More

    ಹೆಲ್ಪ್​ಲೈನ್​ಗಳಿಗೆ ಕರೆ ಮಾಡುವ ಮುನ್ನ ಹುಷಾರ್​! ಪಾರಿವಾಳವನ್ನು ರಕ್ಷಿಸಲು ಹೋಗಿ ಒಂದು ಲಕ್ಷ ರೂಪಾಯಿ ಕಳೆದುಕೊಂಡ

    ಘಜಿಯಾಬಾದ್​: ಯಾವುದಾದರೂ ತುರ್ತು ಸಂದರ್ಭದಲ್ಲಿ ತಕ್ಷಣಕ್ಕೆ ಸಹಾಯ ಬೇಕೆಂದಾಗ ನೆನಪಾಗೋದು ಹೆಲ್ಪ್​ಲೈನ್​ಗಳು. ಆದರೆ ಕೆಲವೊಮ್ಮೆ ಈ ಹೆಲ್ಪ್​ಲೈನ್​ಗಳಿಂದ ಮೋಸ ಹೋಗುವ ಸಾಧ್ಯತೆಗಳೂ ಇರುತ್ತದೆ. ಅದಕ್ಕೆ ಸಾಕ್ಷಿಯೆನ್ನುವಂತೆ ಉತ್ತರ ಪ್ರದೇಶದ ಘಜಿಯಾಬಾದ್​ನ ರಾಜ್​ ನಗರದಲ್ಲಿ ಒಂದು ಘಟನೆ ನಡೆದಿದೆ.

    ಅಭಿಷೇಕ್​ ಯಾದವ್​ ಹೆಸರಿನ ವ್ಯಕ್ತಿ ತನ್ನ ಕಾರನ್ನು ಪಾರ್ಕ್​ ಮಾಡಿದ್ದ ಜಾಗದಲ್ಲಿ ಪಾರಿವಾಳವೊಂದು ಬಿದ್ದಿರುವುದನ್ನು ಕಂಡಿದ್ದಾರೆ. ಪೆಟ್ಟಾಗಿ ಬಿದ್ದಿದ್ದ ಆ ಪಾರಿವಾಳವನ್ನು ರಕ್ಷಿಸುವ ಸಲುವಾಗಿ ಗೂಗಲ್​ನಲ್ಲಿ ಹೆಲ್ಪ್​ಲೈನ್​ ಸಂಖ್ಯೆಯನ್ನು ಹುಡುಕಿದ್ದಾರೆ. ಗೂಗಲ್​ನಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿ ನಡೆದಿರುವ ವಿಷಯ ತಿಳಿಸಿ, ಪಾರಿವಾಳವನ್ನು ರಕ್ಷಿಸುವಂತೆ ಕೋರಿದ್ದಾರೆ. ವೈದ್ಯರನ್ನು ಕಳುಹಿಸುತ್ತೇವೆ ಎಂದು ತಿಳಿಸಿದ ಹೆಲ್ಪ್​ಲೈನ್​ನ ಸಿಬ್ಬಂದಿ ಯುಪಿಐ ಮುಖಾಂತರ 5 ರೂಪಯಿಯನ್ನು ಟೋಕನ್​ ಅಮೌಂಟ್​ ಆಗಿ ಪಾವತಿಸುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪಿದ ಅಭಿಷೇಕ್​ಗೆ ಒಂದು ಲಿಂಕ್​ ಕಳುಹಿಸಲಾಗಿದೆ. ಅಭಿಷೇಕ್​ ಆ ಲಿಂಕನ್ನು ಕ್ಲಿಕ್ಕಿಸಿದ ತಕ್ಷಣ ಆತನ ಬ್ಯಾಂಕ್​ ಅಕೌಂಟ್​ನಿಂದ 1 ಲಕ್ಷ ಹಣವನ್ನು ಐದು ಇನ್ಸ್ಟಾಲ್​ಮೆಂಟ್​ಗಳಲ್ಲಿ ತೆಗೆದುಕೊಳ್ಳಲಾಗಿದೆ.

    ತನ್ನ ಬ್ಯಾಂಕ್​ ಖಾತೆಯಿಂದ ಹಣ ವಿತ್​ಡ್ರಾ ಆಗುತ್ತಿದ್ದಂತೆ ಗಾಬರಿಗೊಂಡ ಅಭಿಷೇಕ್​ ಪೊಲೀಸರ ಬಳಿ ದೂರು ನೀಡಿದ್ದಾನೆ. ಸಿಹಾನಿ ಗೇಟ್​ ಪೊಲೀಸ್​ ಠಾಣೆಯ ಪೊಲೀಸರು ಐಟಿ ಕಾಯ್ದೆಯ ಸೆಕ್ಷನ್​ 66ರ ಅನುಸಾರ ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ.

    ಪೆಟ್ಟಾಗಿ ಬಿದ್ದಿದ್ದ ಪಾರಿವಾಳಕ್ಕೆ ಪ್ರಥಮ ಚಿಕಿತ್ಸೆಯನ್ನು ಮಾಡಲಾಗಿದ್ದು ಅದನ್ನು ಹಾರಲು ಬಿಡಲಾಗಿದೆ. ಪಾರಿವಾಳವನ್ನು ಗುಣಪಡಿಸಲು ಹೋಗಿ 1 ಲಕ್ಷವನ್ನು ಕಳೆದುಕೊಂಡ ಅಭಿಷೇಕ್​ ಮಾತ್ರ ತನ್ನ ಹಣ ವಾಪಾಸು ಬಂದರೆ ಸಾಕು ಎನ್ನುವ ನಿರೀಕ್ಷೆಯಲ್ಲಿ ಕುಳಿತಿದ್ದಾರೆ. (ಏಜೆನ್ಸೀಸ್​)

    ಕರೊನಾದಲ್ಲೂ ಹೆಚ್ಚುತ್ತಿದೆ ಸೌಂದರ್ಯ ಪ್ರೇಮ; ನೈಲ್​ ಆರ್ಟ್​ ಮೂಲಕ ಕರೊನಾ ಜಾಗೃತಿ

    ವಿಶ್ವದೆಲ್ಲೆಡೆ ಇರುವ ಮಳಿಗೆಗಳನ್ನು ಮುಚ್ಚುವ ನಿರ್ಧಾರ ಘೋಷಿಸಿದ ಸ್ಪೋರ್ಟ್ಸ್​​ ಕ್ಷೇತ್ರದ ದೈತ್ಯ ಕಂಪನಿ ನೈಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts