More

    ಅಂಬೇಡ್ಕರ್ ಚಿಂತನೆಗಳು ಅಗತ್ಯ: ಅಶೋಕ್ ಚಲವಾದಿ

    ಶಿವಮೊಗ್ಗ: ಸಮ ಸಮಾಜ, ಸರ್ವೋದಯ ಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್ ಚಿಂತನೆಗಳು ಅಗತ್ಯ. ಅವರ ಚಿಂತನೆಗಳನ್ನು ಎಲ್ಲರ ಮನ-ಮನೆಗಳಿಗೆ ತಲುಪಿಸುವ ಅಗತ್ಯವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ವಿಭಾಗದ ಜಂಟಿ ನಿರ್ದೇಶಕ ಅಶೋಕ್ ಎನ್.ಚಲವಾದಿ ಹೇಳಿದರು.

    ಕುವೆಂಪು ವಿವಿಯಲ್ಲಿ ಮಂಗಳವಾರ ವಿಶೇಷ ಉಪನ್ಯಾಸ ಮತ್ತು ಬಹುಮಾನ ವಿತರಣಾ ಸಮಾರಂಭ ಉದ್ಘಾಟಸಿ ಮಾತನಾಡಿದ ಅವರು, ಜೀವನವನ್ನು ದಿಟ್ಟತನದಿಂದ ಎದುರಿಸಿ ಬದುಕುವುದನ್ನು ಮೊದಲು ಕಲಿಯಬೇಕು ಎಂಬುದೇ ಅಂಬೇಡ್ಕರ್ ಅವರ ಬಹುದೊಡ್ಡ ಜೀವನ ಸಂದೇಶ ಎಂದರು.
    ವಿವಿ ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ ಮಾತನಾಡಿ, ಇಡೀ ಜೀವನವನ್ನು ಸಮಾಜದ ಸೇವೆಗೆ ಮೀಸಲಿಟ್ಟ ಮಹೋನ್ನತ ನಾಯಕ ಅಂಬೇಡ್ಕರ್. ಅವರ ಚಿಂತನ-ಮಂಥನದ ಫಲವಾಗಿ ಪ್ರಜಾಪ್ರಭುತ್ವ ಯಶಸ್ವಿಯಾಗಿದೆ. ಸಮಾಜದ ಎಲ್ಲರೂ ಭಾಗವಹಿಸಲು ಮತ್ತು ದೇಶದ ಮುಖ್ಯವಾಹಿನಿಗೆ ಬರುವುದು ಅವಶ್ಯ. ಇಲ್ಲದೇ ಹೋದರೆ ಇಡೀ ವ್ಯವಸ್ಥೆ ಅಸಮಾನತೆಗಳ ಕೊಂಪೆಯಾಗಿ ಕುಸಿದುಬೀಳುವ ಅಪಾಯವಿರುತ್ತದೆ ಎಂದು ಹೇಳಿದರು.
    ಪ್ರಭಾರ ಕುಲಪತಿ ಪ್ರೊ.ಎಸ್.ವೆಂಕಟೇಶ್ ಮಾತನಾಡಿ, ದಿಕ್ಕೆಟ್ಟ ಭಾರತೀಯ ಸಮಾಜವನ್ನು ಸಮಾನತೆಯ ತತ್ವ, ಸಾಮಾಜಿಕ ಏಳಿಗೆ, ಸ್ಥಿರ ಪ್ರಜಾಪ್ರಭುತ್ವದ ಮೂಲಕ ಭಾರತದ ಬದಲಾವಣೆಗೆ ನಾಂದಿ ಹಾಡಿದ ಅಂಬೇಡ್ಕರ್, ಭಾರತದ ಇತಿಹಾಸದಲ್ಲಿನ ಕೆಲವೇ ಮಹಾಮೇಧಾವಿಗಳಲ್ಲಿ ಒಬ್ಬರಾಗಿದ್ದಾರೆ ಎಂದರು.
    ಪ್ರಾಧ್ಯಾಪಕ ಡಾ.ನಟರಾಜ್, ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ನೆಲ್ಲಿಕಕಟ್ಟೆ ಎಸ್.ಸಿದ್ದೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಉಮೇಶ್, ಆಕಾಶವಾಣಿ ಕಲಾವಿದ ಕುಣಿಗಲ್ ರಾಮಚಂದ್ರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts