More

    ಎಲ್ಲ ಮಕ್ಕಳಿಗೂ ಅಪ್ಪನೇ ಹೀರೋ! ತಂದೆ ಕುರಿತು ಆನಂದ ಸಂಕೇಶ್ವರ ಭಾವುಕ ಮಾತು

    ಬೆಂಗಳೂರು: ಎಲ್ಲ ಮಕ್ಕಳಿಗೂ ತಮ್ಮ ಅಪ್ಪನೇ ಹೀರೋ. ಅದೇ ರೀತಿ ನನ್ನ ತಂದೆ ಡಾ. ವಿಜಯ ಸಂಕೇಶ್ವರ ಅವರೇ ನನ್ನ ಹೀರೋ ಎಂದು ಡಾ. ಆನಂದ ಸಂಕೇಶ್ವರ ಹೇಳಿದ್ದಾರೆ.

    ಇದನ್ನೂ ಓದಿ: ‘ಆರ್​.ಆರ್​.ಆರ್​’ ತರಹ ‘ವಿಜಯಾನಂದ’ ಸಹ ಬಿಗ್​ ಹಿಟ್​ ಆಗಲಿ: ಆರೋಗ್ಯ ಸಚಿವ ಸುಧಾಕರ್ ಹಾರೈಕೆ

    ಡಾ. ವಿಜಯ ಸಂಕೇಶ್ವರ ಅವರ ಜೀವನವನ್ನು ಆಧರಿಸಿ ತಯಾರಾಗಿರುವ ಕನ್ನಡದ ಮೊದಲ ಬಯೋಪಿಕ್​ ಆದ ‘ವಿಜಯಾನಂದ’ ಚಿತ್ರದ ಟ್ರೈಲರ್​ ಬಿಡುಗಡೆ ಇಂದು ಒರಾಯನ್​ ಮಾಲ್​ನಲ್ಲಿ ಯಶಸ್ವಿಯಾಗಿ ಮುಗಿದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್​ ಮುಂತಾದ ಗಣ್ಯರು ಭಾಗವಹಿಸಿ ಟ್ರೈಲರ್​ ಬಿಡುಗಡೆ ಮಾಡಿದ್ದಾರೆ.
    ಈ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರಾಗಿ ಅವರು ಹಲವು ವಿಷಯಗಳನ್ನು ಹಂಚಿಕೊಂಡರು.

    ‘1976ರಲ್ಲಿ ಒಂದು ಟ್ರಕ್​ನಿಂದ ಪ್ರಾರಂಭವಾದ ವಿಆರ್​ಎಲ್​ ಸಂಸ್ಥೆಯು ಇಂದು ಈ ಮಟ್ಟಕ್ಕೆ ಬೆಳದಿರುವುದಕ್ಕೆ ಕಾರಣ ನಮ್ಮ ತಂದೆಯವರ ನಿಷ್ಠೆ, ಪ್ರಾಮಾಣಿಕತೆ ಮತ್ತು ಕಠಿಣ ಶ್ರಮ. ಹಲವು ಸವಾಲುಗಳನ್ನು ಎದುರಿಸಿ ಅವರು ಈ ಹಂತಕ್ಕೆ ಬಂದಿದ್ದಾರೆ. ಈ ಸಂಸ್ಥೆಯಲ್ಲಿ 5500 ಟ್ರಕ್​ಗಳು, ದೇಶಾದ್ಯಂತ 1000ಕ್ಕೂ ಹೆಚ್ಚು ಶಾಖೆಗಳು, 20 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಇವತ್ತಿಗೂ ಅಸಂಘಟಿತವಾಗಿರುವ ಈ ಕ್ಷೇತ್ರದಲ್ಲಿ ನಮ್ಮ ತಂದೆ ಶಿಸ್ತು ತಂದರು’ ಎಂದು ಹೇಳಿದರು.

    ಇದನ್ನೂ ಓದಿ: ‘ಆರ್​.ಆರ್​.ಆರ್​’ ತರಹ ‘ವಿಜಯಾನಂದ’ ಸಹ ಬಿಗ್​ ಹಿಟ್​ ಆಗಲಿ: ಆರೋಗ್ಯ ಸಚಿವ ಸುಧಾಕರ್ ಹಾರೈಕೆ

    ‘ವಿಜಯಾನಂದ’ ಚಿತ್ರದ ಟ್ರೈಲರ್​ನಲ್ಲಿ ವಿಜಯ ಸಂಕೇಶ್ವರ ಅವರ ಸಾಹಸಗಾಥೆ ಮತ್ತು ಯಶೋಗಾಥೆ ಅನಾವರಣಗೊಂಡಿದೆ. ಒಂದು ಟ್ರಕ್ ನಿಂದ ಶುರುಮಾಡಿ, ಅತೀ ದೊಡ್ಡ ಲಾಜಿಸ್ಟಿಕ್ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು ಹೇಗೆ, ಪತ್ರಿಕೋದ್ಯಮದಲ್ಲಿ ನಂಬರ್ ಒನ್ ಆಗಿದ್ದು ಹೇಗೆ, ಕಲ್ಲುಮುಳ್ಳಿನ‌ ಹಾದಿಯಲ್ಲಿ ಸಾಗಿ ಸಾಮ್ರಾಜ್ಯ ನಿರ್ಮಿಸಿದ ಪರಿ ಬಿಗ್ ಸ್ಕ್ರೀನ್ ಮೇಲೆ ಅನಾವರಣಗೊಂಡಿದೆ. ಈ ಟ್ರೈಲರ್​ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದ್ದು, ಈ ಟ್ರೈಲರ್​ಗೆ ಪ್ರೇಕ್ಷಕರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಐಐಎಂನಲ್ಲಿ ವಿಜಯ ಸಂಕೇಶ್ವರ ಅವರ ಜೀವನವನ್ನು ಪಾಠವನ್ನಾಗಿ ಅಳವಡಿಸಬೇಕು: ಬೊಮ್ಮಾಯಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts