More

    ಸಿಎಂ ಮೇಲಿನ ಅಭಿಮಾನಕ್ಕಾಗಿ ದೇವಸ್ಥಾನವನ್ನೇ ನಿರ್ಮಿಸಿದ ಆಂಧ್ರ ಶಾಸಕ

    ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿಯವರ ಭವ್ಯವಾದ ದೇವಸ್ಥಾನ ಕಟ್ಟುವ ಮೂಲಕ ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಶಾಸಕನೋರ್ವ ಸಿಎಂ ಮೇಲಿರುವ ತಮ್ಮ ಅಭಿಮಾನ ತೋರಿಸಿದ್ದಾರೆ.

    ವೈಎಸ್‌ಆರ್‌ಪಿಸಿಯ ಚಿತ್ತೂರು ಜಿಲ್ಲೆ ಶಾಸಕ ಬಿ. ಮಧುಸೂಧನ್ ರೆಡ್ಡಿ ತಮ್ಮ ಅಭಿಮಾನ ಮತ್ತು ಸರ್ಕಾರದ ಯೋಜನೆ ಬಗ್ಗೆ ಜಾಗೃತಿ ಮೂಡಿಸಲು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಾಲಯವನ್ನು ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ತಜ್ಞರು ವಿನ್ಯಾಸಗೊಳಿಸಿರುವುದಾಗಿ ಹೇಳಿದ್ದಾರೆ.

    ಚಿತ್ತೂರು ಜಿಲ್ಲೆಯ ಶ್ರೀಕಳಹಸ್ತಿ ಪಟ್ಟಣದಲ್ಲಿ ಆಂಧ್ರಪ್ರದೇಶ ಸರ್ಕಾರದ ಯೋಜನೆಯಡಿಯಲ್ಲಿ ನಿರ್ಮಿಸಲಾದ ‘ನವರತ್ನಲು’ ದೇವಾಲಯವನ್ನು ಉದ್ಘಾಟಿಸಿದ್ದಾರೆ. ‘ಜಗನಣ್ಣ ನಾರತ್ನಳ ನಿಲಯಂ’ ಎಂದು ಕರೆಯಲ್ಪಡುವ ದೇವಾಲಯದಲ್ಲಿ 9 ಸ್ತಂಭಗಳಿವೆ. ಇದು ರಾಜ್ಯ ಸರ್ಕಾರವು ಜಾರಿಗೊಳಿಸುತ್ತಿರುವ ಒಂಬತ್ತು ಕಲ್ಯಾಣ ಯೋಜನೆಗಳನ್ನು ಸೂಚಿಸುತ್ತದೆ. ಈ ಕುರಿತಂತೆ ಬಿ. ಮಧುಸೂಧನ್ ರೆಡ್ಡಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದೇವಾಲಯದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

    ಮನೆಯ ಮೇಲ್ಭಾಗದ ಮಿರರ್ ಹಾಲ್‍ನಲ್ಲಿ ಜಗನ್ ಮೋಹನ್ ರೆಡ್ಡಿಯವರ ಪ್ರತಿಮೆ ಹಾಗೂ ಫೋಟೋಗಳನ್ನು ಇಡಲಾಗಿದೆ. ಕೇಂದ್ರ ಫಲಕವನ್ನು ಆಂಧ್ರಪ್ರದೇಶದ ನಕ್ಷೆಯೊಂದಿಗೆ ಕೆತ್ತಲಾಗಿದೆ. ಜೊತೆಗೆ ಜಗನ್, ವೈಎಸ್‌ಆರ್‌ಪಿಸಿಯ ಧ್ವಜ ಮತ್ತು ಪಕ್ಷದ ಚಿಹ್ನೆ ನವ ರತ್ನಗಳನ್ನು ಬೆಳ್ಳಿ ಹಾಗೂ ಚಿನ್ನದಿಂದ ಮಾಡಲ್ಪಟ್ಟಿದೆ. ದೇವಾಲಯಕ್ಕೆ ಭೇಟಿ ನೀಡುವವರಿಗೆ ಜಗನ್ ಮೋಹನ್ ರೆಡ್ಡಿ ಮಾಡಿದ ಕಲ್ಯಾಣ ಯೋಜನೆಗಳ ತಿಳಿಸುವ ಪುಸ್ತಕವನ್ನು ನೀಡಲಾಗುತ್ತದೆ ಎಂದಿದ್ದಾರೆ. ದೇವಾಲಯದ ಒಟ್ಟು ವೆಚ್ಚ 2 ಕೋಟಿ ರೂ. ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts