More

    ಬಾಲ್ಯದಲ್ಲೇ ಗೀತೆ ಗಾಯನ ಕಲಿಯಿರಿ ; ವಿದ್ಯಾರ್ಥಿಗಳಿಗೆ ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಸಲಹೆ

    ಕಂಪ್ಲಿ: ಮಕ್ಕಳು ಬಾಲ್ಯದಲ್ಲಿಯೇ ಕನ್ನಡ ಗೀತೆಗಳನ್ನು ಕಲಿತು ಹಾಡುವುದನ್ನು ಅಭ್ಯಾಸ ಮಾಡಬೇಕು ಎಂದು ವೀರಶೈವ ಸಂಘದ ತಾಲೂಕು ಅಧ್ಯಕ್ಷ ಪಿ.ಮೂಕಯ್ಯಸ್ವಾಮಿ ಹೇಳಿದರು.

    ಶಾರದಾ ಹಿಪ್ರಾ ಶಾಲೆಯಲ್ಲಿ ಅಕ್ಕಮಹಾದೇವಿ ಮಹಿಳಾ ಮಂಡಳಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ನಾಡಗೀತೆ ಸ್ಪರ್ಧೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಗೀತೆ, ಭಕ್ತಿಗೀತೆ, ದಾಸರ ಕೀರ್ತನೆಗಳು, ತತ್ವಪದಗಳು, ವಚನ, ಜನಪದಗೀತೆಗಳ ಗಾಯನ ಕಲಿಯಬೇಕು. ಕಾಲೇಜು ವಿದ್ಯಾರ್ಥಿಯಾಗುವ ವೇಳೆಗೆ ಹಾಡಿನ ಕಣಜವಾಗಬೇಕು ಎಂದರು.

    40ಕ್ಕೂ ಹೆಚ್ಚು ಮಕ್ಕಳು ನಾಡಗೀತೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅಕ್ಕಮಹಾದೇವಿ ಮಹಿಳಾ ಮಂಡಳಿ ಅಧ್ಯಕ್ಷೆ ಮುಕ್ಕುಂದಿ ಶಿವಗಂಗಮ್ಮ, ಪ್ರಮುಖರಾದ ಕೆ.ಎಂ.ವಾಗೀಶ್, ಎಚ್.ನಾಗರಾಜ್, ಕಲ್ಗುಡಿ ನಾಗರತ್ನ, ಪಿ.ಎಂ.ಶಿವಲೀಲಾ, ಜಾಜಿ ರುದ್ರಾಣಿ, ಬಿ.ಎಂ.ಪುಷ್ಪಾ, ಉಗಾದಿ ವಿನೂತಾ, ಕೆ.ಎಂ.ಸೌಮ್ಯ್ಯಾ, ಕಲ್ಗುಡಿ ಚನ್ನಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts