More

    “ನಿಮ್ಮದೊಂದು ರೊಟ್ಟಿ, ನಾನು ಗಟ್ಟಿ’ ಕಾರ್ಯಕ್ರಮಕ್ಕೆ ಚಾಲನೆ

    ಗದಗ: ನಿಮ್ಮ ಒಂದು ರೊಟ್ಟಿ, ನಾನು ಎಂದಿಗೂ ಗಟ್ಟಿ, ನಿಮ್ಮದೊಂದು ರೂ. ನಾಣ್ಯ, ನಾನು ಧನ್ಯ ಎಂಬ ದ್ಯೇಯವಾಕ್ಯದೊಂದಿಗೆ ಗದಗ ತಾಲೂಕಿನ ಸೊರಟೂರು ಗ್ರಾಮದಲ್ಲಿ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ವಿನೂತನ ಪ್ರಚಾರಕ್ಕೆ ಭಾನುವಾರ ಚಾಲನೆ ನೀಡಿದರು.
    ಕೋವಿಡ್​ ಸಂದರ್ಭದಲ್ಲಿ ಮನಕುಲಕ್ಕಾಗಿ ಭಿೆ ಮೂಲಕ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದ ಅನಿಲ ಮೆಣಸಿನಕಾಯಿ ಅವರ ಮತ್ತೊಂದು ನೂತನ ಕಾರ್ಯಕ್ರಮಕ್ಕೆ ಚಾಲೆನೆ ದೊರೆತಿದೆ.
    ಸೊರಟೂರು ಗ್ರಾಮದಲ್ಲಿ ಮನೆ ಮನೆ ಪ್ರಚಾರ ನಡೆಸಿದ ಅವರು ಪ್ರತಿ ಮನೆಯಲ್ಲಿ ಒಂದೊಂದು ರೊಟ್ಟಿ, ಒಂದೂ ರೂ. ನಾಣ್ಯ ಸ್ವೀಕರಿಸಿದರು. ಕೆಲವಡೆ ರೊಟ್ಟಿ, ಕಾಳು ಪಲ್ಲೆ ಊಟವನ್ನು ಸವಿದರು.
    ಮಾಧ್ಯಮದೊಂದಿಗೆ ಮಾತನಾಡಿದ ಅನಿಲ ಮೆಣಸಿನಕಾತಿ, ಎಲ್ಲ ಸಮುದಾಯದವರು ಪ್ರೀತಿ ವಿಶ್ವಾಸದಿಂದ ಬರಮಾಡಿಕೊಂಡಿದ್ದಾರೆ. ಅವರು ಮನೆ ಅಡುಗೆಯಲ್ಲೇ ಒಂದು ರೊಟ್ಟಿ ಬಿಕ್ಷೆ ಕೇಳಿದ್ದೇನೆ. ಈ ಮೊದಲು ಕೋವಿಡ್​ ಸಂದರ್ಭದಲ್ಲಿ ಮನಕುಲಕ್ಕಾಗಿ ಬಿಕ್ಷೆ ಕಾರ್ಯಕ್ರಮ ಹಮ್ಮಿಕೊಂಡಿದ್ದಾಗ ಸೊರಟೂರು ಗ್ರಾಮದ ಜನರು ಆಶಿರ್ವಾದ ಮಾಡಿದ್ದರು ಎಂದು ಸ್ಮರಿಸಿದರು.

    ಕಾಂಗ್ರೆಸ್​ ಮೇಲೆ ಆರೋಪ:
    ಕಾಂಗ್ರೆಸ್​ ಪಕ್ಷ ಹಣದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್​ ಪಕ್ಷದ ಭ್ರಷ್ಟಾಚಾರ ತೊಡೆದು ಹಾಕಬೇಕು. ನಮ್ಮನ್ನು “ಚಿಲ್ಲರೆ’ ಎಂದು ಅಪಮಾನಿಸಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ಬಾವುಟ ಹಿಡಿದು ಎಚ್​ ಕೆ. ಪಾಟೀಲ ಗುದ್ದಲಿ ಪೂಜೆ ಮಾಡುತ್ತಾರೆ. ಇಲ್ಲಿನ ಜನರಿಗೆ ಹಣ ಕೊಟ್ಟು ಮತ ಪಡೆಯುತ್ತಾರೆ. ಶಾಸಕರ ದುರಾಡಳಿತದಿಂದ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿಲ್ಲ ಎಂದು ಆರೋಪಿಸಿದ ಅವರು, ಗದಗ ಕ್ಷೇತ್ರದಲ್ಲಿ ಪುತ್ತಿನಪೆಂಡಿಮಠ ಹಾಗೂ ಶ್ರೀಶೈಲಪ್ಪ ಬಿದರೂರು ಅವರನ್ನು ಹೊರತುಪಡಿಸಿ ಇನ್ನೂಳಿದ ಎಲ್ಲ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಅಧಿಕಾರ ನೀಡಿದ್ದರೂ ಕ್ಷೇತ್ರದಲ್ಲಿ ರಾಜಕಾರಣ ಹೊರತುಪಡಿಸಿ ಅಭಿವೃದ್ಧಿ ಯೋಜನೆಗಳನ್ನು ತರಲಾಗಿದೆ ಎಂದು ಪ್ರಶ್ನಿಸಿದರು.

    ಅವಕಾಶ ಕೊಡಿ:
    ಹಣದ ರಾಜಕಾರಣ ಬಿಟ್ಟು, ಹೊಸ ರೀತಿಯ ಚುನಾವಣೆ ಅಗತ್ಯವಿದೆ. ಆ ದೃಷ್ಟಿಯಲ್ಲಿ ಪ್ರತಿ ಮನೆಯಿಂದ ಒಂದು ರೂ. ನಾಣ್ಯದ ಬಿಕ್ಷೆ ಕಾರ್ಯಕ್ರಮ ಇದಾಗಿದೆ. ಕ್ಷೇತ್ರದ ಜನರು ಈಬಾರಿ ಬಿಜೆಪಿಗೆ ಅವಕಾಶ ನೀಡಲಿದ್ದಾರೆ ಎಂದರು.

    ಇದಕ್ಕೂ ಮೊದಲು ಫಲಪುಷ್ಪಗಳ ಬೃಹತ್​ ಹಾರ ಹಾಕುವ ಮೂಲಕ ಡೊಳ್ಳು ಕುಣಿತ, ಮೇಳಗಳೊಂದಿಗೆ ಅನಿಲ ಮೆಣಸಿನಕಾಯಿ ಅವರನ್ನು ಗ್ರಾಮದ ಜನರು ಬರಮಾಡಿಕೊಂಡರು. ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನ, ಕಾಲಭೈರವ ದೇವಸ್ಥಾನ, ಮೈಲಾರ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಆಶಿರ್ವಾದ ಪಡೆದರು. ಶ್ರೀ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮವನ್ನು ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts