More

    ಗದಗ: ಅಂಗನವಾಡಿ ನೌಕರರ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಗದಗ
    ಮುಂಬರುವ ಬಜೆಟ್​ನಲ್ಲಿ ಐಸಿಡಿಎಸ್​ಗೆೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ೂಷಿಸುವಂತೆ ಒತ್ತಾಯಿಸಿ ಸಂಸದ ಕಚೇರಿ ಮುಂಭಾಗದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂ ಜಿಲ್ಲಾ ಸಮಿತಿ ವತಿಯಿಂದ ಮಂಗಳವಾರ ಪ್ರತಿಭಟಿಸಿ ಮನವಿ ಸಲ್ಲಿಸಲಾಯಿತು.
    ಮನವಿ ಸಲ್ಲಿಸಿ ಮಾತನಾಡಿದ ಜಿಲ್ಲಾ ಆಧ್ಯ ಸಾವಿತ್ರಿ ಸಜ್ಜನ, ಕೇಂದ್ರ ಸರ್ಕಾರದ ನವ ಉದಾರೀಕರಣ ನೀತಿಗಳ ಜಾರಿಯ ವೇಗದಲ್ಲಿ ತನ್ನ ನೀತಿಗಳ ಪರಿಕಲ್ಪನೆಯನ್ನು ಬದಲಾಯಿಸುತ್ತಿದೆ. 2021 ರ ಬಜೆಟ್​ನಲ್ಲಿ 8542 ಕೋಟಿ ರೂಗಳನ್ನು ಕಡಿತ ಮಾಡುವ ಮೂಲಕ ಮಕ್ಕಳು ಮತ್ತು ಮಹಿಳೆಯರಿಗಾಗಿ ಕೊಡುವ ಸವಲತ್ತುಗಳಿಗೆ ಕತ್ತರಿ ಹಾಕುತ್ತಿದೆ, ಇದರಿಂದ ದೇಶದ ಕೋಟ್ಯಂತರ ಮಕ್ಕಳು ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.ದೇಶದ ಬಂಡವಾಳಶಾಹಿಗಳಿಗೆ ಮತ್ತು ಕಾಪೋರ್ರೇಟ್​ ಕಂಪನಿಗಳಿಗೆ 14.5 ಲ ಕೋಟಿ ಸಾಲ ಮನ್ನಾ ಮಾಡಿದೆ. ಬಡವರ ಮತ್ತು ಜನ ಸಾಮಾನ್ಯರ ಮೇಲೆ ತೆರಿಗೆ ಹಾಕುವ ಸರ್ಕಾರ ಶ್ರೀಮಂತರ ಮೇಲೆ ಅತ್ಯಧಿಕ ತೆರಿಗೆ ಹಾಕಲಿ ಎಂದು ಹೇಳಿದರು.
    2018 ರಿಂದ ಅಂಗನವಾಡಿ ನೌಕರರಿಗೆ ವೇತನ ಹೆಚ್ಚಳವಾಗಿಲ್ಲ. ಸರ್ಕಾರ ಈ ಕೂಡಲೇ ಈ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ನೌಕರರಿಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
    ಭಾರತೀಯ ಕಾಮಿರ್ಕ ಸಮ್ಮೇಳನ ಶಿಾರಸ್ಸಿನಂತೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ನಿಡಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಣವನ್ನು ಅಂಗನವಾಡಿ ಕೇಂದ್ರದಲ್ಲಿಯೇ ನೀಡುವಂತೆ ಕಡ್ಡಾಯ ಕಾನೂನು ರೂಪಿಸಿಬೇಕು. ಎನ್​ಇಪಿ ನಿಲ್ಲಿಸಬೇಕು. 49 ವರ್ಷಗಳಿಂದ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ, 21 ವರ್ಷಗಳಿಂದ ದುಡಿಯುವ ಬಿಸಿಯೂಟ ನೌಕರರಿಗೆ, ಆಶಾ ಮತ್ತು ಇತರೆ ಸಿಬ್ಬಂದಿಗಳಿಗೆ 31 ಸಾವಿರ ಕನಿಷ್ಠ ವೇತನ, ಕನಿಷ್ಠ 10 ಸಾವಿರ ಪಿಂಚಣಿ ಕೊಡಬೇಕು ಎಂದು ಆಗ್ರಹಿಸಲಾಯಿತು.
    ಸಂಸದರ ಶಿವಕುಮಾರ ಪರವಾಗಿ ಅವರ ಆಪ್ತ ಕಾರ್ಯದಶಿರ್ ಚಂದ್ರ ತಡಸದ ಅವರು ಮನವಿ ಸ್ವೀಕರಿಸಿದರು.
    ಮಹೇಶ ಹಿರೇಮಠ, ಮಾರುತಿ ಚಿಟಗಿ, ಪೀರು ರಾಠೋಡ, ಗಣೇಶ ರಾಠೋಡ, ಶಾರದಾ ರೋಣದ, ಸುವರ್ಣ ಇಂಡಿ, ಗಂಗಮ್ಮ ದ್ಯಾವರಡ್ಡಿ, ಶಾರದಾ ಹಳೆಮನಿ, ನೀಲಮ್ಮ ಹಿರೇಮಠ, ಚಂದ್ರಕಲಾ ಕಬರಳ್ಳಿ, ಮಂಗಲಾ ಪಟ್ಟಣಶೆಟ್ಟಿ, ವಿಜಯಾ ಪಾಟೀಲ, ಶರಣಮ್ಮ ವಾಲಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts