More

    ರೈತರಲ್ಲಿ ಮರೆಯಾಗದ ಆತಂಕ: ಕೃಷಿ ಚಟುವಟಿಕೆಗೆ ಜೋರು

    ಲಿಂಗಸುಗೂರು: ಮುಂಗಾರು ವಿಳಂಬವಾದ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗೆ ತೊಡಕಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಈಗಾಗಲೇ ಬಿತ್ತನೆ ಕಾರ್ಯ ಮುಗಿದಿದೆ. ಬೆಳೆ ಬಾಡುವ ಹಂತದಲ್ಲಿದ್ದು, ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ.


    ಮಳೆಯಿಲ್ಲದೆ ತಾಲೂಕಿನಲ್ಲಿ ಕೃಷಿ ಚಟುವಟಿಕೆಗಳಲ್ಲಿ ಏರುಪೇರಾಗಿದೆ. ಪ್ರಸಕ್ತ ವರ್ಷದ ಜ.1 ರಿಂದ ಜು.18 ರವರೆಗೆ ವಾಡಿಕೆಯಂತೆ 118 ಮಿ.ಮೀ. ಮಳೆ ಆಗಬೇಕಿತ್ತು. ಆದರೆ, 78 ಮಿ.ಮೀ. ಮಳೆಯಾಗಿದೆ. ಬೋರ್‌ವೆಲ್, ತೆರೆದ ಬಾವಿ ಸೇರಿ ನಾನಾ ಜಲಮೂಲಗಳ ನೆರವಿನೊಂದಿಗೆ ರೈತರು ಬಿತ್ತನೆ ಮಾಡಿದ್ದಾರೆ.

    ಇದನ್ನೂ ಓದಿ: ಗಾಳಿಮಳೆಗೆ ಉರುಳಿದ ಮರಗಳು; ಕಂದಡ್ಕ ಸೇತುವೆ ಕೆಳ ಭಾಗದ ಹೊಳೆಯಲ್ಲಿ ಅಡ್ಡ ನಿಂತ ಮರದ ದಿಮ್ಮಿಗಳು

    ಲಿಂಗಸುಗೂರು, ಮುದಗಲ್, ಗುರುಗುಂಟಾ ರೈತ ಸಂಪರ್ಕ ಕೇಂದ್ರಗಳ ಮೂಲಕ 811 ಕ್ವಿಂಟಾಲ್ ಜೋಳ, 664 ಕ್ವಿಂ. ತೊಗರಿ, 140 ಕ್ವಿಂ. ಭತ್ತ, 55 ಕೆಜಿ ಹೆಸರು, 6 ಕ್ವಿಂ. ಸಜ್ಜೆ ಮತ್ತು 10 ಕ್ವಿಂ. ಸೂರ್ಯಕಾಂತಿ ಬಿತ್ತನೆ ಬೀಜಗಳನ್ನು ರೈತರಿಗೆ ಮಾರಾಟ ಮಾಡಲಾಗಿದೆ. ಹೈಬ್ರಿಡ್ ಸಜ್ಜೆ 22,940 ಹೆಕ್ಟೇರ್ ಗುರಿಯ ಪೈಕಿ 1208 ಹೆ. (ಶೇ.58), ತೊಗರಿ 26,280 ಹೆಕ್ಟೇರ್ ಗುರಿಯ ಪೈಕಿ 16,577 ಹೆ. (ಶೇ. 63) ಮತ್ತು ಹತ್ತಿ 1250 ಹೆಕ್ಟೇರ್ ಗುರಿಯ ಪೈಕಿ 2255 ಹೆ. (ಶೇ.89) ರಷ್ಟು ಬಿತ್ತನೆಯಾಗಿದೆ. ಮಳೆಯಾಶ್ರಿತ ಜಮೀನಿನಲ್ಲಿ ರೈತರು ಬಿತ್ತನೆ ಮಾಡಲು ಮುಂದಾಗಿಲ್ಲ. ಕೆಲವೆಡೆ ಬಿತ್ತಿದರೂ ಬೆಳೆ ಬಾಡುವ ಹಂತದಲ್ಲಿದೆ.

    ಮುಂಗಾರು ಹಂಗಾಮಿನಲ್ಲಿ ಸಕಾಲಕ್ಕೆ ಮಳೆ ಸುರಿಯದ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಮಳೆಯಾಶ್ರಿತ ಜಮೀನಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಹಂತದಲ್ಲಿವೆ. ಎರಡು ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಬೆಳೆಗಳಿಗೆ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಬರಗಾಲ ಘೋಷಿಸಬೇಕು.
    ಮಲ್ಲಣ್ಣ,ರೈತ, ಗೌಡೂರು

    ಲಿಂಗಸುಗೂರು ಭಾಗದಲ್ಲಿ ಬಹುತೇಕ ಮಳೆಯಾಶ್ರಿತ ಖುಷ್ಕಿ ಜಮೀನು ಇವೆ. ಕಳೆದ ತಿಂಗಳು ಸ್ವಲ್ಪ ಮಳೆ ಸುರಿದ ಪ್ರದೇಶದಲ್ಲಿ ಬಿತ್ತನೆಯಾದ ಬೆಳೆಗಳು ಒಣಗುವ ಹಂತಕ್ಕೆ ಬಂದಿದ್ದವು. ಇದೀಗ ಸುರಿಯುತ್ತಿರುವ ಜಿಟಿಜಿಟಿ ಮಳೆ ಅಲ್ಪ ಪ್ರಮಾಣದಲ್ಲಿ ಬೆಳೆಗಳಿಗೆ ಚೇತರಿಕೆ ನೀಡಿದಂತಾಗಿದೆ. ಮುಂಬರುವ ದಿನಗಳಲ್ಲಿ ಮಳೆಯಾದರೆ ಉತ್ತಮ ಬೆಳೆ ನಿರೀಕ್ಷಿಸಬಹುದು.
    ಅಮರೇಗೌಡ,ಪ್ರಭಾರ ಸಹಾಯಕ ನಿರ್ದೇಶಕ, ಲಿಂಗಸುಗೂರು


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts