More

    ಟೇಕಾಫ್​ ಹಂತದಲ್ಲಿದ್ದ ವಿಮಾನಕ್ಕೆ ರನ್​ವೇನಲ್ಲಿ ದಿಢೀರ್ ಎದುರಾದ ಜೀಪು: ತಪ್ಪಿದೆ ಭಾರಿ ದುರಂತ

    ಪುಣೆ: ವಿಮಾನ ನಿಲ್ದಾಣದ ರನ್​ವೇನಲ್ಲಿ ಕಾಣಿಸಿಕೊಂಡ ವ್ಯಕ್ತಿ ಮತ್ತು ಜೀಪನ್ನು ರಕ್ಷಿಸುವ ಸಲುವಾಗಿ ಪೈಲೆಟ್​ ವಿಮಾನವನ್ನು ಬೇಗ ಮೇಲೆತ್ತಿದ್ದು, ಆಗ ವಿಮಾನದ ಕೆಳಮೈಗೆ ಹಾನಿಯಾಗಿರುವ ಘಟನೆ ಪುಣೆಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಪುಣೆಯಿಂದ ಶ್ರೀನಗರ ಹೊರಟಿದ್ದ ಎ321 ವಿಮಾನವು ನಿಲ್ದಾಣದಿಂದ ಟೇಕ್​ ಆಫ್​ ಮಾಡಿಕೊಂಡು ರನ್​ ವೇನಲ್ಲಿ ಹೋಗುತ್ತಿತ್ತು. ಆದರೆ ರನ್​ವೇನಲ್ಲಿ ಒಬ್ಬ ವ್ಯಕ್ತಿ ಮತ್ತು ಜೀಪು ಕಾಣಿಸಿಕೊಂಡ ಹಿನ್ನೆಲೆ ವ್ಯಕ್ತಿಯನ್ನು ರಕ್ಷಿಸುವ ಸಲುವಾಗಿ ವಿಮಾನದ ಪೈಲೆಟ್​ ನಿರ್ದಿಷ್ಟ ಅವಧಿಗಿಂತ ಮೊದಲೇ ವಿಮಾನವನ್ನು ರನ್​ವೇನಿಂದ ಮೇಲಕ್ಕೆತ್ತಿದ್ದಾನೆ. ಹಾಗಿದ್ದರೂ ವಿಮಾನದ ಕೆಳ ಮೇಲ್ಮೈಗೆ ಜೀಪು ತಾಗಿದ್ದು ವಿಮಾನಕ್ಕೆ ಸ್ವಲ್ಪ ಪ್ರಮಾಣದ ಹಾನಿಯುಂಟಾಗಿದೆ.

    “ರನ್​ವೇನಲ್ಲಿ 222ಕಿ.ಮೀ. ವೇಗದಲ್ಲಿ ಹೊರಟಿದ್ದ ವಿಮಾನಕ್ಕೆ ರನ್​ವೇನಲ್ಲಿ ವ್ಯಕ್ತಿ ಮತ್ತು ಜೀಪು ಕಾಣಿಸಿಕೊಂಡಿದ್ದರಿಂದ ಪೈಲೆಟ್​ ತಕ್ಷಣವೇ ವಿಮಾನವನ್ನು ಮೇಲಕ್ಕೆತ್ತಿದ್ದಾರೆ. ಆದರೂ ಏನೂ ತೊಂದರೆಯಾಗದೆ ವಿಮಾನವು ದೆಹಲಿಗೆ ಬಂದಿಳಿದಿದೆ” ಎಂದು ಡೈರೆಕ್ಟರೇಟ್​ ಜನರಲ್​ ಆಫ್​ ಸಿವಿಲ್​ ಏವಿಯೇಷನ್​ (ಡಿಜಿಸಿಎ) ತಿಳಿಸಿದ್ದಾರೆ.

    ಸದ್ಯ ವಿಮಾನವನ್ನು ಸೇವೆಯಿಂದ ಹಿಂಪಡೆಯಲಾಗಿದ್ದು ತನಿಖೆಗೆ ಒಳಪಡಿಸಲಾಗಿದೆ. ಪುಣೆಯ ಏರ್​ ಟ್ರಾಫಿಕ್​ ಕಂಟ್ರೋಲ್​ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts