More

  ಪ್ರಾಮಾಣಿಕತೆ ಮೆರೆದ ಬಸ್ ಚಾಲಕ-ನಿರ್ವಾಹಕ


  ಚಾಮರಾಜನಗರ : ಕೊಳ್ಳೇಗಾಲ ಕೆಎಸ್‌ಆರ್‌ಟಿಸಿ ಬಸ್‌ನೊಳಗೆ ದೊರೆತ 23 ಗ್ರಾಂ. ತೂಕದ ಚಿನ್ನದ ಸರವನ್ನು ಬಸ್ ನಿರ್ವಾಹಕ ಮತ್ತು ಚಾಲಕ ಪೊಲೀಸ್ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.


  ನ.5ರಂದು ಬಸ್ ಕೊಳ್ಳೇಗಾಲದಿಂದ ಬೆಂಗಳೂರು ಮಾರ್ಗವಾಗಿ ಚಲಿಸುತ್ತಿತ್ತು. ಈ ವೇಳೆ ಸೀಟ್ ಮೇಲೆ ಬಿದ್ದಿದ್ದ ಚಿನ್ನದ ಸರ ಕಂಡಕ್ಟರ್ ದೇವರಾಜು ಮತ್ತು ಚಾಲಕ ಮಾದಪ್ಪ ಅವರ ಕಣ್ಣಿಗೆ ಕಾಣಿಸಿದೆ. ಕೂಡಲೇ ಅವರು ಅದನ್ನು ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳ ಗಮನಕ್ಕೆ ತಂದು ಅವರ ವಶಕ್ಕೆ ನೀಡಿದ್ದರು. ಆದರೆ, ಅದರ ವಾರಸುದಾರರು ಬಾರದ ಕಾರಣ ಡಿಪೋ ವ್ಯವಸ್ಥಾಪಕ ವೆಂಕಟರಮಣಸ್ವಾಮಿ ಅವರು ಶನಿವಾರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಪೊಲೀಸರಿಗೆ ಸರವನ್ನು ಒಪ್ಪಿಸಿದ್ದಾರೆ.


  ಸದ್ಯ ಸಬ್‌ಇನ್‌ಸ್ಪೆಕ್ಟರ್ ಉಮಾವತಿ ಸರವನ್ನು ವಶಕ್ಕೆ ಪಡೆದಿದ್ದಾರೆ. ಬಸ್ ಕಂಡಕ್ಟರ್ ಹಾಗೂ ಚಾಲಕನ ಕರ್ತವ್ಯ ನಿಷ್ಠೆಯನ್ನು ಪೊಲೀಸ್ ಇಲಾಖೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪ್ರಶಂಸಿದ್ದಾರೆ. ಈ ವೇಳೆ ಕೆಎಸ್‌ಆರ್‌ಟಿಸಿ ಡಿಪೋ ಲೆಕ್ಕಪತ್ರ ಮೇಲ್ವಿಚಾರಕ ಮಂಜುನಾಥ್, ಸಹಾಯಕ ಭದ್ರತಾ ನಿರೀಕ್ಷಕ ಪಿ.ನಾಗೇಂದ್ರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts