More

    ಕರೊನಾದಿಂದ ಸಾಯುವಾಗಲೂ ಒಂದಾಗಿಯೇ ಸತ್ತ ವೃದ್ಧ ಜೋಡಿ: ಕರೊನಾ ಹಿಂದಿನ ನರಕವನ್ನು ಬಿಚ್ಚಿಟ್ಟ ಮಗ

    ರೋಮ್​: ಚೀನಾದ ಕರೊನಾ ವೈರಸ್​ ಪ್ರಪಂಚದಾದ್ಯಂತ ಹರಡಿದೆ. ಚೀನಾದ ನಂತರ ಇಟಲಿ ಕರೊನಾಗೆ ಅಕ್ಷರಶಃ ತತ್ತರಿಸಿದ್ದು, ದೇಶದಲ್ಲಿ ಇದುವರೆಗೂ 827 ಜನರು ಸಾವನ್ನಪ್ಪಿದ್ದಾರೆ. 12,462 ಜನರಲ್ಲಿ ಸೋಂಕು ಇರುವುದು ಧೃಡವಾಗಿದೆ. ವೈರಸ್​ನ ಭಯದಲ್ಲಿರುವ ಇಟಲಿಯಲ್ಲಿ ವೃದ್ಧ ಜೋಡಿಯೊಂದು ಕರೊನಾ ವೈರಸ್​ನಿಂದಾಗಿ ಒಟ್ಟಿಗೆ ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ.

    ಲುಯಿಗಿ ಕ್ಯಾರಾರಾ(86), ಮತ್ತು ಸೆವೆರಾ ಬೆಲೊಟ್ಟಿ (82) ಕಳೆದ 60 ವರ್ಷಗಳಿಂದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು. 15 ದಿನಗಳ ಹಿಂದೆ ಅವರಿಬ್ಬರಲ್ಲೂ ಜ್ವರ ಕಾಣಿಸಿಕೊಂಡಿದ್ದು, 8 ದಿನಗಳ ಕಾಲ ಮನೆಯಲ್ಲಿಯೇ ಅವರಿಬ್ಬರನ್ನು ಪ್ರತ್ಯೇಕಿಸಿಡಲಾಗಿತ್ತು. ಎಂಟು ದಿನಗಳ ಕಾಲ 102 ಡಿಗ್ರಿ ಜ್ವರವಿದ್ದರೂ ಸಹ ಅವರಿಬ್ಬರಿಗೆ ವೈದ್ಯಕೀಯ ನೆರವು ನೀಡಲಾಗಿಲ್ಲ ಎಂದು ಅವರ ಮಗ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಮನೆಯ ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇಲ್ಲದ ಕಾರಣ ಅವರನ್ನು ಕರೆದುಕೊಂಡು ಹೋಗಲಾಗಿಲ್ಲ. ತುರ್ತು ಸಂಖ್ಯೆಗೆ ಕರೆ ಮಾಡಿದರೂ ಸಹ ಅವರಿಂದ ಉತ್ತಮ ಸ್ಪಂದನೆ ಸಿಕ್ಕಿಲ್ಲ ಎಂದು ಅವರು ತಿಳಿಸಿದ್ದಾರೆ.

    ಜ್ವರ ಹೆಚ್ಚಾದ ಕಾರಣ ಲುಯಿಗಿ ಅವರನ್ನು ಶನಿವಾರದಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರದಂದು ಸೆವೆರಾ ಅವರಲ್ಲಿಯೂ ವಿಪರೀತಿ ಜ್ವರ ಕಾಣಿಸಿಕೊಂಡಿದ್ದು ಅವರನ್ನೂ ಸಹ ಅದೇ ಆಸ್ಪತ್ರೆಗೆ ಸೇರಿಸಲಾಗಿದೆ. ಮಂಗಳವಾರದಂದು ಬೆಳಗ್ಗೆ 9.15ಕ್ಕೆ ಲುಯಿಗಿ ಪ್ರಾಣಬಿಟ್ಟಿದ್ದು ಅದಾದ ಎರಡೇ ಗಂಟೆಯಲ್ಲಿ (11 ಗಂಟೆ) ಸೆವೆರಾ ಕೂಡ ಪ್ರಾಣ ಬಿಟ್ಟಿದ್ದಾರೆ.

    ಆಸ್ಪತ್ರೆಯಲ್ಲಿದ್ದ ತನ್ನ ತಂದೆಯನ್ನು ಅವರು ಸಾಯುವುದಕ್ಕಿಂತ ಮೊದಲು ನೋಡುವುದಕ್ಕೂ ಸಹ ಅವಕಾಶ ಮಾಡಿಕೊಟ್ಟಿಲ್ಲ. ಸಾಯುತ್ತಿದ್ದಾರೆ ಎಂದು ತಿಳಿದರೂ ಅವರಿಗೆ ಆರೈಕೆ ಮಾಡಲು ಬಿಡದ ಕೆಟ್ಟ ಕಾಯಿಲೆ ಇದು ಎಂದು ದಂಪತಿಯ ಮಗ ನೋವಿನಿಂದ ನುಡಿದಿದ್ದಾರೆ.

    ಸದ್ಯ ಮುಂಜಾಗ್ರತಾ ಕ್ರಮವಾಗಿ ದಂಪತಿಯ ಮಗನನ್ನೂ ಸಹ ಆತನ ಹೆಂಡತಿ ಮಕ್ಕಳಿಂದ ಪ್ರತ್ಯೇಕಿಸಿಡಲಾಗಿದೆ. (ಏಜೆನ್ಸೀಸ್​)

    ಭಾರತದ ಯಾವ ಯಾವ ರಾಜ್ಯದಲ್ಲಿ ಕರೊನಾ ಕಾಟ? ಇಲ್ಲಿದೆ ಸಂಪೂರ್ಣ ಮಾಹಿತಿ

    VIDEO| ವೆಡ್ಡಿಂಗ್​ ಫೋಟೋಶೂಟ್​ ವೇಳೆ ನವದಂಪತಿಗೆ ಶಾಕ್​ ನೀಡಿದ ಜಿರಾಫೆ: ವಿಡಿಯೋ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts