More

    ಸಿಎಂ ನಿವಾಸಕ್ಕೆ ಸಚಿವ ಆನಂದ್ ಸಿಂಗ್, ಶಾಸಕ ಸತೀಶ್ ರೆಡ್ಡಿ ದೌಡು! ಬೊಮ್ಮಾಯಿ ಹೇಳಿದ್ದೇನು?

    ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಆರ್.ಟಿ.ನಗರದ ನಿವಾಸಕ್ಕೆ ಸಚಿವ ಆನಂದ್ ಸಿಂಗ್, ಕುಟುಂಬಸಮೇತವಾಗಿ, ಭಾನುವಾರ ಬೆಳ್ಳಂಬೆಳಗ್ಗೆ ದೌಡಾಯಿಸಿದ್ದರು. ಶನಿವಾರ ತಮಗೆ ಹಂಚಿಕೆಯಾದ ಖಾತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಿಂಗ್​, ಮುಖ್ಯಮಂತ್ರಿಗೆ ಭೇಟಿಯಾಗಿ ಖಾತೆ ಬದಲಾವಣೆ ಬೇಡಿಕೆ ಮಂಡಿಸುವೆ. ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳುವೆ ಎಂದು ಬಹಿರಂಗವಾಗಿ ಗುಡುಗಿದ್ದರು.

    ಇಂದು ಸಿಂಗ್​ ಅವರು ಸಿಎಂ ಬೊಮ್ಮಾಯಿ‌ ಅವರೊಂದಿಗೆ ಮಾತುಕತೆ ನಡೆಸಿ ಖಾತೆ ಬದಲಾವಣೆ ಬೇಡಿಕೆ ಪ್ರಸ್ತಾಪಿಸಿದರು. ವರಿಷ್ಠರ ಸಲಹೆ-ಸೂಚನೆ ಪ್ರಕಾರ ಖಾತೆ ಹಂಚಿಕೆಯಾಗಿವೆ ಎಂದು ಬೊಮ್ಮಾಯಿ‌ ದೆಹಲಿ ಕಡೆಗೆ ಬೊಟ್ಟು ತೋರಿಸಿದರು ಎಂದು ಮೂಲಗಳು ತಿಳಿಸಿವೆ. ನಂತರ ಬೊಮ್ಮಾಯಿ‌ ಯಾವ ರೀತಿ ಭರವಸೆ ನೀಡಿದರು ಎಂಬ ಮಾಹಿತಿಯಿಲ್ಲ. ಆದರೆ ಬೊಮ್ಮಾಯಿ‌ ನಿವಾಸದಿಂದ ಹೊರ ಬಂದ ಆನಂದ್ ಸಿಂಗ್ ಅವರು ಮಾಧ್ಯಮದವರತ್ತ ನೋಡಿಯೂ ನೋಡದವರಂತೆ ತೆರಳಿದ್ದು, ಅನುಕೂಲಕರ ಉತ್ತರ ಸಿಕ್ಕಿಲ್ಲವೆಂದು ಅಂದಾಜಿಸಲಾಗುತ್ತಿದೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, “ಸಚಿವ ಆನಂದ್ ಸಿಂಗ್ ತಮ್ಮ ಭಾವನೆಗಳನ್ನು ಹೇಳಿಕೊಂಡಿದ್ದಾರೆ. ಅವರನ್ನು ನಾನೇ ಕರೆದು ಮಾತನಾಡಿದ್ದೇನೆ. ಅವರ ಭಾವನೆ ಗೌರವಿಸುವುದಾಗಿ ತಿಳಿಸಿದ್ದೇನೆ” ಎಂದಿದ್ದಾರೆ.

    ಇದನ್ನೂ ಓದಿ: ರೈತರ ಮಕ್ಕಳಿಗೆ ಸರ್ಕಾರದಿಂದ ಭರಪೂರ ಶಿಷ್ಯವೇತನ: ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ.

    ಸಿಂಗ್ ಅತ್ತ ಹೋದ ಬಳಿಕ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಧಾವಿಸಿ, ರೆಡ್ಡಿ ಸಮುದಾಯಕ್ಕೆ ಸಚಿವ ಸ್ಥಾನ ನೀಡಬೇಕೆಂದು ಮನವಿ ಮಾಡಿದ್ದಾರೆ. ಈ ವಿಚಾರದಲ್ಲಿ ವರಿಷ್ಠರ ಜತೆಗೆ ಚರ್ಚಿಸುವೆ ಎಂದು ಬೊಮ್ಮಾಯಿ‌ ಭರವಸೆ ನೀಡಿದರು ಎನ್ನಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸತೀಶ್ ರೆಡ್ಡಿ, “1993 ರಿಂದ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಅವಕಾಶ ಕೊಡುವಂತೆ ಮನವಿ ಮಾಡಿದ್ದೇನೆ. ಸಿಎಂ ಸಹ ಭರವಸೆ ನೀಡಿದ್ದಾರೆ. ಆಶಾದಾಯಕವಾಗಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.

    ಖಾಲಿ ಇರುವ ನಾಲ್ಕು ಸಚಿವ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಪ್ರಾತಿನಿಧ್ಯವಂಚಿತ ರೆಡ್ಡಿ ಸಮುದಾಯಕ್ಕೆ ನೀಡಬೇಕೆಂದು ಒತ್ತಾಯಿಸಿ ಸಮುದಾಯದ ಜನರು ಶನಿವಾರ ಪ್ರತಿಭಟನೆ ನಡೆಸಿದ್ದರು. ಚಿತ್ರದುರ್ಗ ಜಿಲ್ಲೆಯ ಹಿರಿಯ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಥವಾ ಬೊಮ್ಮನಹಳ್ಳಿ ಸತೀಶ್ ರೆಡ್ಡಿ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕೆಂದು ಮುಖ್ಯಮಂತ್ರಿಗೆ ಪ್ರತಿಭಟನಾಕಾರರು ಮನವಿ ಮಾಡಿದ್ದರು.

    VIDEO | ಚಿನ್ನ ಗೆದ್ದ ನೀರಜ್​​ ಚೋಪ್ರಾರ ಜಾವಲಿನ್ ಎಸೆತ ನೋಡಿ!

    ಕೇರಳದಿಂದ ಕರೊನಾ ಜಾಡು: 100 ನರ್ಸಿಂಗ್ ವಿದ್ಯಾರ್ಥಿಗಳಿಗೆ ಪಾಸಿಟೀವ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts