More

    ಕಾಡಿನಲ್ಲಿದ್ದ ಹಸುಗಳನ್ನು ನಿರ್ನಾಮ ಮಾಡಲು ಹೆಲಿಕಾಪ್ಟರ್​ನಲ್ಲಿ ಶಾರ್ಪ್​ ಶೂಟರ್​​ಗಳನ್ನು ಕಳಿಸಿದರು!

    ನ್ಯೂ ಮೆಕ್ಸಿಕೊ: ಎಲ್ಲಾದರೂ ನೀವು ಕಾಡು ಹಸುಗಳನ್ನು ಕೊಲ್ಲಲು ಸ್ನೈಪರ್ ಅಥವಾ ಶಾರ್ಪ್​ ಶೂಟರ್​ಗಳನ್ನು ಬಳಸಿಕೊಳ್ಳುವುದನ್ನು ಕೇಳಿದ್ದೀರಾ? ಇಂತಹ ವಿಚಿತ್ರ ಗಟನೆ ನಡೆಯುತ್ತಿರುವುದು ವಿಶ್ವದ ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕದಲ್ಲಿ.
    ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯದ ಗಿಲಾ ವಿಲ್ಡರ್‌ನೆಸ್‌ನಲ್ಲಿ ಡಜನ್‌ಗಟ್ಟಲೆ ಕಾಡು ಜಾನುವಾರುಗಳನ್ನು ಕೊಲ್ಲಲು ಹೆಲಿಕಾಪ್ಟರ್ ಮೂಲಕ ಶೂಟರ್‌ಗಳನ್ನು ಅಧಿಕಾರಿಗಳು ನಿಯೋಜಿಸಿದ್ದಾರೆ ಎಂದು ಅಮೆರಿಕದ ಅರಣ್ಯ ವಿಭಾಗ ಈ ವಾರ ಮಾಹಿತಿ ನೀಡಿದೆ.

    ಗುರುವಾರದಿಂದ ಪ್ರಾರಂಭವಾಗಲಿರುವ ನಾಲ್ಕು ದಿನಗಳ ಈ ಸಮೂಹ ಪಶು ಹತ್ಯೆಯಲ್ಲಿ ಗಿಲಾದ ಪರ್ವತಗಳು ಮತ್ತು ಪ್ರಪಾತದ ಕಣಿವೆಗಳ ನಡುವೆ ಅಳಿವಿನಂಚಿನಲ್ಲಿರುವ ಪ್ರಭೇದಗಳ ಪರಿಸರ ವ್ಯವಸ್ಥೆಗಳನ್ನು ನಾಶಪಡಿಸುತ್ತಿರುವ ಸುಮಾರು 150 ಹಸುಗಳನ್ನು ಕೊಲ್ಲಲಾಗುತ್ತದೆ ಎಂದು ಪರಿಸರವಾದಿಗಳು ಹೇಳುತ್ತಾರೆ.

    ದನಗಳನ್ನು ಹೆಲಿಕಾಪ್ಟರ್​ನಿಂದ ಗುಂಡು ಹಾರಿಸುವುದು ಅವುಗಳ ಸಂಖ್ಯೆಯನ್ನು ನಿರ್ವಹಿಸಲು ಬಳಸುವ ಕ್ರೂರ ಮತ್ತು ಅಸಮರ್ಥವಾದ ಮಾರ್ಗವಾಗಿದೆ ಎಂದು ಅಏಕರು ಹೇಳುತ್ತಿದ್ದಾರೆ. ಅರಣ್ಯ ಮೇಲ್ವಿಚಾರಕ ಕ್ಯಾಮಿಲ್ಲೆ ಹೋವೆಸ್, ವನ್ಯಜೀವಿಗಳ ಆವಾಸಸ್ಥಾನಗಳು ಮತ್ತು ಸಾರ್ವಜನಿಕರನ್ನು ರಕ್ಷಿಸಲು ಅತ್ಯಂತ ಮಾನವೀಯ ಮಾರ್ಗವಾಗಿದೆ, ಹಲವು ವರ್ಷಗಳಲ್ಲಿ ಇದು ಎರಡನೆಯ ಬಾರಿ ನಡೆಯುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts