More

    ಅನಾಥ ಶವ ಹೊತ್ತು 2 ಕಿ.ಮೀ ನಡೆದು ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಮಹಿಳಾ ಪಿಎಸ್​ವೈ!

    ಶ್ರೀಕಾಕುಳಂ: ಜನರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಕಷ್ಟಕ್ಕೆ ನಿಲ್ಲುವಂತಹ ಅಧಿಕಾರಿಗಳು ಸಿಗುವುದು ತುಂಬಾ ವಿರಳ. ಸರ್ಕಾರಿ ಕಚೇರಿಗೆ ಹೋದರು ಸಾಕು ಜನರೊಂದಿಗೆ ತಾಳ್ಮೆಯಿಂದ ಮಾತನಾಡದೇ ಮುಖ ತಿರುಗಿಸುವವರೇ ಹೆಚ್ಚು. ಇನ್ನು ಪೊಲೀಸ್​ ಇಲಾಖೆ ಮೇಲಿನ ಜನರ ನಂಬಿಕೆ ಅಷ್ಟಕಷ್ಟೇ. ಪೊಲೀಸರೆಂದರೆ ಜನರ ಬಳಿ ಕಿತ್ತು ತಿನ್ನವವರೇ ಹೊರತು ಜನರ ಸಹಾಯಕ್ಕಾಗಿ ಬರುವವರಲ್ಲ ಎಂಬ ಅಭಿಪ್ರಾಯವಿದೆ. ಆದರೆ, ಈ ಅಭಿಪ್ರಾಯಕ್ಕೆ ಆಂಧ್ರ ಪ್ರದೇಶದ ಶ್ರೀಕಾಕುಳಂ ಮಹಿಳಾ ಪಿಎಸ್​ಐ ತದ್ವಿರುದ್ಧವಾಗಿದ್ದಾರೆ.

    ಹೌದು. ಹೆಣಕ್ಕೆ ಹೆಗಲು ಕೊಡಲು ಸಂಬಂಧಿಕರೇ ಹಿಂದು-ಮುಂದು ನೋಡುವ ಕಾಲದಲ್ಲಿ ಅನಾಥ ಹೆಣಕ್ಕೆ ಹೆಗಲು ಕೊಟ್ಟು ಅದರ ಅಂತ್ಯಕ್ರಿಯೆ ನೇರವೇರಿಸುವ ಮೂಲಕ ಆಂಧ್ರದ ಶ್ರೀಕಾಕುಳಂ ಜಿಲ್ಲೆಯ ಕಾಸಿಬುಗ್ಗ ಪೊಲೀಸ್​ ಠಾಣೆಯ ಮಹಿಳಾ ಪಿಎಸ್​ಐ ಕೆ. ಸಿರಿಶಾ ಎಲ್ಲರಿಗೂ ಮಾದರಿಯಾಗಿದ್ದಾರೆ. ಸುಮಾರು 2 ಕಿ.ಮೀ ವರೆಗೆ ಇತರೆ ಇಬ್ಬರು ವ್ಯಕ್ತಿಗಳೊಂದಿಗೆ ಸೇರಿ, ಅಪರಿಚಿತ ವ್ಯಕ್ತಿಯ ಶವವನ್ನು ಹೊತ್ತು ನಡೆದು ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ಇದನ್ನೂ ಓದಿರಿ: ಇನ್ನೊಂದು ಮೀನಿನ ಆಸೆಗೆ ಒಂದನೆಯದ್ದನ್ನು ಬಾಯಲ್ಲಿಟ್ಟುಕೊಂಡ… ಮುಂದೇನಾಯ್ತು ಈ ವಿಡಿಯೋ ನೋಡಿ

    ಈ ಘಟನೆ ಸೋಮವಾರ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಕ್ಷಾಂತರ ಜನರ ಮನವನ್ನು ಸಿರಿಶಾ ಗೆದ್ದಿದ್ದಾರೆ. ಅಡವಿ ಕೊಥುರ್​ ಬಳಿ ಅಪರಿಚಿತ ವ್ಯಕ್ತಿಯ ಶವ ಇರುವ ಮಾಹಿತಿ ಸಿರಿಶಾತಿಗೆ ತಿಳಿಯುತ್ತದೆ. ತಕ್ಷಣ ಆ ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅಪರಿಚಿತ ವ್ಯಕ್ತಿ ಭಿಕ್ಷುಕನಾಗಿದ್ದು, ಅನಾರೋಗ್ಯದಿಂದಾಗಿ ರಸ್ತೆ ಬದಿಯಲ್ಲಿ ಸತ್ತು ಬಿದ್ದಿರುವುದನ್ನು ಸಿರಿಶಾ ಗಮನಿಸುತ್ತಾರೆ.

    ಅನೇಕ ಸಮಯದವರೆಗೆ ಶವ ಅಲ್ಲಿಯೇ ಬಿದ್ದಿದ್ದರೂ ಯಾರು ಸಹ ಅದನ್ನು ತೆಗೆಯುವ ಮನಸ್ಸು ಮಾಡಿರಲಿಲ್ಲ. ಸ್ಥಳೀಯರು ಸಹ ನಿರಾಕರಿಸಿದ್ದರು. ಆದರೆ, ಸಿರಿಶಾ ಅವರೇ ಸ್ವತಃ ಮುಂದೆ ಬಂದು ಕೆಲ ಸ್ಥಳೀಯರ ಜತೆಗೂಡಿ ಮೃತದೇಹಕ್ಕೆ ಹೆಗಲು ಕೊಟ್ಟು ಲಲಿತಾ ಚಾರಿಟಬಲ್​ ಟ್ರಸ್ಟ್​ ಸಹಕಾರದೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

    ಆಂಧ್ರದ ಡಿಜಿಪಿ ಗೌತಮ್​ ಸಾವಂಗ್​ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಸಿರಿಶಾ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಮಹಿಳಾ ಪಿಎಸ್​ಐ ಮಾನವೀಯತೆಯ ರಾಯಭಾರಿ ಎಂದು ಬಣ್ಣಿಸುತ್ತಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿರಿ: ಕೈ ಕೊಟ್ಟ ಪ್ರೇಯಸಿಯ ಬರ್ತ್​ ಡೇ ಪಾರ್ಟಿಗೆ ಮಾಜಿ ಲವರ್ ಎಂಟ್ರಿ! ನೋಡನೋಡುತ್ತಿದ್ದಂತೆ ನಡೆಯಿತು ದುರಂತ

    ಮುಗ್ಧ ತಮ್ಮನ ಹೆಂಡತಿ ಮೇಲೆ ಬಿತ್ತು ಅಣ್ಣನ ಕಾಮದೃಷ್ಟಿ: ನಡದೇ ಹೋಯ್ತು ದುರಂತ ಘಟನೆ!

    ಪೋಲಿಯೋ ಡ್ರಾಪ್ಸ್​ ಬದಲು ಸ್ಯಾನಿಟೈಸರ್​: ಕಂದಮ್ಮಗಳ ಪ್ರಾಣದ ಜತೆ ಆರೋಗ್ಯ ಸಿಬ್ಬಂದಿ ಚೆಲ್ಲಾಟ

    ತೂಕದಲ್ಲಿ ಅಜಗಜಾಂತರ ವ್ಯತ್ಯಾಸವಿರುವ ಇವರಿಬ್ಬರ ಲವ್​ ಸ್ಟೋರಿ ತುಂಬಾ ಡಿಫರೆಂಟ್..!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts