಯನ್ನು ರಕ್ಷಿಸಿದ್ದ ಪತಿ ಸಾವು: ಅಬುಧಾಬಿಯಲ್ಲಿ ವಾಸಿಸುತ್ತಿದ್ದ ಕೇರಳ ಮೂಲದ ದಂಪತಿ

    ದುಬೈ: ಕಳೆದ ವಾರ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಹೆಂಡತಿಯನ್ನು ರಕ್ಷಿಸಲು ಹೋಗಿ ಗಾಯಗೊಂಡಿದ್ದ ಪತಿ ಮೃತಪಟ್ಟಿದ್ದಾರೆ.

    ಕೇರಳ ಮೂಲದ ಅಬುಧಾಬಿ ನಿವಾಸಿ ಅನಿಲ್​ ನಿನಾನ್​ ತಮ್ಮ ಪತ್ನಿಯನ್ನು ಮನೆಗೆ ಬಿದ್ದಿದ್ದ ಬೆಂಕಿಯಿದ ರಕ್ಷಿಸಲು ಹೋದಾಗ ಗಾಯಗೊಂಡಿದ್ದರು. ಪತ್ನಿ ನೀನೂ ಕೂಡ ಗಾಯಗೊಂಡಿದ್ದರು. ಸದ್ಯ ಅವರ ಸ್ಥಿತಿ ಸುಧಾರಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಶಾರ್ಟ್​ ಸಕ್ರ್ಯೂಟ್​ನಿಂದ ಬೆಂಕಿ ಅವಘಡ ಸಂಭವಿಸಿತ್ತು.

    ಇದು ನಮಗೆ ದುಃಖದ ಸಮಯ. ಅನಿಲ್​ ಹೆಂಡತಿ ಆಸ್ಪತ್ರೆಯಲ್ಲಿ ಈಗ ಸುಧಾರಿಸಿಕೊಳ್ಳುತ್ತಿದ್ದಾಳೆ. ಆದರೆ ಇವನ ಸಾವಿನಿಂದ ನಮಗೆ ಶಾಕ್​ ಆಗಿದೆ ಎಂದು ಹತ್ತಿರದ ಸಂಬಂಧಿಯೊಬ್ಬರು ಹೇಳಿದ್ದಾರೆ.

    ಅಲ್ಲಿನ ಅವಘಡದ ಬಗ್ಗೆ ನಮಗೆ ಪೂರ್ಣ ಮಾಹಿತಿ ಇಲ್ಲ. ಕಾರಿಡಾರ್​ನಲ್ಲಿ ನಿಂತಿದ್ದ ನೀನೂ ಅವರಿಗೆ ಬೆಂಕಿ ತಗುಲಿದೆ. ಬೆಡ್​​ರೂಂನಲ್ಲಿದ್ದ ಅನಿಲ್​, ಆಕೆಯನ್ನು ರಕ್ಷಿಸಿಲು ಹೋಗಿದ್ದಾರೆ. ಆಗ ಈತನಿಗೂ ಬೆಂಕಿ ತಗುಲಿದೆ ಎಂದು ಸೇಂಟ್​ ಥಾಮಸ್​ ಮಾರ್​ ತೋಮಾ ಚರ್ಚ್​ನ ಸೋಜನ್​ ಥಾಮಸ್​ ಎಂಬುವವರು ತಿಳಿಸಿದ್ದಾರೆ.

    ದಂಪತಿಗೆ 4 ವರ್ಷದ ಮಗನಿದ್ದಾನೆ. ಗಾಯಗೊಂಡ ದಂಪತಿಯನ್ನು ಉಮ್​ ಅಲ್​ ಕ್ವೈನ್ ಪ್ರದೇಶದ ಶೇಕ್​ ಖಲೀಫ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts