More

    ಅಮ್ಮಾ ಕ್ಯಾಂಟೀನ್​ ಇನ್ನು ಮುಂದೆ ಅಣ್ಣ ಕ್ಯಾಂಟೀನ್​! ಹೆಸರು ಬದಲಾಯಿಸಲು ಮುಂದಾದ ಡಿಎಂಕೆ

    ಚೆನ್ನೈ: ತಮಿಳುನಾಡಿನ ಪ್ರಸಿದ್ಧ ಅಮ್ಮಾ ಕ್ಯಾಂಟೀನ್​ ಇನ್ನು ಮುಂದೆ ಅಣ್ಣ ಕ್ಯಾಂಟೀನ್​ ಆಗಿ ಬದಲಾಗಲಿದೆ. ಡಿಎಂಕೆ ಪಕ್ಷ ಆಡಳಿತಕ್ಕೆ ಬಂದ ಬೆನ್ನಲ್ಲೇ ಕ್ಯಾಂಟೀನ್​ನ ಹೆಸರು ಬದಲಾವಣೆ ಮಾಡುವುದಾಗಿ ತಿಳಿಸಿದೆ.

    2013ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅಮ್ಮ ಕ್ಯಾಂಟೀನ್​ ಆರಂಭಿಸಿದ್ದರು. ಈವರೆಗೆ ಗ್ರೇಟರ್​ ಚೆನ್ನೈ ಕಾರ್ಪೋರೇಷನ್​ ವತಿಯಿಂದ 407 ಅಮ್ಮಾ ಕ್ಯಾಂಟೀನ್​ಗಳನ್ನು ಮಾಡಲಾಗಿದೆ. ಅದರಲ್ಲಿ ಒಂದು ರೂಪಾಯಿಗೆ ಇಡ್ಲಿ, 3 ರೂಪಾಯಿಗೆ ಒಂದು ಪ್ಲೇಟ್ ಅನ್ನ ಸಾಂಬಾರು ಮತ್ತು 3 ರೂಪಾಯಿಗೆ ಒಂದು ಪ್ಲೇಟ್​ ಚಪಾತಿ ನೀಡಲಾಗುತ್ತಿದೆ. ಬಡವರ ಹೊಟ್ಟೆ ಖಾಲಿ ಇರಬಾರದು ಎನ್ನುವ ಉದ್ದೇಶದೊಂದಿಗೆ ಆರಂಭಿಸಿದ್ದ ಕ್ಯಾಂಟೀನ್​ಗಳಿಗೆ ಡಿಎಂಕೆ ಪಕ್ಷದ ಸ್ಥಾಪಕ ಮತ್ತು ಮಾಜಿ ಮುಖ್ಯಮಂತ್ರಿ ಸಿ.ಎನ್. ಅನ್ನಾ ದುರೈ ಸ್ಮರಣಾರ್ಥ ಅಣ್ಣ ಕ್ಯಾಂಟೀನ್​ ಎಂದು ಮರುನಾಮಕರಣ ಮಾಡುವುದಾಗಿ ತಿಳಿಸಲಾಗಿದೆ.

    ಡಿಎಂಕೆ ಪಕ್ಷ ರಾಜ್ಯದಲ್ಲಿ ಗೆದ್ದರೆ ರಾಜ್ಯಾದ್ಯಂತ ಕಲೈಗ್ನಾರ್​ (ಕಲಾವಿದ) ಹೆಸರಿನಲ್ಲಿ 500 ಕ್ಯಾಂಟೀನ್​ಗಳನ್ನು ತೆರೆಯುವುದಾಗಿ ಹೇಳಿತ್ತು. ಗೆದ್ದ ಸಂಭ್ರಮದಲ್ಲಿರುವ ಪಕ್ಷ ತನ್ನ ಮೊದಲನೇ ಹೆಜ್ಜೆಯಾಗಿ ಈ ಕ್ಯಾಂಟೀನ್​ಗಳನ್ನು ನಿರ್ಮಿಸುವುದಾಗಿ ಹೇಳಿಕೊಂಡಿದೆ. (ಏಜೆನ್ಸೀಸ್​)

    ಲಸಿಕೆ ಪಡೆಯುವಾಗ ಒದ್ದಾಡಿ, ಕೂಗಾಡಿದ ಮಹಿಳೆ! ವಿಡಿಯೋ ವೈರಲ್..

    ಅಜ್ಜಿ ಮನೆಗೆ ಹೋದವಳ ಬಾಳಲ್ಲಿ ಎಂಟ್ರಿ ಕೊಟ್ಟ ಯುವಕ: ಕೇವಲ 8 ತಿಂಗಳಲ್ಲಿ ನಡೆಯಿತು ದುರಂತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts