More

    ಇದೊಂದು ಹೊಸ ಫಾರ್ಮಾಟ್​ನ ಸಿನಿಮಾ; ‘ಗಂಧದ ಗುಡಿ’ ಕುರಿತು ಅಮೋಘವರ್ಷ

    ಬೆಂಗಳೂರು: ಪುನೀತ್​ ಅಭಿನಯದ ಕೊನೆಯ ಚಿತ್ರ ‘ಗಂಧದ ಗುಡಿ’ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇಂದು ಸಂಜೆ ಚಿತ್ರದ ಪೇಯ್ಡ್​ ಪ್ರೀಮಿಯರ್​ ಶೋಗಳು ನಡೆಯಲಿದ್ದು, ಈಗಾಗಲೇ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿವೆ.

    ಇದನ್ನೂ ಓದಿ: ನಟಿ ನಯನತಾರ ಬಾಡಿಗೆ ತಾಯ್ತನ ಪ್ರಕರಣ: ತಮಿಳುನಾಡು ಸರ್ಕಾರದ ತನಿಖೆಯಲ್ಲಿ ಮಹತ್ವದ ಮಾಹಿತಿ ಬಯಲು

    ಇದುವರೆಗೂ ಪುನೀತ್​ ರಾಜಕುಮಾರ್ ಸಾಕಷ್ಟು ಕಮರ್ಷಿಯಲ್​ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಯಾವ ಜಾನರ್​ನ ಚಿತ್ರ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದೆ. ಆದರೆ, ಈ ಫಾರ್ಮಾಟ್​ಗೆ ಏನು ಹೆಸರಿಡಬಹುದು ಎಂದು ತಮಗೂ ಗೊತ್ತಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ಅಮೋಘವರ್ಷ.

    ಈ ಕುರಿತು ಮಾತನಾಡಿರುವ ಅವರು, ‘ಇದು ಕಮರ್ಷಿಯಲ್ ಚಿತ್ರವೋ, ಅಲ್ಲವೋ ಎಂದು ಹೇಳುವುದು ಕಷ್ಟ. ಇದು ಎಲ್ಲರಿಗೂ ಇಷ್ಟವಾಗುವ ಸಿನಿಮಾ ಎಂದಷ್ಟೇ ಹೇಳಬಲ್ಲೆ. ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಬೇರೆಬೇರೆ ಶೈಲಿಯ ಒಳ್ಳೆಯ ಕಂಟೆಂಟ್​ ಇರುವ ಸಿನಿಮಾಗಳು ಬರುತ್ತಿವೆ. ಇದು ಸಹ ವಿಭಿನ್ನವಾದ ಚಿತ್ರ. ಇದೊಂದು ಚಿತ್ರ ಎನ್ನುವುದಕ್ಕಿಂತ ಇದೊಂದು ಅನುಭವ ಎಂದರೆ ತಪ್ಪಿಲ್ಲ. ಗಂಧದಗುಡಿಯನ್ನು ಅಪ್ಪು ಅವರ ಕಣ್ಣಲ್ಲಿ ನೋಡುವ ಒಂದು ವಿಭಿನ್ನವಾದ ಅನುಭವ. ಈ ಫಾರ್ಮಾಟ್​ಗೆ ಏನು ಹೆಸರಿಡಬೇಕು ಅಂತ ನನಗೆ ನಿಜವಾಗಲೂ ಗೊತ್ತಿಲ್ಲ. ಈ ತರಹದ ಫಾರ್ಮೆಟ್​ನ ಚಿತ್ರವನ್ನು ನಾನು ಇದುವರೆಗೂ ಎಲ್ಲೂ ನೋಡಿಲ್ಲ’ ಎನ್ನುತ್ತಾರೆ ಅಮೋಘವರ್ಷ.

    ಇದನ್ನೂ ಓದಿ: ‘ಹೆಡ್-ಬುಷ್’ನಲ್ಲಿ ವೀರಗಾಸೆಗೆ ಅಪಮಾನ ಮಾಡಿಲ್ಲ ಎಂದ ಧನಂಜಯ್

    ಇನ್ನು, ಈ ಚಿತ್ರದಲ್ಲಿ ಪುನೀತ್​ ಅವರ ಧ್ವನಿ ಇದೆಯೋ ಅಥವಾ ಅವರ ಪಾತ್ರಕ್ಕೆ ಬೇರೆ ಯಾರಾದರೂ ಡಬ್​ ಮಾಡಿದ್ದಾರಾ? ಎಂಬ ಪ್ರಶ್ನೆಯೂ ಹಲವರಲ್ಲಿದೆ. ಅಮೋಘವರ್ಷ ಹೇಳುವಂತೆ ಈ ಚಿತ್ರಕ್ಕೆ ಪುನೀತ್​ ಅವರ ಧ್ವನಿಯೇ ಇರಲಿದೆಯಂತೆ. ಶೂಟಿಂಗ್​ ಸಂದರ್ಭದಲ್ಲಿ ಅವರು ಮಾತನಾಡಿದ್ದನ್ನೇ (ಸಿಂಕ್​ ಸೌಂಡ್​) ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆಯಂತೆ.

    ಇದು ಭಾರತದ ಸಿನಿಮಾಗಳಲ್ಲೇ ಮಾಸ್ಟರ್​ಪೀಸ್​: ‘ಕಾಂತಾರ’ಕ್ಕೆ ಸೂಪರ್​ಸ್ಟಾರ್ ರಜನಿಕಾಂತ್ ಮೆಚ್ಚುಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts