More

    ಹಂಗನಕಟ್ಟಿ ಗ್ರಾಮದಲ್ಲಿ ರೊಟ್ಟಿ-ನಾಣ್ಯಅಭಿಯಾನ

    ಗದಗ: ಗದಗ ವಿಧಾನಸಭಾ ಮತಕ್ಷೇತ್ರದ ಹಂಗನಕಟ್ಟಿ ಗ್ರಾಮದಲ್ಲಿ ಬಿಜೆಪಿ ಯುವ ನಾಯಕ ಅನೀಲ್ ಮೆಣಸಿನಕಾಯಿ ನಾಲ್ಕನೇ ದಿನದ ‘ಮನೆಗೊಂದು ರೊಟ್ಟಿ-ನಾಣ್ಯ’ ಅಭಿಯಾನ ಹಮ್ಮಿಕೊಂಡರು.

    ಅಭಿಯಾನದ ಹಿನ್ನೆಲೆಯಲ್ಲಿ ಶನಿವಾರ ಹಂಗನಕಟ್ಟಿ ಗ್ರಾಮಕ್ಕೆ ಆಗಮಿಸಿದ ಅನೀಲ್ ಮೆಣಸಿನಕಾಯಿ ಅವರನ್ನು ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ಕಂಬಳಿ ಹೊದಿಸಿ, ಉಡುಗೊರೆಯಾಗಿ ಕುರಿ ಮರಿ ನೀಡಿ ಗೌರವಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ನಗರದ ಮಹಿಳೆಯರು ಆರತಿ ಮಾಡಿ ಹಾರೈಸಿದರು.

    ಯಾವುದೇ ಶುಭ ಕಾರ್ಯಗಳ ಆರಂಭಕ್ಕೂ ಮುನ್ನ ಹಿಂದೂಗಳ ಸಂಪ್ರದಾಯ, ನಂಬಿಕೆ ಪ್ರಕಾರ ಕುರುಬರ ಮನೆಯಿಂದ ಪ್ರಾರಂಭಿಸುವುದು ವಾಡಿಕೆ. ಹೀಗಾಗಿ ಗ್ರಾಮದ ಕುರುಬರ ಮನೆಯಿಂದಲೇ ರೊಟ್ಟಿ ಮತ್ತು ನಾಣ್ಯವನ್ನು ಸ್ವೀಕರಿಸುವ ಮೂಲಕ ನಾಲ್ಕನೇ ದಿನದ ಅಭಿಯಾನ ಆರಂಭಿಸಿದರು. ನಂತರ ಮನೆಗಳ ಭೇಟಿ ವೇಳೆ ಗ್ರಾಮದ ದಲಿತರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿ, ಕುಶಲೋಪರಿ ವಿಚಾರಿಸಿದರು. ಈ ವೇಳೆ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಗ್ರಾಮಸ್ಥರಿಂದ ಆಲಿಸಿದರು.

    ಬಳಿಕ ಮಾತನಾಡಿದ ಅವರು, ‘ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಿವೆ. ಎಸ್‌ಸಿ, ಎಸ್ ಟಿ ಸಮುದಾಯಗಳ ಬಹು ವರ್ಷಗಳ ಬೇಡಿಕೆಯಾದ ಮೀಸಲಾತಿ ಪ್ರಮಾಣವನ್ನು ಎಸ್‌ಸಿ ಶೇ.17, ಎಸ್ಟಿ 7.5ರವರೆಗೆ ಹೆಚ್ಚಳ ಮಾಡಿದೆ. ಎಸ್‌ಸಿ, ಎಸ್ಟಿ ಬಿಪಿಎಲ್ ಗ್ರಾಹಕರಿಗೆ 75 ಯುನಿಟ್‌ ಉಚಿತ ವಿದ್ಯುತ್ ನೀಡಿದೆ ಇದರಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಅನುಕೂಲವಾಗಲಿದೆ’ ಎಂದರು.

    ಅದರಂತೆ, ಆರ್ಥಿಕವಾಗಿ ಹಿಂದುಳಿದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರನ್ನು ಆರ್ಥಿಕವಾಗಿ ಮೇಲೆತ್ತಲು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದ ರಾಜ್ಯ ಸರ್ಕಾರ ಮೊದಲ ಬಾರಿಗೆ ಬೈಕ್ ವಿತರಿಸುವ ಯೋಜನೆ ರೂಪಿಸಿದೆ. ಗಂಗಾ ಕಲ್ಯಾಣ ಯೋಜನೆಯಡಿ 75,000 ರೂ. ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರದ ಈ ಎಲ್ಲ ಯೋಜನೆಗಳ ಸದುಪಯೋಗ  ಪಡೆದುಕೊಂಡು, ಆರ್ಥಿಕವಾಗಿ ಸದೃಢರಾಗಬೇಕು ಎಂದು ಅನೀಲ್ ಮೆಣಸಿನಕಾಯಿ ಹೇಳಿದರು.

    ಈ ಸಂದರ್ಭದಲ್ಲಿ ದ್ಯಾಮಣ್ಣ ನೀಲಗುಂದ, ಬೂದೇಶ ಹಳ್ಳಿ, ಭದ್ರೇಶ ಕುಶಲಾಪುರ, ಚಂದ್ರಶೇಖರ್ ಹರಿಜನ, ರಮೇಶ್ ಸಜ್ಜಗಾರ, ಅಶೋಕ ಕರೂರ, ನಿಂಗಪ್ಪ ಹುಗ್ಗಿ, ಸುಭಾಷ್ ಸುಂಕದ, ಗಣೇಶ ಘಂಟಿ, ಶರಣಪ್ಪ ಕಿತ್ಲಿ, ಶರಣಪ್ಪ ಗದ್ದಿ, ಮಲ್ಲಪ್ಪ ಮುಳಗುಂದ, ಶಿವಪುತ್ರವ್ವ ಹೊನ್ನಳ್ಳಿ, ಮಹಾಲಿಂಗೇಶ ಕಿತ್ತಲಿ, ಶಿವಾಜಿ ಓಲಿ, ಹನಮಂತ ಹೊನ್ನಳ್ಳಿ, ನಾಗಪ್ಪ ಮುಳಗುಂದ, ಯಲ್ಲಪ್ಪ ಶಿವಣ್ಣವರ, ಶರಣಪ್ಪ ಚಿಂಚಲಿ, ಪರಮೇಶ್ ನಾಯಕ್, ಹನಮಂತಪ್ಪ ಅಳವಂಡಿ, ಚನ್ನವೀರಪ್ಪ ನಾಯಕವಾಡಿ, ಶೇಖಪ್ಪ ನಾಯಕವಾಡಿ, ತಿರಕಪ್ಪ ಘಂಟಿ, ಬಸವರಾಜ ಪೂಜಾರ, ಸಿದ್ದಲಿಂಗೇಶ ಗದ್ದಿ, ಮಹಾದೇವಪ್ಪ ಹಡಪದ, ಹನಮಂತಪ್ಪ ಅತ್ತಿಕಟ್ಟಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts