More

    ಜನತಾ ಕರ್ಫ್ಯೂ ದಿನ ಸೋನು ನಿಗಮ್​ರಿಂದ ಆನ್​ಲೈನ್​ ಸಂಗೀತ ಸಂಜೆ

    ಮುಂಬೈ: ಬಾಲಿವುಡ್​, ಸ್ಯಾಂಡಲ್​ವುಡ್​ ಸೇರಿದಂತೆ ಭಾರತದ ಪೂರ್ತಿ ಚಿತ್ರರಂಗವನ್ನೇ ಗೆದ್ದಿರುವ ಗಾಯಕ ಸೋನು ನಿಗಮ್​ ಕರೊನಾ ವೈರಸ್​ ಕುರಿತಾಗಿ ಮುಂಜಾಗ್ರತೆಯನ್ನು ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ದುಬೈನಲ್ಲಿ ತಮ್ಮ ಕುಟುಂಬದೊಂದಿಗೆ 14 ದಿನಗಳ ಕಾಲ ಮನೆಯಲ್ಲೇ ಇರುವ ನಿರ್ಧಾರ ಮಾಡಿರುವ ಗಾಯಕ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

    ನಾಳೆ ದೇಶದಾದ್ಯಂತ ಜನರು ಮನೆಯಿಂದ ಹೊರಗೆ ಬರದೆ ಜನತಾ ಕರ್ಫ್ಯೂ ನಡೆಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದಾರೆ. ಇದಕ್ಕೆ ಸಂಪೂರ್ಣ ಬೆಂಬಲ ಸೂಚಿಸುವುದಾಗಿ ಸೋನು ನಿಗಮ್​ ತಿಳಿಸಿದ್ದಾರೆ. ಈ ಸಮಯದಲ್ಲಿ ನನ್ನ ಅಭಿಮಾನಿಗಳಿಗೋಸ್ಕರ ಆನ್​ಲೈನ್​ನಲ್ಲಿ ಸಂಗೀತ ಸಂಜೆ ನಡೆಸುತ್ತೇನೆ. ರಾತ್ರಿ 8ರಿಂದ ನನ್ನ ಅಧಿಕೃತ ಖಾತೆಗಳಲ್ಲಿ ನೀವು ಸಂಗೀತ ಸಂಜೆಯನ್ನು ವೀಕ್ಷಿಸಬಹುದು. ದೇಶದಲ್ಲಿರುವವರು ಮಾತ್ರವಲ್ಲ, ವಿದೇಶದಲ್ಲಿ ನಮ್ಮ ಭಾರತೀಯ ಸಂಗೀತವನ್ನು ಇಷ್ಟ ಪಡುವವರು ಸಹ ಈ ಕಾರ್ಯಕ್ರಮವನ್ನು ನೋಡಿ ಎಂದು ಅವರು ತಿಳಿಸಿದ್ದಾರೆ.

    ಕರೊನಾ ವೈರಸ್​ನ ಮುಂಜಾಗ್ರತಾ ಕ್ರಮವಾಗಿ ನಾನು ದುಬೈನಲ್ಲೇ ತಂಗಿದ್ದೇನೆ. ನನಗೆ ಈ ಸಮಯದಲ್ಲಿ ಭಾರತದಲ್ಲಿರುವ ನನ್ನ ತಂದೆ ಮತ್ತು ಸಹೋದರಿಯೊಂದಿಗೆ ಇರಬೇಕೆಂಬ ಆಸೆ ಇದೆ. ಆದರೆ ದುಬೈನಲ್ಲಿ ಇರುವ ನಾನು ಭಾರತಕ್ಕೆ ತೆರಳಿದರೆ ಅಲ್ಲಿ ಅವರಿಗೆ ಸಮಸ್ಯೆಯಾಗಬಹುದಾದ್ದರಿಂದ ನಾನು ಇಲ್ಲೇ ಇರಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

    ಪಶ್ಚಿಮ ಬಂಗಾಳದ ಶಿಕ್ಷಕರಿಗಿಲ್ಲ ಜನತಾ ಕರ್ಫ್ಯೂ! ಭಾನುವಾರವೂ ಶಾಲೆಗೆ ಬನ್ನಿ ಎಂದು ಆದೇಶಿಸಿದ ಮಮತಾ ಬ್ಯಾನರ್ಜಿ ಸರ್ಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts