More

    ಅನುಮತಿ ಇಲ್ಲದೆ ಭಾರತೀಯ ಜಲವಲಯ ಪ್ರವೇಶಿಸಿದ ಅಮೆರಿಕ ನೌಕೆ ! ಸರ್ಕಾರದ ವಿರೋಧ

    ನವದೆಹಲಿ/ವಾಷಿಂಗ್ಟನ್ : ಅಮೆರಿಕದ ನೌಕಾಪಡೆಯ ಹಡಗು “ಪೂರ್ವ ಅನುಮತಿ” ಇಲ್ಲದೆ ಭಾರತದ ಮೀಸಲು ಆರ್ಥಿಕ ವಲಯ(ಇಇಜೆಡ್​)ದೊಳಗೆ ಸಲ್ಲುವ ಜಲಪ್ರದೇಶದಲ್ಲಿ ಸಂಚಾರ ನಡೆಸಿದ ಬಗ್ಗೆ ಭಾರತ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ನವದೆಹಲಿಯ ಅಮೇರಿಕನ್ ಕಾನ್ಸುಲೇಟ್ ಮತ್ತು ವಾಷಿಂಗ್ಟನ್ ಡಿಸಿಯ ವಿದೇಶಾಂಗ ಇಲಾಖೆ ಎರಡೂ ಕಡೆ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ.

    ನಿನ್ನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ಹಡಗು ಪರ್ಷಿಯನ್ ಕೊಲ್ಲಿಯಿಂದ ಮಲಾಕ್ಕಾ ಜಲಸಂಧಿಗೆ ಸಾಗುವುದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ನಮ್ಮ ಇಇಜೆಡ್ ಮೂಲಕ ನಡೆದ ಈ ಸಂಚಾರದ ಬಗ್ಗೆ ನಮ್ಮ ಕಾಳಜಿಯನ್ನು ಅಮೆರಿಕ ಸರ್ಕಾರಕ್ಕೆ ರಾಜತಾಂತ್ರಿಕ ಮಾರ್ಗಗಳ ಮೂಲಕ ತಿಳಿಸಿದ್ದೇವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

    ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ಗ್ಲೇನ್​ ಮ್ಯಾಕ್ಸ್​ವೆಲ್​ ಸಿಕ್ಸರ್​: ಕಾಲೆಳೆದ ಆರ್​ಸಿಬಿಗೆ ಪಂಜಾಬ್ ಪಂಚ್ ಹೀಗಿದೆ!​ ​

    “ಸಮುದ್ರ ಕಾನೂನಿನ ಕುರಿತ ವಿಶ್ವ ಸಂಸ್ಥೆಯ ನಿರ್ಣಯ(ಯುಎನ್​​​ಸಿಎಲ್​​ಒಎಸ್​)ದ ಪ್ರಕಾರ ಯಾವುದೇ ಜಲವಾಹನವು ಕರಾವಳಿ ರಾಷ್ಟ್ರದ ಜಲಪ್ರದೇಶದಲ್ಲಿ ಸಂಚಾರ ಅಥವಾ ಮಿಲಿಟರಿ ವ್ಯಾಯಾಮ ಕೈಗೊಳ್ಳುವ ಮುಂಚೆ ಅನುಮತಿ ಪಡೆಯಬೇಕು” ಎಂಬ ಭಾರತದ ನಿಲುವಿನ ಬಗ್ಗೆ ಹೇಳಿಕೆಯಲ್ಲಿ ತಿಳಿಸಲಾಗಿದೆ.

    ಮತ್ತೊಂದೆಡೆ ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಪೂರ್ವಾನುಮತಿ ಇಲ್ಲದೆ “ಮುಗ್ಧ ಜಲಸಂಚಾರ” ನಡೆಸುತ್ತಿದ್ದುದಾಗಿ ಪೆಂಟಗಾನ್ ಹೇಳಿಕೆ ನೀಡಿದೆ. ಅಮೆರಿಕದ ನೌಕಾಪಡೆ ತನ್ನ ಯುಎಸ್​ಎಸ್ ಜಾನ್ ಪಾಲ್ ಜೋನ್ಸ್ ಮಿಸೈಲ್ ಡೆಸ್ಟ್ರಾಯರ್ ಭಾರತದ ಮೀಸಲು ಆರ್ಥಿಕ ವಲಯದಲ್ಲಿ “ಫ್ರೀಡಂ ಆಫ್ ನ್ಯಾವಿಗೇಷನ್ ಆಪರೇಷನ್” ನಡೆಸಿದ್ದಾಗಿ ಹೇಳಿದೆ. (ಏಜೆನ್ಸೀಸ್)

    ಕುರ್ಚಿಗಳನ್ನು ಆಕ್ರಮಿಸಿಕೊಂಡ ಪುರುಷರು, ನೋಡುತ್ತಾ ನಿಂತ ಅಧ್ಯಕ್ಷೆ !

    4 ರಾಜ್ಯಗಳಲ್ಲಿ ಮತದಾನ ಮುಗಿದ ಮೇಲೆ ಬಂತು ಚುನಾವಣಾ ಆಯೋಗದ ಕರೊನಾ ಎಚ್ಚರಿಕೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts