More

    ʻಏರೋ ಇಂಡಿಯಾ 2023ʼರಲ್ಲಿ ಭಾಗಿಯಾಗಲಿದೆ ಅಮೆರಿಕದ ಅತಿ ದೊಡ್ಡ ನಿಯೋಗ

    ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಫೆ.12ರಿಂದ 17ರವರೆಗೆ ನಡೆಯಲಿರುವ ʻಏರೋ ಇಂಡಿಯಾ-2023ʼ ಪ್ರದರ್ಶನದಲ್ಲಿ ಭಾರತದಲ್ಲಿನ ಯು.ಎಸ್‌. ಮಿಷನ್‌ನ ಚಾರ್ಜೆ ಡಿ ಅಫೇರ್ಸ್‌ ಅಂಬಾಸಡರ್‌ ಎಲಿಜಬೆತ್‌ ಜೋನ್ಸ್‌ ಅವರು ಈವರೆಗಿನ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಿ ಪಾಲ್ಗೊಳ್ಳಲಿದ್ದಾರೆ.

    ʻಅಮೆರಿಕ ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು, ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ನನಗೆ ಹೆಮ್ಮೆ ಎನಿಸುತ್ತಿದೆ. ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಆಧುನೀಕರಣಗೊಳಿಸುತ್ತಿರುವ ಸಮಯದಲ್ಲಿ ನಾವು ಐಚ್ಛಿಕ ಪಾಲುದಾರರಾಗಲು ಬಯಸುತ್ತೇವೆ. ಉಭಯ ದೇಶಗಳಿಗೂ ಲಾಭದಾಯಕವಾಗುವ ಜಂಟಿ ಉತ್ಪಾದನೆ ಹಾಗೂ ಜಂಟಿ ಅಭಿವೃದ್ಧಿಯ ಪಾಲುದಾರಿಕೆಯತ್ತ ನಾವು ಹೆಚ್ಚಿನ ಗಮನ ನೀಡುತ್ತಿದ್ದೇವೆ. ಸುರಕ್ಷಿತವಾದ, ಸಮೃದ್ಧಿಯಾದ, ಅತ್ಯಂತ ಮುಕ್ತವಾದ ಹಾಗೂ ಸ್ವತಂತ್ರ ʻಇಂಡೋ-ಪೆಸಿಫಿಕ್‌ʼ ಪ್ರಾಂತ್ಯಕ್ಕಾಗಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ದೇಶವಾಗಿ ಪರಿಗಣಿಸುತ್ತೇವೆʼ ಎಂದು ಅಂಬಾಸಡರ್‌ ಜೋನ್ಸ್‌ ತಿಳಿಸಿದ್ದಾರೆ.

    ಅಮೆರಿಕದ ಸೇನಾಪಡೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ʻಏರೋ ಇಂಡಿಯಾ-2023ʼರಲ್ಲಿ ಭಾಗಿಯಾಗಲಿವೆ.

    ಏರೋ ಇಂಡಿಯಾದಲ್ಲಿ ಅಮೆರಿಕ ಸರ್ಕಾರದ ನಿಯೋಗದಲ್ಲಿ ಇರುವವರ ವಿವರ ಇಂತಿದೆ..

    ಅಂಬಾಸಡರ್‌ ಎ. ಎಲಿಜೆಬೆತ್‌ ಜೋನ್ಸ್‌, ಭಾರತದಲ್ಲಿನ ಯು.ಎಸ್‌. ಮಿಷನ್‌ನ ಚಾರ್ಜೆ ಡಿ ಅಫೇರ್ಸ್‌;
    ಜೆಡಿಡಿಯಾ ಪಿ. ರಾಯಲ್‌, ಪ್ರಿನ್ಸಿಪಲ್‌ ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಆಫ್‌ ಡಿಫೆನ್ಸ್‌ ಫಾರ್‌ ಇಂಡೋ ಪೆಸಿಫಿಕ್‌ ಸೆಕ್ಯುರಿಟಿ ಅಫೇರ್ಸ್‌;
    ರಿಯರ್‌ ಅಡ್ಮಿರಲ್‌ ಮೈಕಲ್‌ ಬೆಕರ್‌, ಸೀನಿಯರ್‌ ಡಿಫೆನ್ಸ್‌ ಅಫಿಶಿಯಲ್, ಯು.ಎಸ್‌. ರಾಯಭಾರ ಕಚೇರಿ ಹೊಸದಿಲ್ಲಿ;
    ಮೀರಾ ಕೆ. ರೆಸ್ನಿಕ್‌, ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಆಫ್‌ ಸ್ಟೇಟ್‌ ಫಾರ್‌ ರೀಜನಲ್‌ ಸೆಕ್ಯುರಿಟಿ, ಬ್ಯೂರೋ ಆಫ್‌ ಪೊಲಿಟಿಕಲ್‌-ಮಿಲಿಟರಿ ಅಫೇರ್ಸ್‌;
    ಜುಡಿತ್‌ ರೇವಿನ್, ಕಾನ್ಸಲ್‌ ಜನರಲ್‌, ಯು.ಎಸ್‌. ಕಾನ್ಸುಲೇಟ್‌ ಜನರಲ್‌ ಚೆನ್ನೈ;
    ಜಸ್ಟಿನ್‌ ಕೆ. ಮ್ಯಾಕ್‌ಫರ್ಲಿನ್, ಡೆಪ್ಯುಟಿ ಅಸಿಸ್ಟೆಂಟ್‌ ಸೆಕ್ರೆಟರಿ ಆಫ್‌ ಡಿಫೆನ್ಸ್‌ ಫಾರ್‌ ಇಂಡಸ್ಟ್ರಿಯಲ್‌ ಬೇಸ್‌ ಡೆವಲಪ್‌ಮೆಂಟ್‌ ಅಂಡ್‌ ಇಂಟರ್‌ನ್ಯಾಷನಲ್‌ ಎಂಗೇಜ್‌ಮೆಂಟ್‌;
    ಮೈಕಲ್‌ ಎಫ್‌. ಮಿಲ್ಲರ್‌, ಡೆಪ್ಯುಟಿ ಡೈರೆಕ್ಟರ್‌, ಡಿಫೆನ್ಸ್ ಸೆಕ್ಯುರಿಟಿ ಕೊಆಪರೇಷನ್‌ ಏಜೆನ್ಸಿ;
    ಮೇಜರ್‌ ಜನರಲ್‌ ಜುಲಿಯನ್‌ ಸಿ. ಚೀಟರ್‌, ಅಸಿಸ್ಟೆಂಟ್‌ ಡೆಪ್ಯುಟಿ ಅಂಡರ್‌ ಸೆಕ್ರೆಟರಿ ಆಫ್‌ ದಿ ಏರ್‌ಫೋರ್ಸ್‌, ಇಂಟರ್‌ನ್ಯಾಷನಲ್ ಅಫೇರ್ಸ್‌;
    ಬ್ರಿಗೇಡಿಯರ್‌ ಜನರಲ್‌ ಜೊಯಲ್‌ ಡಬ್ಲ್ಯು ಸಫ್ರಾನೆಕ್‌, ಡೈರೆಕ್ಟರ್‌ ಆಫ್‌ ದಿ ಏರ್‌ಫೋರ್ಸ್‌ ಸೆಕ್ಯುರಿಟಿ ಅಸಿಸ್ಟೆಂನ್ಸ್‌ ಅಂಡ್‌ ಕೊಆಪರೇಷನ್‌ ಡೈರೆಕ್ಟೊರೇಟ್‌ ಅಂಡ್‌ ಡೈರೆಕ್ಟರ್‌ ಆಫ್‌ ಇಂಟರ್‌ನ್ಯಾಷನಲ್‌ ಅಫೇರ್ಸ್‌, ಏರ್‌ಫೋರ್ಸ್ ಮಾರ್ಷಲ್‌ ಕಮಾಂಡ್‌;
    ಕಾರ್ಲಾ ಹಾರ್ನ್‌, ಎಕ್ಸಿಕ್ಯುಟಿವ್‌ ಡೈರೆಕ್ಟರ್‌ ಆಫ್‌ ದಿ ನೇವಿ ಇಂಟರ್‌ನ್ಯಾಷನಲ್‌ ಪ್ರೊಗ್ರಾಮ್ಸ್‌ ಆಫೀಸ್‌;
    ಜೆ. ಮಾರಿಯೊ ಮಿರಾನ್ದಾ, ಡೈರೆಕ್ಟರ್‌ ಆಫ್‌ ಟೆಕ್ನಾಲಜಿ, ಸೆಕ್ಯುರಿಟಿ, ಅಂಡ್‌ ಕೊಆಪರಟಿವ್‌ ಪ್ರೊಗ್ರಮ್ಸ್ ಅಟ್‌ ದಿ ನೇವಿ ಇಂಟರ್‌ನ್ಯಾಷನಲ್‌ ಪ್ರೊಗ್ರಾಮ್ಸ್‌ ಆಫೀಸ್‌;
    ಕೇರಿ ಅರುಣ್‌, ಕೌನ್ಸಲರ್‌ ಫಾರ್‌ ಕಮರ್ಷಿಯಲ್‌ ಅಫೇರ್ರ್ಸ್‌, ಯು.ಎಸ್‌. ಕಾನ್ಸುಲೇಟ್‌ ಜನರಲ್‌ ಚೆನ್ನೈ ಮತ್ತು
    ಪೀಟರ್‌ ಇವಾನ್ಸ್‌, ಡೆಪ್ಯುಟಿ ಡೈರೆಕ್ಟರ್‌ ಫಾರ್‌ ರೀಜನಲ್‌ ಸೆಕ್ಯುರಿಟಿ ಅಂಡ್‌ ಆರ್ಮ್ಸ್‌ ಟ್ರಾನ್ಸ್‌ಫರ್ಸ್‌, ಯು.ಎಸ್‌. ಡಿಪಾರ್ಟ್‌ಮೆಂಟ್‌ ಆಫ್‌ ಸ್ಟೇಟ್‌

    ಅಮೆರಿಕದ ಪ್ರಮುಖ ಸೇನಾ ಕಂಪನಿಗಳಾದ, ʻಏರೋ ಮೆಟಲ್ಸ್‌ ಅಲಯನ್ಸ್‌ʼ , ʻಆಸ್ಟ್ರೋನಾಟಿಕ್ಸ್‌ ಕಾರ್ಪೋರೇಷನ್‌ ಆಫ್‌ ಅಮೆರಿಕʼ, ಬೋಯಿಂಗ್‌, ಜಿಇ ಏರೋಸ್ಪೇಸ್‌, ಜನರಲ್‌ ಅಟಾಮಿಕ್ಸ್‌ ಏರೋನಾಟಿಕಲ್‌ ಸಿಸ್ಟಮ್ಸ್‌ ಇಂಕ್‌ʼ, ಹೈ ಟೆಕ್‌ ಇಂಪೋರ್ಟ್‌ ಎಕ್ಸ್‌ಪೋರ್ಟ್‌ ಕಾರ್ಪೋರೇಷನ್‌, ಜೋನಲ್‌ ಲ್ಯಾಬೊರೇಟರೀಸ್‌, ಲಾಕ್‌ಹೀಡ್‌ ಮಾರ್ಟಿನ್‌, ಪ್ರಾಟ್‌ ಆ್ಯಂಡ್ ವೈಟ್ನೆ ಮತ್ತು ಟಿಡಬ್ಲು ಮೆಟಲ್ಸ್‌ ಇವುಗಳ ವಿಮಾನಗಳು ಏರೋ ಇಂಡಿಯಾ 2023ರ ʻಯುಎಸ್‌ಎ ಪಾರ್ಟನರ್‌ಶಿಪ್‌ ಪೆವಿಲಿಯನ್‌ʼನ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ‌ಯಲಹಂಕದ ವೈಮಾನಿಕ ನೆಲೆಯಲ್ಲಿ ʻ ಕಾಲ್ ಮ್ಯಾನ್‌ ವರ್ಡ್‌ವೈಲ್ಡ್‌ʼ ಈ ಪ್ರದರ್ಶನ ಆಯೋಜಿಸಿದೆ. ( https://kallman.com/shows/aero-india-2023 )

    ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್‌ ʻಫೈನಲ್‌ ಅಪ್ರೋಚ್‌ʼ ಫೆ.16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.

    ʻಏರೋ ಇಂಡಿಯಾದʼ ದಲ್ಲಿ ಅಮೆರಿಕದ ತೊಡಗಿಕೊಳ್ಳುವಿಕೆ ಅಮೆರಿಕ-ಭಾರತ ಸೇನಾ ಪಾಲುದಾರಿಕೆಯನ್ನು ಬಲಪಡಿಸುವುದಲ್ಲದೆ ಇಂಡೋ ಪೆಸಿಫಿಕ್‌ ಭಾಗದ ಸುರಕ್ಷತೆಗಾಗಿ ಕೈಜೋಡಿಸಿರುವ ಉಭಯ ದೇಶಗಳ ಬದ್ಧತೆಯನ್ನು ಮತ್ತಷ್ಟು ಪ್ರಚುರಪಡಿಸುತ್ತದೆ. ಈ ಪ್ರದರ್ಶನ ಅಮೆರಿಕ ಸೇನೆಯ ಯುದ್ಧ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದು, ಜಂಟಿ ಸಮರಾಭ್ಯಾಸದ ಸಾಧ್ಯತೆಗಳಿಗೆ ಉತ್ತೇಜನ ನೀಡುತ್ತದೆ. ʻಮುಂಬರುವ ದಶಕಗಳಲ್ಲಿ ಸ್ವತಂತ್ರ ಹಾಗೂ ಮುಕ್ತ ಇಂಡೋ ಪೆಸಿಫಿಕ್‌ ಭಾಗದ ಸಮೃದ್ಧಿಯನ್ನು ಅವಲಂಬಿಸಿ ನಮ್ಮ ಉಭಯ ದೇಶಗಳ ಭವಿಷ್ಯ, ಅಷ್ಟೇ ಅಲ್ಲ ಇಡೀ ಜಗತ್ತಿನ ಭವಿಷ್ಯ ನಿಂತಿರುತ್ತದೆʼ ಎಂದು ಅಮೆರಿಕದ ಅಧ್ಯಕ್ಷ ಜೊ ಬೈಡನ್‌ ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ಎಟಿಎಮ್​ನಿಂದ ವಿಚಿತ್ರ ರೀತಿಯಲ್ಲಿ ಕಳವಾದ ಹಣ; ಬ್ಯಾಂಕ್​ನವರಿಗೆ ತಲೆನೋವಾಗಿರುವ ಖದೀಮರು!

    ಭೀಕರ ಅಪಘಾತ: ಕೆಟ್ಟು ನಿಂತಿದ್ದ ಕ್ಯಾಂಟರ್​ಗೆ ಬುಲೆಟ್ ಡಿಕ್ಕಿ, ಯುವಕ-ಯುವತಿ ಸ್ಥಳದಲ್ಲೇ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts