More

    ಪುರಾತನ ದೇವಾಲಯ ಸಂರಕ್ಷಿಸಿ: ಕೊಮಾರನಹಳ್ಳಿಯಲ್ಲಿ ಡಾ.ಜಯರಾಮಯ್ಯ ಹೇಳಿಕೆ

    ಮಲೇಬೆನ್ನೂರು: ಪ್ರಾಚೀನ ಪರಂಪರೆ ಸಾರುವ, ಅವಸಾನದ ಅಂಚಿನಲ್ಲಿರುವ ಪುರಾತನ ದೇವಾಲಯಗಳ ಕುರಿತಾಗಿ ಪುಸ್ತಕ ಬರೆಯುವುದು ಕಷ್ಟದ ಕೆಲಸ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕ ಡಾ.ವಿ.ಜಯರಾಮಯ್ಯ ಹೇಳಿದರು.

    ಸಮೀಪದ ಕೊಮಾರನಹಳ್ಳಿ ರಂಗನಾಥಾಶ್ರಮದಲ್ಲಿ ಶನಿವಾರ ಚಕ್ರಪಾಣಿ ಅವರ ’ಶಿಲ್ಪಕಲಾ ದೇವಾಲಯಕ್ಕೆ ದಾರಿ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ದೇಗುಲಗಳ ರಕ್ಷಣೆಗೆ ಎಲ್ಲರ ಶ್ರಮಿಸಬೇಕು ಎಂದರು.

    ಶ್ರೀನಿವಾಸಮೂರ್ತಿ ಅವರ ‘ದೇಗುಲಗಳ ದಾರಿ‘ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಕುಂದೂರು ರಂಗನಾಥರಾವ್, ದೇವಾಲಯ ಕುರಿತ ಹೊತ್ತಿಗೆ ಹೆಚ್ಚು ಉಪಯುಕ್ತವಾಗಿದೆ ಎಂದು ಹೇಳಿದರು.

    ಸಾಹಿತ್ಯ ಪ್ರೇಮಿ ಎಲೆಬೇತೂರು ಬಸವರಾಜ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಿಂತಾಮಣಿ ಕೊಡ್ಲೆಕೆರೆ, ದೂರವಾಣಿ ಇಲಾಖೆ ನಿವೃತ್ತ ಸಹಾಯಕ ಮಹಾ ಪ್ರಬಂಧಕ ಗಣಪತಿ ಭಟ್, ಸಾಹಿತಿ ಸುಶೀಲಾದೇವಿ, ಸತೀಶ್, ಸುಧಾ ರಾಜೇಂದ್ರ ಹಂಪಿ, ಷಡಕ್ಷರಪ್ಪ, ಅನೂಪ್, ಜನಾರ್ಧನ್, ಚಂದ್ರಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts