More

    ಆಂಡ್ರಾಯ್ಡ್​ ಫೋನ್ ಬಳಕೆದಾರರೇ ಎಚ್ಚರ! 27 ಬ್ಯಾಂಕ್​ಗಳ ಖಾತೆ ಮಾಹಿತಿಗೆ ಅಪಾಯ

    ಬೆಂಗಳೂರು: ಬಳಕೆಸ್ನೇಹಿ ಎಂಬ ಕಾರಣಕ್ಕೆ ಭಾರತದ ಶೇ.95 ಮೊಬೈಲ್ ಮಾರುಕಟ್ಟೆ ಆವರಿಸಿರುವ ಆಂಡ್ರಾಯ್್ಡ ಸ್ಮಾರ್ಟ್​ಫೋನ್​ಗಳಲ್ಲಿ ಬ್ಯಾಂಕ್ ವಿವರಗಳನ್ನು ಕದಿಯಬಲ್ಲ ಅಪಾಯಕಾರಿ ಡ್ರೖೆನಿಕ್ ವೈರಸ್ ಕಾಣಿಸಿಕೊಂಡಿದೆ. ಆದಾಯ ತೆರಿಗೆ ಹಣ ಹಿಂದಿರುಗಿಸುವ ಸೋಗಿನಲ್ಲಿ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕುಗಳೂ ಸೇರಿ 27 ಬ್ಯಾಂಕ್ ಗ್ರಾಹಕರ ಹಣಕ್ಕೆ ಕನ್ನ ಬೀಳುವ ಅಪಾಯ ಎದುರಾಗಿದ್ದು, ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಕೇಂದ್ರ ಸರ್ಕಾರದ ಸೈಬರ್ ಭದ್ರತಾ ಪಡೆ ‘ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸಿಇಆರ್​ಟಿ-ಇನ್) ಎಚ್ಚರಿಕೆ ನೀಡಿದೆ. ಡ್ರೖೆನಿಕ್ ಎಂಬುದು ಆಂಡ್ರಾಯ್್ಡ ಫೋನ್ ಗುರಿಯಾಗಿಸಿ ಹ್ಯಾಕರ್​ಗಳು ರೂಪಿಸಿರುವ ವೈರಸ್ ಅಥವಾ ಮಾಲ್​ವೇರ್ ಹೆಸರು. ಮಾಲ್​ವೇರ್ ಒಂದು ತಂತ್ರಾಂಶವಾಗಿದ್ದು, ಬಳಕೆದಾರರ ಮೊಬೈಲ್ ಸ್ಕ್ರೀನ್​ನಲ್ಲಿ ನಡೆಯುವ ಚಟುವಟಿಕೆ ದಾಖಲಿಸಿಕೊಳ್ಳುತ್ತದೆ. ಡ್ರೖೆನಿಕ್ ಮಾಲ್​ವೇರ್ 2016ರಲ್ಲೇ ಕಂಡುಬಂದಿತ್ತಾದರೂ ಬ್ಯಾಂಕ್ ವಿವರ ಕದಿಯುತ್ತಿರುವುದು ಈಗಷ್ಟೇ ಖಚಿತವಾಗಿದೆ.

    ಸಂಪೂರ್ಣ ವಿವರಕ್ಕೆ ಕನ್ನ: ಆದಾಯ ತೆರಿಗೆ ಹಣ ಹಿಂದಿರುಗಿ ಸುವ ಆಮಿಷ ಒಡ್ಡಿ ಮೋಸ ಮಾಡುತ್ತದೆ. ಆದಾಯ ತೆರಿಗೆ ಇಲಾಖೆಯಿಂದ ಬಂದಿರುವಂತೆಯೇ ಕಾಣುವ ನಕಲಿ ಎಸ್​ಎಂಎಸ್ ಅನ್ನು ಬಳಕೆದಾರರು ಸ್ವೀಕರಿಸುತ್ತಾರೆ, ಅದರಲ್ಲಿ ವೆಬ್​ಸೈಟ್ ಲಿಂಕ್ ಇರುತ್ತದೆ. ಈ ಲಿಂಕ್ ಆದಾಯ ತೆರಿಗೆ ಇಲಾಖೆಯದ್ದರಂತೆ ಕಂಡುಬಂದರೂ, ಅದು ಮಾಲ್​ವೇರ್ ಅನ್ನು ಮೊಬೈಲ್​ನಲ್ಲಿ ಅನುಸ್ಥಾಪನೆ ಮಾಡುತ್ತದೆ. ಒಮ್ಮೆ ಮೊಬೈಲ್​ನಲ್ಲಿ ಅನುಸ್ಥಾಪನೆ ಆದ ಕೂಡಲೆ, ಬೇರೆ ಆಪ್​ಗಳಂತೆಯೇ ಎಸ್​ಎಂಎಸ್, ಕರೆ ವಿವರ, ಸಂಪರ್ಕ, ಮೆಮೊರಿ ಕಾರ್ಡ್ ಪ್ರವೇಶಕ್ಕೆ ಅನುಮತಿ ಕೋರುತ್ತದೆ. ಹೇಗಿದ್ದರೂ ಸರ್ಕಾರಿ ಆಪ್ ತಾನೆ ಎಂದುಕೊಂಡು ಬಳಕೆದಾರರು ಎಲ್ಲದಲ್ಲೂ ಒಪ್ಪಿಗೆ ನೀಡುತ್ತಾರೆ. ಆದಾಯ ತೆರಿಗೆ ಇಲಾಖೆ ವೆಬ್​ಸೈಟ್ ಪುಟ ಹೋಲುವ ನಕಲಿ ಪುಟ ತೆರೆದುಕೊಳ್ಳುತ್ತದೆ, ಆದಾಯ ತೆರಿಗೆ ಹಣವನ್ನು ನಿಮ್ಮ ಖಾತೆಗೆ ಹಿಂದಿರುಗಿಸಲು ಮಾಹಿತಿ ಸಲ್ಲಿಸುವಂತೆ ಕೋರಲಾಗುತ್ತದೆ. ಈ ಸಮಯದಲ್ಲಿ ಬಳಕೆದಾರರು ತಮ್ಮ ಹೆಸರು, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ, ವಿಳಾಸ, ಜನ್ಮದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ, ಐಎಫ್​ಎಸ್​ಸಿ ಕೋಡ್, ಸಿಐಎಫ್ ಸಂಖ್ಯೆ, ಡೆಬಿಟ್ ಕಾರ್ಡ್ ಸಂಖ್ಯೆ, ಮುಕ್ತಾಯದ ದಿನಾಂಕ, ಸಿವಿವಿ, ಪಿನ್​ಗಳೆಲ್ಲವನ್ನೂ ಬಳಕೆದಾರರಿಂದಲೇ ಪಡೆದುಕೊಳ್ಳುತ್ತಾರೆ.

    ವಂಚಿಸುವ ಸ್ಕ್ರೀನ್​ಗಳು

    ಬಳಕೆದಾರರು ತಮ್ಮೆಲ್ಲ ವಿವರ ನಮೂದಿಸಿ, ‘ಹಣ ವರ್ಗಾವಣೆ’ ಎಂಬಲ್ಲಿ ಕ್ಲಿಕ್ ಮಾಡುತ್ತಿ ದ್ದಂತೆಯೇ ‘ತಾಂತ್ರಿಕ ತೊಂದರೆ’ ಎಂಬ ಸುಳ್ಳು ಸಂದೇಶ ಮೂಡುತ್ತದೆ. ಮತ್ತೆ ಸರಿ ಯಾದ ಸ್ಕ್ರೀನ್ ಮೂಡುವಷ್ಟರಲ್ಲಿ ಈ ಎಲ್ಲ ಮಾಹಿತಿಯನ್ನೂ ಮಾಲ್​ವೇರ್ ಮೂಲಕ ಹ್ಯಾಕರ್​ಗಳು ಪಡೆದುಕೊಳ್ಳುತ್ತಾರೆ. ಬಳಕೆ ದಾರರ ಬ್ಯಾಂಕ್​ನದ್ದೇ ಎಂಬಂತೆ ಕಾಣುವ ಮತ್ತೊಂದು ನಕಲಿ ಸ್ಕ್ರೀನ್ ತೆರೆದುಕೊಂಡು, ಖಾತೆಗಳ ಮಾಹಿತಿ ನಮೂದಿಸುವಂತೆ ಕೇಳುತ್ತದೆ. ಈ ಎಲ್ಲ ಮಾಹಿತಿಗಳನ್ನೂ ಬಳಸಿಕೊಂಡು ಬಳಕೆದಾರರ ಖಾತೆಯಲ್ಲಿರುವ ಹಣವನ್ನು ಲಪಟಾಯಿಸಲಾಗುತ್ತದೆ ಎಂದು ಸಿಇಆರ್​ಟಿ-ಇನ್ ಎಚ್ಚರಿಕೆ ನೀಡಿದೆ.

    ಸುರಕ್ಷಿತ ಕ್ರಮ ಹೇಗೆ?

    1. ತಿಳಿಯದ ಮೂಲದಿಂದ ಡೌನ್​ಲೋಡ್ ನಿಷ್ಕ್ರಿಯ: ಮೊಬೈಲ್​ನಲ್ಲಿ ಆಪ್ ಅನುಸ್ಥಾಪಿಸಲು ಮೂರು ಮಾರ್ಗಗಳಿವೆ. ಮೊದಲನೆಯದು ಆಂಡ್ರಾಯ್್ಡ ಆಪ್​ಗಳು ದೊರಕುವ ಗೂಗಲ್ ಪ್ಲೇಸ್ಟೋರ್, ಎರಡನೆಯದ್ದು ಮೊಬೈಲ್ ಉತ್ಪಾದಕ ಸಂಸ್ಥೆಯ ಆಪ್​ಸ್ಟೋರ್. ಇವೆರಡರಲ್ಲೂ ಆಪ್​ಗಳನ್ನು ಪ್ರದರ್ಶಿಸುವಾಗ ಸಾಕಷ್ಟು ಪ್ರಮಾಣದಲ್ಲಿ ಸುರಕ್ಷತಾ ಕ್ರಮ ವಹಿಸಲಾಗುತ್ತದೆ. ಆದರೆ ಮಾಲ್​ವೇರ್​ಗಳು ನೇರವಾಗಿ ಖಾಸಗಿ ವೆಬ್​ಸೈಟ್ ಲಿಂಕ್ ಮೂಲಕ ಅನುಸ್ಥಾಪನೆ ಆಗುತ್ತವೆ. ತಿಳಿಯದ ಮೂಲದಿಂದ (ಖ್ಞಿkಟಡ್ಞಿ ಠಟ್ಠrಛಿಠ) ಆಪ್ ಅನುಸ್ಥಾಪಿಸುವುದನ್ನು ನಿಷ್ಕ್ರಿಯಗೊಳಿಸಿದರೆ ಇಂತಹ ಆಪ್ ಅಪಾಯ ಮಾಡುವುದಿಲ್ಲ.

    2. ಆಪ್ ಮಾಹಿತಿ ನೋಡಿ: ಗೂಗಲ್ ಪ್ಲೇಸ್ಟೋರ್​ನಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಇದ್ದರೂ ಅಲ್ಲಿರುವ ಎಲ್ಲ ಆಪ್​ಗಳೂ ಸುರಕ್ಷಿತವಲ್ಲ. ಯಾವುದೇ ಮೂಲದಿಂದ ಆಪ್ ಅಳವಡಿಸಿಕೊಳ್ಳುವ ಮುನ್ನ ಅದರ ಸಂಪೂರ್ಣ ವಿವರ, ಕಂಪನಿಯ ಹೆಸರು, ಡೌನ್​ಲೋಡ್ ಮಾಡಲಾಗಿರುವ ಸಂಖ್ಯೆ, ಬಳಕೆದಾರರ ಪ್ರತಿಕ್ರಿಯೆ ಓದಿ. ಇದರಿಂದ, ಆಪ್ ಕುರಿತು ಅಭಿಪ್ರಾಯ ಸ್ಪಷ್ಟವಾಗುತ್ತದೆ.

    3. ಅನುಮತಿ ಪರಿಶೀಲಿಸಿ: ಆಪ್ ಅನುಸ್ಥಾಪನೆ ಮಾಡಿದ ನಂತರ, ಎಸ್​ಎಂಎಸ್, ಸಂಪರ್ಕ, ಮೆಮೊರಿ ಕಾರ್ಡ್ ಪ್ರವೇಶದಂತಹ ಅನೇಕ ಅನುಮತಿಗಳನ್ನು ಕೇಳುತ್ತದೆ. ಇವುಗಳಲ್ಲಿ, ಆಪ್​ಗೆ ಸಂಬಂಧಿಸಿದ ಅನುಮತಿಗಳನ್ನು ಮಾತ್ರವೇ ನೀಡಿ. ಉದಾಹರಣೆಗೆ, ಕ್ಯಾಮರಾ ಆಪ್ ಇದ್ದರೆ ಅದಕ್ಕೆ ಮೆಮೊರಿ ಕಾರ್ಡ್ ಅನುಮತಿ ನೀಡಿದರೆ ಸಾಕು. ಹಾಗೇನಾದರೂ ಅದು ಎಸ್​ಎಂಎಸ್ ಓದಲು ಅನುಮತಿ ಕೇಳಿದರೆ ಅಪಾಯ ಇರಬಹುದು. ಸಂಗೀತ ಕೇಳುವ ಆಪ್​ಗೆ ಮೆಮೊರಿ ಕಾರ್ಡ್ ಪ್ರವೇಶ ಸಾಕಾಗುತ್ತದೆಯಾದರೂ, ಅದೇನಾದರೂ ಇಮೇಲ್ ಓದಲು ಅನುಮತಿ ಕೇಳಿದರೆ ಅನುಮಾನ ಮೂಡಬೇಕು. ಅಂತಹ ಅನುಮತಿ ನೀಡದಿದ್ದರೆ ಆಪ್ ಕೆಲಸ ಮಾಡುವುದಿಲ್ಲ ಎಂದಾದರೆ ಅಂತಹ ಆಪ್​ಅನ್ನು ಕಿತ್ತೊಗೆಯಬೇಕು.

    4. ಪ್ರತಿಷ್ಠಿತ ಸಂಸ್ಥೆಗಳ ಆಪ್: ದೇಶ, ವಿದೇಶಗಳಲ್ಲಿ ಪ್ರಸಿದ್ಧಿಯಾಗಿರುವ ಕಂಪನಿಗಳ ಆಪ್ ಬಳಕೆ ಹೆಚ್ಚು ಸುರಕ್ಷಿತ. ಉದಾಹರಣೆಗೆ ಗೂಗಲ್, ಅಡೋಬ್, ಮೈಕ್ರೋಸಾಫ್ಟ್​ನಂತಹ ಸಂಸ್ಥೆಗಳ ಆಪ್ ಬಳಸು ವುದು ಸಂಪೂರ್ಣವಲ್ಲದಿದ್ದರೂ ಬಹಳಷ್ಟು ಸುರಕ್ಷಿತ.

    5. ಎಸ್​ಎಂಎಸ್ ಲಿಂಕ್ ಕ್ಲಿಕ್ ಬೇಡ: ಯಾವುದೇ ಎಸ್​ಎಂಎಸ್ ಬಂದ ಕೂಡಲೆ ಅದರಲ್ಲಿ ನೀಲಿ ಬಣ್ಣದಲ್ಲಿ ಕಾಣುವ ವೆಬ್​ಸೈಟ್ ಲಿಂಕ್ ಇದ್ದರೆ ಅದನ್ನು ಕ್ಲಿಕ್ ಮಾಡಬೇಡಿ. ಅದು ಬಹುಶಃ ಮಾಲ್​ವೇರ್ ವೆಬ್​ಸೈಟ್ ಲಿಂಕ್ ಆಗಿರಬಹುದು. ತುಂಡರಿಸಿದ ವೆಬ್​ಸೈಟ್ ವಿಳಾಸಗಳಿಂದ (ಶಾರ್ಟ್ ಯುಆರ್​ಎಲ್) ಅಪಾಯ ಹೆಚ್ಚು, ಏಕೆಂದರೆ ಅದರಲ್ಲಿ ಪೂರ್ಣ ವಿವರ ಕಾಣುವುದಿಲ್ಲ. ಕಂಪ್ಯೂಟರ್ ಬಳಕೆದಾರರಾದರೆ ಅಂತಹ ತುಂಡರಿಸಿದ ವಿಳಾಸಗಳ ಮೇಲೆ ಮೌಸ್ ಕರ್ಸರನ್ನು ಹಿಡಿದರೆ ಅದರ ಪೂರ್ಣ ವಿಳಾಸ ಕಾಣುತ್ತದೆ. ಆಗ ಕ್ಲಿಕ್ ಮಾಡುವ ಬಗ್ಗೆ ನಿರ್ಧಾರ ಮಾಡಬಹುದು.

    6. ಒಟಿಪಿ, ಸಿವಿವಿ ನೀಡಲೇಬೇಡಿ: ಯಾವುದೇ ವಾಣಿಜ್ಯ ಬ್ಯಾಂಕುಗಳೂ ದೂರವಾಣಿ ಅಥವಾ ವೆಬ್​ಸೈಟ್ ಮೂಲಕ ಸಂರ್ಪಸಿ ಬಳಕೆದಾರರ ಸಿವಿವಿ, ಖಾತೆ ವಿವರ ಹಾಗೂ ಒಟಿಪಿಯನ್ನು ಕೇಳುವುದಿಲ್ಲ. ಇಂತಹ ಮಾಹಿತಿ ಕೇಳಿದರೆ ಮನವಿಯನ್ನು ತಿರಸ್ಕರಿಸಿ.

    7. ಆಂಡ್ರಾಯ್್ಡ ಅಥವಾ ಫೋನ್ ಉತ್ಪಾದಕರಿಂದ ಆಗಿಂದಾಗ್ಗೆ ನಿಡಲಾಗುವ ಅಪ್​ಡೇಟ್​ಗಳನ್ನು ಮಾಡಿಕೊಳ್ಳುವುದು ಸುರಕ್ಷಿತ

    8. ಮೊಬೈಲ್ ಆಂಟಿವೈರಸ್ ಅಳವಡಿಸಿಕೊಳ್ಳಿ, ಆಗಿಂದಾಗ್ಗೆ ಅಪ್​ಡೇಟ್ ಮಾಡುತ್ತಿರಬೇಕು.

    9. ತಮ್ಮ ಖಾತೆಯಲ್ಲಿ ಯಾವುದೇ ಅನುಮಾನಾಸ್ಪದ ವಹಿವಾಟು ನಡೆದಿರುವುದು ಕಂಡುಬಂದರೆ ಕೂಡಲೇ ಬ್ಯಾಂಕ್​ಗೆ ಮಾಹಿತಿ ನೀಡಬೇಕು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts