More

    ಚಿಂಚಲಿ ಗ್ರಾಮದಲ್ಲಿ ‘ಮನೆಗೊಂದು ರೊಟ್ಟಿ-ನಾಣ್ಯ’ ಅಭಿಯಾನ

    ಗದಗ: ಬಿಜೆಪಿ ಯುವ ನಾಯಕ ಅನೀಲ್ ಮೆಣಸಿಕಾಯಿ ಗದಗ ವಿಧಾನಸಭಾ ಮತಕ್ಷೇತ್ರದ ಚಿಂಚಲಿ ಗ್ರಾಮದಲ್ಲಿ ಸೋಮವಾರ ಆರನೇ ದಿನದ ‘ಮನೆಗೊಂದು ರೊಟ್ಟಿ-ನಾಣ್ಯ’ ಅಭಿಯಾನ ಹಮ್ಮಿಕೊಂಡರು. ಅನೀಲ್ ಮೆಣಸಿನಕಾಯಿ ಅವರನ್ನು ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಕಂಬಳಿ, ಕುರಿ ನೀಡಿ ಗೌರವಿಸಿದರು. ಅಭಿಯಾನದ ಪ್ರಯುಕ್ತ ಮನೆ ಮನೆಗಳಿಗೆ ಭೇಟಿ ನೀಡಿದ ಅನೀಲ್ ಮೆಣಸಿನಕಾಯಿ ಅವರಿಗೆ ಚಿಂಚಲಿ ಗ್ರಾಮದ ಸೋಮರಡ್ಡಿ ಲಾಳಗರಡ್ಡಿ ಅವರು ಮಹಾಯೋಗಿ ವೇಮನರ, ವಿಜಯಕುಮಾರ್ ಬಾಲರಡ್ಡಿ ಅವರು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ ಭಾವಚಿತ್ರ ನೀಡಿ ಗೌರವಿಸಿದರು. ಮಹಿಳೆಯರು ರೊಟ್ಟಿ, ಒಂದು ರೂಪಾಯಿ ನಾಣ್ಯ ನೀಡಿ ಬಿಜೆಪಿ ಗೆಲುವಿಗಾಗಿ ಹಾರೈಸಿದರು.

    ಈ ಬಾರಿ ಗದಗನಲ್ಲಿ ಕಮಲ ಅರಳಿಸಲು ಟೊಂಕಕಟ್ಟಿ ನಿಂತಿರುವ ಅನೀಲ್ ಮೆಣಸಿನಕಾಯಿ ಅವರಿಗೆ ಪಕ್ಷದ ಮುಖಂಡರು, ಮಹಿಳಾ ಕಾರ್ಯಕರ್ತರು ಸಾಥ್ ನೀಡುತ್ತಿದ್ದಾರೆ. ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಗದಗ-ಬೆಟಗೇರಿ ಅವಳಿ ನಗರದಲ್ಲಿ ಅನೀಲ್ ಮೆಣಸಿನಕಾಯಿ ಅವರಿಗೆ ಹೆಚ್ಚಿನ ಮತಗಳು ದಾಖಲಾಗಿದ್ದವು. ಗ್ರಾಮೀಣ ಪ್ರದೇಶಗಳಲ್ಲಿ ತುಸು ಕೈ ಕೊಟ್ಟಿದ್ದವು. ಹೀಗಾಗಿ ಗ್ರಾಮೀಣ ಪ್ರದೇಶದತ್ತ ಹೆಚ್ಚು ಚಿತ್ತ ಹರಿಸಿರುವ ಅನೀಲ್ ಮೆಣಸಿನಕಾಯಿ ಈ ಬಾರಿಯ ಚುನಾವಣೆಯಲ್ಲಿ ದಾಖಲೆಯ ಮತದಾರರನ್ನು ಸೆಳೆಯಲು ಯತ್ನಿಸುತ್ತಿರುವುದು ಗಮನಾರ್ಹವಾಗಿದೆ.

    ಕರ್ನಾಟಕ ದ್ರಾಕ್ಷಾರಸ ಮಂಡಳಿ ಮಾಜಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ ಗ್ರಾಮೀಣ‌ ಮಂಡಲ ಅಧ್ಯಕ್ಷ ದ್ಯಾಮಣ್ಣ ನೀಲಗುಂದ, ಚಿಂಚಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತಪ್ಪ ಸಂದಕದ, ಗ್ರಾಪಂ ಸದಸ್ಯರಾದ ನಿಂಗಪ್ಪ ತೇರಿನಗಡ್ಡಿ, ಗೌರಮ್ಮ ಕರಿಗಾರ, ಚಂದ್ರಶೇಖರ ಹರಿಜನ, ಮುಖಂಡರಾದ ವಿಜಯಕುಮಾರ್ ಬಾಲರಡ್ಡಿ, ಅನೀಲ್ ಅರಮನಿ, ಸಣ್ಣಬಸಪ್ಪ ಗುಡಸಲಮನಿ, ಶರಣಪ್ಪ ನಂದಿಕೋಲಮಠ, ಸದಾನಂದ ಕಮ್ಮಾರ, ವಿರುಪಾಕ್ಷಪ್ಪ ಹುಲಕೋಟಿ, ಫಕ್ಕೀರಪ್ಪ ನೀಲಣ್ಣವರ, ಬಸವರಾಜ್ ಕೀರಣ್ಣವರ, ಮುತ್ತು ಗುಡಸಲಮನಿ, ಕುಮಾರ ಕೀರಣ್ಣವರ, ಫಕ್ಕಿರೇಶ ಕೀರಣ್ಣವರ, ಕಾಶಪ್ಪ ಗೌಡನಾಯ್ಕರ, ಗ್ವಾರಪ್ಪ ಗೌಡನಾಯ್ಕರ, ಮಹಾದೇವಪ್ಪ ಸಿದ್ರಾಮಣ್ಣವರ, ಸಜ್ಜಪ್ಪ ಹಳೆಮನಿ, ವಿರುಪಾಕ್ಷಪ್ಪ ಹೊಸಮನಿ, ಪ್ರಭಣ್ಣ ಗೋಡಿ, ಹನಮಪ್ಪ ದಿಂಡೆಣ್ಣವರ, ಆನಂದ ದಿಡ್ಡಿ, ಗೋವಿಂದಪ್ಪ‌ ಮೂಲಿಮನಿ, ಶೇಖಣ್ಣ ಚೂರಿ, ನಿಂಗಪ್ಪ ಗಾಣಿಗೇರ, ಮಂಜುನಾಥ ಕೊಟ್ನಿಕಲ್, ಚನ್ನಪ್ಪ ಬೆಟಗೇರಿ, ಶರಣಪ್ಪ ಚಿಂಚಲಿ, ಪರಮೇಶ್ ನಾಯಕ್ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts