More

    ಆಂಧ್ರಪ್ರದೇಶದಲ್ಲಿ ನವೆಂಬರ್ 2 ರಿಂದಲೇ ಶಾಲೆ ಶುರು ಮಾಡ್ತಾರಂತೆ

    ಹೈದರಾಬಾದ್​: ಕರೊನಾ ಸೋಂಕು ಇನ್ನೂ ಸಂಪೂರ್ಣ ನಿರ್ನಾಮವಾಗಿಲ್ಲ. ಅದಕ್ಕೂ ಮೊದಲೇ ಶಾಲೆ ತೆರೆಯುವ ವಿಚಾರ ಮಾತನಾಡಿದ್ದಾರೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ. ನವೆಂಬರ್ 2ರಿಂದಲೇ 1 ರಿಂದ 12ನೇ ತರಗತಿಯ ಶಾಲಾ- ಕಾಲೇಜುಗಳು ಶುರುವಾಗಲಿವೆ ಎಂದು ಅವರು ಘೋಷಿಸಿದ್ದಾರೆ.

    ಪರ್ಯಾಯ ದಿನದ ಆಧಾರದಲ್ಲಿ ಶಾಲೆ ನಡೆಸಲಾಗುವುದು. 1, 3, 5, 7ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ದಿನ ಶಾಲೆ ನಡೆದರೆ. ಇನ್ನೊಂದು ದಿನ 2, 4, 6, 8ನೇ ತರಗತಿ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. 750ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಾಲೆಗಳಲ್ಲಿ ಮೂರು ದಿನಕ್ಕೆ ಒಂದಾವರ್ತಿ ತರಗತಿ ನಡೆಸಲು ಸೂಚಿಸಲಾಗಿದೆ.

    ಇದನ್ನೂ ಓದಿ: ಕರಾಚಿಯಲ್ಲಿ ಸ್ಪೋಟಕ್ಕೆ 5 ಬಲಿ: ಸಿವಿಲ್ ವಾರ್ ಸೇರಿ ಹಲವು ಸಂದೇಹ, ವದಂತಿಗಳು

    ತರಗತಿಗೆ ಹಾಜರಾಗಲು ಬಯಸದ ವಿದ್ಯಾರ್ಥಿಗಳು ಆನ್​ಲೈನ್ ಮೂಲಕವೂ ಶಿಕ್ಷಣ ಪಡೆಯಬಹುದು. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶಾಲೆ ನಡೆಯಲಿದ್ದು, ಮಧ್ಯಾಹ್ನದ ಬಿಸಿಯೂಟದ ನಂತರ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸುವಂತೆ ಸೂಚಿಸಲಾಗಿದೆ. ಪ್ರತಿಯೊಂದು ಶಾಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ 9ರಿಂದ 12ನೇ ತರಗತಿಗಳು ಭಾಗಶಃ ತೆರೆಯಲಾಗಿತ್ತು. (ಏಜೆನ್ಸೀಸ್)

    ನವರಾತ್ರಿ ಉತ್ಸವ: ದುರ್ಗಾ ಪೆಂಡಾಲ್​ಗೆ ನಿಯಮ ಸಡಿಲಿಸಿದ ಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts