More

    ಅಮಿತಾಭ್ ಬಚ್ಚನ್​ ಮೊಮ್ಮಗಳ ಹೊಸ ಪ್ಲಾನ್ ಏನು ಗೊತ್ತಾ ?!

    ಮುಂಬೈ: ರಾಜಕಾರಣದಲ್ಲಿರುವಂತೆಯೇ ಚಿತ್ರರಂಗದಲ್ಲೂ ವಂಶಪಾರಂಪರ್ಯವಾಗಿ ಮಕ್ಕಳು ಮೊಮ್ಮಕಳೆಲ್ಲಾ ಅಪ್ಪ ಇಲ್ಲ ಅಮ್ಮನ ಹಾದಿ ಹಿಡಿದು ಸ್ಟಾರ್​ಗಳಾಗುವುದು ಸಾಮಾನ್ಯ. ಹೀಗಾಗಿ ಅಮಿತಾಭ್ ಬಚ್ಚನ್​ರ ಮೊಮ್ಮಗಳಾದ ನವ್ಯ ನಂದ ಕೂಡ ಬಾಲಿವುಡ್​ನಲ್ಲಿ ಮಿಂಚಲು ಸಿದ್ಧವಾಗುತ್ತಾಳೆ ಎಂದು ಬಹುತೇಕರು ತಿಳಿದಿದ್ದರು. ಆದರೆ ನವ್ಯ ಬಿಸಿನೆಸ್​ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಒತ್ತಲು ಮುಂದಾಗಿದ್ದಾರೆ.

    ಅಮಿತಾಭ್ ಮಗಳಾದ ಶ್ವೇತ ಬಚ್ಚನ್ ಮತ್ತು ಎಸ್ಕಾರ್ಟ್ಸ್ ಗ್ರೂಪ್​ನ ಎಂಡಿ ವಾಣಿಜ್ಯೋದ್ಯಮಿ ನಿಖಿಲ್ ನಂದ ಅವರ ಮಗಳಾದ ನವ್ಯ ನವೇಲಿ ನಂದ, ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ. ಜೊತೆಗೆ ಬಿಗ್​ ಬಿ ಹಿನ್ನೆಲೆಯಿದೆ. ಸೋದರ ಮಾವ ಅಭಿಷೇಕ್ ಬಚ್ಚನ್ ಮತ್ತು ಅತ್ತೆ ಐಶ್ವರ್ಯಾ ಕೂಡ ಸೂಪರ್​ಸ್ಟಾರ್​ಗಳು. ಆದ್ದರಿಂದ ಗ್ಲಾಮರ್ ಜಗತ್ತನ್ನು ಪ್ರವೇಶಿಬಹುದು ಎಂದು ಜನರ ನಿರೀಕ್ಷೆಯಿತ್ತು. ಆದರೆ, ನವ್ಯಾಗೆ ಬೇರೆಯೇ ಪ್ಲಾನ್ ಇದೆ!

    ಇದನ್ನೂ ಓದಿ: ಹೊಸ ತಾಯಿ ಅನುಷ್ಕಾರ ಈ ಪೋಸ್ ನೋಡಿದ್ದೀರಾ ..?!

    ವೋಗ್​ ಪತ್ರಿಕೆಯೊಂದಿಗೆ ಮಾತನಾಡುತ್ತಾ, ತಮ್ಮ ತಂದೆ ಎಸ್ಕಾರ್ಟ್ಸ್ ಗ್ರೂಪ್​ನ ಎಂಡಿ ನಿಖಿಲ್​ ನಂದಾರ ಜೊತೆ ಹೆಜ್ಜೆ ಹಾಕುವುದಾಗಿ ತಿಳಿಸಿದ್ದಾರೆ, ನವ್ಯ. ಭಾರತೀಯ ಮಲ್ಟಿನ್ಯಾಷನಲ್ ಕಂಪೆನಿಯಾದ ಎಸ್ಕಾರ್ಟ್ಸ್ ಕಂಪೆನಿಯು ಆಟೋಮೊಬೈಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಹೊಂದಿದೆ. “ನಾನು ಈ ಬಿಸಿನೆಸ್ಅನ್ನು ನಡೆಸಲಿರುವ ನಾಲ್ಕನೇ ಪೀಳಿಗೆಯವಳಾಗುತ್ತೇನೆ ಮತ್ತು ಮೊದಲನೇ ಮಹಿಳೆ ಆಗುತ್ತೇನೆ. ನಮ್ಮ ಮುತ್ತಾತ ಹೆಚ್.ಪಿ.ನಂದ ನಿರ್ಮಿಸಿರುವ ಈ ಪರಂಪರೆಯನ್ನು ಮುಂದುವರಿಸಲು ನನಗೆ ಹೆಮ್ಮೆ ಉಂಟು” ಎಂದಿದ್ದಾಳೆ.

    ಡಿಜಿಟಲ್ ಟೆಕ್ನಾಲಜಿ ಮತ್ತು ಯುಎಕ್ಸ್ ಡಿಸೈನ್​ನಲ್ಲಿ ಮೇಜರ್ ತೆಗೆದುಕೊಂಡು ಅಮೆರಿಕದ ಫಾರ್​ಧಮ್ ಯುನಿವರ್ಸಿಟಿಯಿಂದ ಪದವಿ ಪಡೆದಿರುವ ನವ್ಯ ಈ ಬಗ್ಗೆ ತುಂಬಾ ಉತ್ಸಾಹದಿಂದ ಮಾತನಾಡಿದ್ದಾರೆ. “ಪ್ರತಿದಿನ ಹೆಚ್ಚುಹೆಚ್ಚು ಮಹಿಳೆಯರು ಬಿಸಿನೆಸ್​ಗಳನ್ನು ಆರಂಭಿಸುತ್ತಿದ್ದಾರೆ, ಹೊಸ ದಾಖಲೆಗಳನ್ನು ರಚಿಸುತ್ತಿದ್ದಾರೆ. ಇಂಥ ಸಮಯದಲ್ಲಿ ನನ್ನ ಮುಂದಿರುವ ಸಾಧನೆಗಳನ್ನು ಎದುರುನೋಡುತ್ತಿದ್ದೇನೆ” ಎಂದಿದ್ದಾರೆ.

    ನವ್ಯ ತಮ್ಮ ಉತ್ಸಾಹಕ್ಕೆ ಈಗಾಗಲೇ ಸಾಕ್ಷಿ ನೀಡಿದ್ದಾರೆ. 2020ರ ಮೇ ತಿಂಗಳಲ್ಲಿ “ಆರಾ ಹೆಲ್ತ್” ಎಂಬ ಮಹಿಳೆಯರಿಗೆ ಆರೋಗ್ಯ ಸೇವೆ ಒದಗಿಸುವ ಆನ್​ಲೈನ್ ಕಂಪೆನಿಯನ್ನು ನವ್ಯ, ತನ್ನ ಮೂವರು ಗೆಳತಿಯರೊಂದಿಗೆ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಇತ್ತೀಚೆಗೆ ಜನವರಿ ತಿಂಗಳಲ್ಲಿ, ಭಾರತದಲ್ಲಿ ಲೈಂಗಿಕ ಅಸಮಾನತೆ ನಿವಾರಿಸುವುದಕ್ಕೆ ಮೀಸಲಾದ ‘ಪ್ರಾಜೆಕ್ಟ್ ನವೇಲಿ’ಯನ್ನು ಲಾಂಚ್ ಮಾಡಿದ್ದಾರೆ.(ಏಜೆನ್ಸೀಸ್)

    ಪ್ರಿಯಾಂಕಾರ ಆತ್ಮಚರಿತ್ರೆಯಲ್ಲಿದೆ … ‘ಪ್ಲಾಸ್ಟಿಕ್ ಚೋಪ್ರಾ’ ಆದ ಗುಟ್ಟು !

     

    ಕರ್ನಾಟಕದ ಉದ್ಯಮಿ ಶೆಟ್ಟಿಗೆ ಭಾರಿ ಆಘಾತ: ವಿಶ್ವದೆಲ್ಲೆಡೆ ಇರುವ ಆಸ್ತಿಗಳ ಜಪ್ತಿಗೆ ಬ್ರಿಟನ್‌ ಕೋರ್ಟ್‌ ಆದೇಶ

    ‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts