More

    ಟಿಬೆಟ್, ಹಾಂಕಾಂಗ್​ಗೆ ಸ್ವತಂತ್ರ ದೇಶದ ಮನ್ನಣೆ ನೀಡಿದ ಅಮೆರಿಕ

    ವಾಷಿಂಗ್ಟನ್: ಕರೊನಾ ವಿಷಯದಲ್ಲಿ ಆರೋಪ ಮತ್ತು ಪ್ರತ್ಯಾರೋಪ ಮಾಡುತ್ತಿರುವ ಅಮೆರಿಕ ಹಾಗೂ ಚೀನಾ ಮಧ್ಯೆ ರಾಜಕೀಯ ವೈಷಮ್ಯ ಹೆಪು್ಪಗಟ್ಟುತ್ತಿದೆ. ಚೀನಾದ ಭಾಗವಾಗಿರುವ ಸ್ವಾಯತ್ತ ಟಿಬೆಟ್ ಮತ್ತು ಹಾಂಕಾಂಗ್​ಗಳನ್ನು ಸ್ವತಂತ್ರ ದೇಶವೆಂದು ಮನ್ನಣೆ ನೀಡುವ ಎರಡು ಮಸೂದೆ ಕಾಂಗ್ರೆಸ್​ನಲ್ಲಿ (ಸಂಸತ್) ಮಂಡನೆಯಾಗಿದೆ.

    ಇದರಿಂದ ಚೀನಾ ಕಣ್ಣು ಕೆಂಪಗಾಗಿದೆ. ಪೀಪಲ್ಸ್ ರಿಪಬ್ಲಿಕ್ ಚೀನಾದ ಅಂಕೆಯಲ್ಲಿರುವ ಟಿಬೆಟ್ ಸ್ವಾಯತ್ತ ಭೂಪ್ರದೇಶ ಮತ್ತು ‘ಒಂದು ದೇಶ, ಎರಡು ವ್ಯವಸ್ಥೆ’ ಆಧಾರದಲ್ಲಿ ಸ್ವಯಂ ಆಡಳಿತ ಹೊಂದಿರುವ ಹಾಂಕಾಂಗ್​ನನ್ನು ಸ್ವತಂತ್ರ ದೇಶವೆಂದು ಮಾನ್ಯ ಮಾಡುವ ಅಧಿಕಾರವನ್ನು ಅಧ್ಯಕ್ಷರಿಗೆ ನೀಡುವ ಮಸೂದೆಯನ್ನು ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಸಂಸದ ಸ್ಕಾಟ್ ಪೆರ್ರಿ ಮಂಡಿಸಿದ್ದಾರೆ. ಈ ಎರಡೂ ಮಸೂದೆಗಳನ್ನು ವಿದೇಶಾಂಗ ವ್ಯವಹಾರ ಕುರಿತು ಸದನ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿದೆ. ಸಮಿತಿಯು ವರದಿ ನೀಡಿದ ನಂತರ ಮಸೂದೆಯು ಪ್ರತಿನಿಧಿಗಳ ಸಭೆ (ಸಂಸತ್​ನ ಕೆಳಮನೆ) ಮತ್ತು ಸೆನೆಟ್ (ಮೇಲ್ಮನೆ) ಮುಂದೆ ಅನುಮೋದನೆಗೆ ಬರಲಿದೆ.

    ಸ್ವಾತಂತ್ರ್ಯ ಪ್ರಿಯರ ಸ್ವಾಗತ

    ಟಿಬೆಟ್​ಗೆ ಸ್ವತಂತ್ರ ದೇಶದ ಸ್ಥಾನಮಾನ ನೀಡುವ ಅಮೆರಿಕದ ಈ ಮಸೂದೆಯನ್ನು ಟಿಬೆಟ್ ದೇಶಾಂತರ ಸರ್ಕಾರದ ಬೆಂಬಲಿಗರು ಸ್ವಾಗತಿಸಿದ್ದಾರೆ. ಇದು ಈಗ ಅಥವಾ ನಂತರದಲ್ಲಿ ಯಾವಾಗ ಬೇಕಾದರೂ ಆಗಲಿ. ಆದರೆ, ಮಸೂದೆ ಮಂಡನೆ ಸ್ವಾಗತಾರ್ಹ. ಟಿಬೆಟ್ ಅನ್ನು ಸ್ವತಂತ್ರ ದೇಶವೆಂದು ಗುರುತಿಸುವುದಕ್ಕಿಂತ ದೊಡ್ಡ ನಿರ್ಬಂಧ ಚೀನಾ ಮೇಲೆ ಬೇರಾವುದು ಇಲ್ಲ ಎಂದಿದ್ದಾರೆ.

    ‘ಗಡಿ ವಿವಾದ ಸಂಬಂಧವನ್ನು ಹಾಳುಗೆಡುವದಿರಲಿ’: ಮಾತುಕತೆಯತ್ತ ಒಲವು ತೋರಿದ ಚೀನಾ ರಾಯಭಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts