More

    ಬಿಜೆಪಿ ನಿರೀಕ್ಷೆ ಕಷ್ಟ, ಕೈಗೆ ನಷ್ಟ: ಪರಿಷತ್ ಸಮರದಲ್ಲಿ ಕಾಂಗ್ರೆಸ್-ಕಮಲ ಜಿದ್ದಾಜಿದ್ದಿ; ಜೆಡಿಎಸ್​ಗೆ ಮೂರನೇ ಸ್ಥಾನ

    ಬೆಂಗಳೂರು: ವಿಧಾನಪರಿಷತ್​ನ 25 ಸ್ಥಾನಗಳಿಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲ ಪೈಪೋಟಿ ಕಂಡುಬಂದಿದೆಯಾದರೂ ಒಂದೆರಡು ಸ್ಥಾನ ಹೆಚ್ಚು ಪಡೆಯುವ ಮೂಲಕ ಆಡಳಿತ ಪಕ್ಷ ಅಗ್ರಸ್ಥಾನಿಯಾಗುವ ಸಾಧ್ಯತೆ ದಟ್ಟವಾಗಿದೆ.

    ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ವಿಜಯವಾಣಿ ತನ್ನ ವಿಸõತ ಜಾಲದ ಮೂಲಕ ಕ್ಷೇತ್ರವಾರು ಮತದಾನೋತ್ತರ ಸಮೀಕ್ಷೆ ನಡೆಸಿತು. ಲಭ್ಯ ಮಾಹಿತಿ ಮಾಹಿತಿ ಪ್ರಕಾರ ಬಿಜೆಪಿ ಕಳೆದ ಬಾರಿಗಿಂತ ದುಪ್ಪಟ್ಟು ಸಾಧನೆ ಮಾಡುವ ಲಕ್ಷಣ ಗೋಚರಿಸಿದರೆ, ಕಾಂಗ್ರೆಸ್​ಗೆ ಒಂದೆರಡು ಸ್ಥಾನ ಖೋತಾ ಆಗಲಿದೆ. ಇನ್ನು ಜೆಡಿಎಸ್ ಹೆಚ್ಚಿನ ನಷ್ಟ ಅನುಭವಿಸುವ ಸಂಭವ ಇದೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು, ಸಚಿವ ಸಂಪುಟ ಸಹೋದ್ಯೋಗಿಗಳ ‘ಅಪರಿಮಿತ’ ಸಾಹಸದಿಂದ ಕಮಲ ಪಾಳಯ 12ರಿಂದ 14 ಸ್ಥಾನ ಗಳಿಸಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶ್ರಮಕ್ಕೆ 10ರಿಂದ 12 ಸ್ಥಾನ ಪಡೆದು ತೃಪ್ತಿಪಡುವ ಸಾಧ್ಯತೆಗಳು ಹೆಚ್ಚಿವೆ.

    ಜೆಡಿಎಸ್ ಎರಡು ಸ್ಥಾನದಲ್ಲಿ ಖಚಿತ ಗೆಲುವು ಸಾಧಿಸಲಿದ್ದು ಉಳಿದ ಎರಡು ಕಡೆ ಪ್ರಬಲ ಪೈಪೋಟಿ ನೀಡಿದೆ. ಒಂದು ಸ್ಥಾನದಲ್ಲಿ ಬಿಜೆಪಿ ಜತೆ ಮತ್ತೊಂದು ಕಡೆ ಕಾಂಗ್ರೆಸ್ ಎದುರು ಜಿದ್ದಾಜಿದ್ದಿ ಕಾಣಿಸಿದ್ದು ಗೆಲುವಿನ ವಿಶ್ವಾಸ ಕ್ಷೀಣಿಸಿದೆ. ಈಗ ಚುನಾವಣೆ ನಡೆದಿರುವ 25 ಸ್ಥಾನಗಳಲ್ಲಿ ಸಿದ್ದರಾಮಯ್ಯ ಸರ್ಕಾರ ಇದ್ದಾಗ ಬಿಜೆಪಿ 6 ಕಡೆ, ಕಾಂಗ್ರೆಸ್ 14 ಮತ್ತು ಜೆಡಿಎಸ್ 4, ಪಕ್ಷೇತರ ಅಭ್ಯರ್ಥಿ ಒಂದು ಕಡೆ ವಿಜಯಿಯಾಗಿದ್ದರು. ಈ ಬಾರಿ ಬಿಜೆಪಿ ತನ್ನ ಬಲವನ್ನು ಸಲೀಸಾಗಿ ದುಪ್ಪಟ್ಟುಪಡಿಸಿಕೊಳ್ಳುವ ನಿರೀಕ್ಷೆ ಇದೆ. ಅಂದರೆ 10 ಸ್ಥಾನಗಳಲ್ಲಿ ನಿಚ್ಚಳ ಗೆಲುವು ಮತ್ತು 2-3 ಕಡೆಗಳಲ್ಲಿ ತೀರಾ ಪೈಪೋಟಿಯಲ್ಲಿ ಗೆಲುವು ಸಿಕ್ಕರೂ ಸಿಗಬಹುದು. ಕಾಂಗ್ರೆಸ್ ಕೂಡ 10 ಸ್ಥಾನಗಳಲ್ಲಿ ಖಚಿತ ಗೆಲುವು ಸಿಗುವ ಚಿತ್ರಣ ಕಾಣಿಸಿದೆ.

    14ಕ್ಕೆ ಮತ ಎಣಿಕೆ: ವಿಧಾನಪರಿಷತ್​ನ 25 ಸ್ಥಾನಗಳ ಚುನಾವಣೆಯ ಫಲಿತಾಂಶ ಡಿ.14ರಂದು ಹೊರಬೀಳಲಿದೆ. ಸಚಿವ ಹಾಗೂ ಪರಿಷತ್​ನ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮಾಜಿ ಸಚಿವ ಜಗದೀಶ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಶಾಸಕಿ ಲಕ್ಷಿ್ಮೕ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ, ಕಾಂಗ್ರೆಸ್ ಹಿರಿಯ ಮುಖಂಡ ಕೆ.ಸಿ.ಕೊಂಡಯ್ಯ ಕಣದಲ್ಲಿರುವ ಪ್ರಮುಖರು.

    ಪಕ್ಷಗಳ ಲೆಕ್ಕಾಚಾರ

    • ಕಾಂಗ್ರೆಸ್: ಕಳೆದ ಬಾರಿಯ ಸ್ಥಾನ ಉಳಿಸಿಕೊಳ್ಳುವ ಜತೆಗೆ ಒಂದೆರಡು ಸ್ಥಾನ ಹೆಚ್ಚಾಗಬಹುದು. ಅಂದರೆ 15-16 ಸ್ಥಾನ ಗಳಿಸಬಹುದು.
    • ಬಿಜೆಪಿ: ಈಗಿರುವ ಸಂಖ್ಯಾಬಲಕ್ಕೆ 10 ಸ್ಥಾನ ಜೋಡಿಸುವ ವಿಶ್ವಾಸ. ಅಂದರೆ 15 ಸ್ಥಾನಗಳಲ್ಲಿ ಮೇಲುಗೈ
    • ಜೆಡಿಎಸ್: ಸಾಮರ್ಥ್ಯಕ್ಕೆ ಅನುಸಾರ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದ ಎಲ್ಲ 6 ಸ್ಥಾನದಲ್ಲಿ ಗೆಲ್ಲುವ ವಿಶ್ವಾಸ, ಈಗಿನ ಬಲ 4ರಿಂದ 6ಕ್ಕೆ ಹೆಚ್ಚಳ
    ಬಿಜೆಪಿ ನಿರೀಕ್ಷೆ ಕಷ್ಟ, ಕೈಗೆ ನಷ್ಟ: ಪರಿಷತ್ ಸಮರದಲ್ಲಿ ಕಾಂಗ್ರೆಸ್-ಕಮಲ ಜಿದ್ದಾಜಿದ್ದಿ; ಜೆಡಿಎಸ್​ಗೆ ಮೂರನೇ ಸ್ಥಾನ
    ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹಾಗೂ ಪುರಸಭೆ ಸದಸ್ಯರೊಂದಿಗೆ ತೆರಳಿ ಶಿಕಾರಿಪುರ ಪುರಸಭೆ ಮತಗಟ್ಟೆಯಲ್ಲಿ ಮತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts