More

    VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ…

    ಚೆನ್ನೈ: ಕಾಲಿವುಡ್​ ಚಿತ್ರರಂಗದ ಉದಯೋನ್ಮುಖ ನಟಿಯಾಗಿ ಮಿಂಚು ಹರಿಸಲು ಸಿದ್ಧವಾಗಿರುವ ಸುಂದರಿ ಅನಿಕಾ ಸುರೇಂದ್ರನ್​, 2007ರಲ್ಲೇ ಮಲಯಾಳಂ ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದರು. ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡ ಅನಿಕಾಗೆ 2014ರಲ್ಲಿ ತೆರೆಕಂಡ ಎನ್ನೈ ಅರಿಂದಾಲ್​ ಚಿತ್ರದಲ್ಲಿ ಕಾಲಿವುಡ್​ ಸೂಪರ್​ಸ್ಟಾರ್​ ಅಜಿತ್​ ಮಗಳಾಗಿ ನಟಿಸುವ ಮೂಲಕ ತುಂಬಾ ಖ್ಯಾತಿ ಗಳಿಸಿದರು.

    VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ...

    ವಿಶ್ವಾಸಂ ಚಿತ್ರದಲ್ಲಿ ಮತ್ತೊಮ್ಮೆ ಅಜಿತ್​ ಮಗಳಾಗಿ ಕಾಣಿಸಿಕೊಳ್ಳುವ ಮೂಲಕ ಭರವಸೆಯ ನಟಿ ಎಂಬ ಹೆಗ್ಗಳಿಕೆಗೂ ಅನಿಕಾ ಪಾತ್ರರಾದರು. ಅಜಿತ್​ ಅಭಿಮಾನಿಗಳ ಬೆಂಬಲ ಪಡೆದಿರುವ ನಟಿಗೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್​ ಇದ್ದಾರೆ. ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಹರಿಬಿಟ್ಟು ಅಭಿಮಾನಿಗಳ ಮನವನ್ನು ತಣಿಸುತ್ತಾರೆ.

    ಇದೇ ವೇಳೆ ಅನಿಕಾರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅನಿಕಾ ಅವರ ನೃತ್ಯ ತುಂಬಾ ಪ್ರಚೋದನಾಕಾರಿಯಾಗಿದೆ ಎಂದು ಟೀಕೆಗಳು ಕೇಳಿಬರುತ್ತಿವೆ. ವಿಡಿಯೋದಲ್ಲಿ ಅನಿಕಾ ಅವರು ಅರ್ಧಬರ್ಧಂ ಬಟ್ಟೆ ತೊಟ್ಟು ಎದೆ ಸೀಳು ಕಾಣುವಂತೆ ಮಾದಕ ನೃತ್ಯ ಮಾಡಿದಂತಿದೆ.

    VIDEO| ಸೋರಿಕೆಯಾದ ಹಾಟ್​ ವಿಡಿಯೋ ಬಗ್ಗೆ ಅನಿಕಾ ಸುರೇಂದ್ರನ್​ ಬೇಸರ: ನಟಿಯ ಸ್ಪಷ್ಟನೆ ಹೀಗಿದೆ...

    ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್​ ಮೂಲಕ ಸ್ಪಷ್ಟನೆ ನೀಡಿರುವ ಅನಿಕಾ, ವಿಡಿಯೋದಲ್ಲಿ ನೃತ್ಯ ಮಾಡಿರುವುದು ನಾನಲ್ಲ. ಅದು ಎಡಿಟ್​ ಮಾಡಿರುವ ವಿಡಿಯೋ ಇರಬಹುದಾಗಿದೆ. ಈ ವಿಡಿಯೋ ತುಂಬಾ ನೋವುಂಟು ಮಾಡಿದೆ. ವಿಡಿಯೋ ಕುರಿತು ಗಂಭೀರವಾಗಿ ಚಿಂತಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇನ್ನು ಅನಿಕಾ ಉದಯೋನ್ಮುಖ ನಟಿಯಾಗಿದ್ದು, ಕಾಲಿವುಡ್​ ಚಿತ್ರರಂಗದಲ್ಲಿ ತುಂಬಾ ಭರವಸೆ ಮೂಡಿಸಿದ್ದಾರೆ. ವಿಜಯ್​ ಸೇತುಪತಿ ಅಭಿನಯದ ಮಮಾನಿಥನ್​ ಚಿತ್ರದಲ್ಲಿ ನಟಿಸಿದ್ದು ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

    (ವಿಡಿಯೋ ಕೃಪೆ: ಅಪ್ಡೇಟ್​ ಬಾಕ್ಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts