More

    ಎಲ್ಲ ಸಾರ್ವಜನಿಕ ನವರಾತ್ರಿ ಉತ್ಸವ ಸ್ಥಳಗಳಲ್ಲಿ ಆ್ಯಂಬುಲೆನ್ಸ್​, ತುರ್ತು ಆರೋಗ್ಯ ಸೌಲಭ್ಯ ಕಡ್ಡಾಯ: ಸಿಎಂ ಶಿಂಧೆ ಆದೇಶ

    ಮುಂಬೈ: ಗಣೇಶ ಚೌತಿ ಸಂದರ್ಭದಲ್ಲಿ ಮಣ್ಣಿನ ಗಣೇಶ ಮೂರ್ತಿಗಳನ್ನಷ್ಟೇ ಬಳಸಿ, ದೀಪಾವಳಿಗೆ ಹಸಿರು ಪಟಾಕಿಗಳನ್ನಷ್ಟೇ ಸಿಡಿಸಿ ಎಂಬಂಥ ಆದೇಶಗಳು ಸರ್ಕಾರದಿಂದ ಹೊರಬೀಳುತ್ತಿರುತ್ತವೆ. ಅದೇ ರೀತಿ ಇದೀಗ ನವರಾತ್ರಿ ಉತ್ಸವ ಆಚರಣೆಗೆ ಸಂಬಂಧಿಸಿದಂತೆಯೂ ಸರ್ಕಾರದಿಂದ ಆದೇಶವೊಂದು ಹೊರಡಿಸಲಾಗಿದೆ.

    ನವರಾತ್ರಿ ಉತ್ಸವವನ್ನು ಆಚರಿಸುವ ಎಲ್ಲ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮೂಲಭೂತ ತುರ್ತು ಆರೋಗ್ಯ ಸೌಲಭ್ಯಗಳ ಜತೆಗೆ ಆಂಬ್ಯುಲೆನ್ಸ್ ಕೂಡ ಒದಗಿಸುವುದು ಕಡ್ಡಾಯವಾಗಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಗುರುವಾರ ಆದೇಶಿಸಿದ್ದಾರೆ.

    ಸಾರ್ವಜನಿಕ ನವರಾತ್ರಿ ಸಂಘಟಿಸುವ ಕೆಲವರು ನಿಯೋಗವೊಂದರ ಜತೆಗೆ ಅವರನ್ನು ಇಂದು ಮಧ್ಯಾಹ್ನ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಇಂಥದ್ದೊಂದು ಆದೇಶ ಹೊರಬಿದ್ದಿದೆ.

    ಕೋವಿಡ್ ಸಾಂಕ್ರಾಮಿಕ ಪಿಡುಗಿನ ಬಳಿಕದ ಕಾಲದಲ್ಲಿ ಕೆಲವು ಸ್ಥಳಗಳಲ್ಲಿ ಒತ್ತಡ, ಹೃದಯಾಘಾತ ಮತ್ತು ಇತರ ದುರದೃಷ್ಟಕರ ದುರಂತಗಳಿಂದಾಗಿ ಜನರು ಕುಸಿದು ಬಿದ್ದ ಉದಾಹರಣೆಗಳಿವೆ. ಇದಲ್ಲದೆ, ರಕ್ತದೊತ್ತಡ, ಮಧುಮೇಹ, ಸ್ಥೂಲಕಾಯತೆ ಮುಂತಾದ ಕೆಲವು ಜೀವನಶೈಲಿ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಜನರೂ ಇದ್ದಾರೆ. ಹೀಗಾಗಿ ಯಾವುದೇ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಸ್ಥಳಗಳಲ್ಲಿ ಮೂಲಭೂತ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ ಎಂದು ಈ ನಿಯೋಗ ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಿಎಂ ಈ ಆದೇಶ ಹೊರಡಿಸಿದ್ದಾರೆ.

    ಸಾರ್ವಜನಿಕವಾಗಿ ನವರಾತ್ರಿ ಉತ್ಸವ ಆಯೋಜಿಸುವ ಹಲವರು ಸಂಘಟಕರು ಅಂತ ಸ್ಥಳಗಳಲ್ಲಿ ಪ್ರಾಥಮಿಕ ಆರೋಗ್ಯ ಸೌಲಭ್ಯಗಳಿಗಾಗಿ ವ್ಯವಸ್ಥೆಗಳನ್ನು ಮಾಡುತ್ತಾರೆ. ಆದರೆ ಇನ್ನು ಅನೇಕರು ಈ ನಿರ್ಣಾಯಕ ಅಂಶವನ್ನು ನಿರ್ಲಕ್ಷಿಸುತ್ತಾರೆ. ಹೀಗಾಗಿ ಎಲ್ಲ ಸಾರ್ವಜನಿಕ ನವರಾತ್ರಿ ಸಂಘಟಕರು ಆ ಸ್ಥಳದಲ್ಲಿ ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಮತ್ತು ಸಂಪೂರ್ಣ ಸುಸಜ್ಜಿತ ಆಂಬ್ಯುಲೆನ್ಸ್​ಗಳನ್ನು ನಿಯೋಜಿಸುವುದು ಕಡ್ಡಾಯ ಎಂದು ಸಿಎಂ ಆದೇಶಿಸಿದರು.

    ಭಿಕ್ಷೆ ಬೇಡುತ್ತಿದ್ದ ವಿದೇಶಿ ಮಹಿಳೆಯ ಬದುಕು ಬದಲಿಸಿದ ಭಾರತೀಯ; ಯಾರೀಕೆ, ಈಗೇನು ಮಾಡುತ್ತಿದ್ದಾರೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts