More

    ಸಂವಿಧಾನ ರಚನೆಯಲ್ಲಿ ಹಗಲಿರುಳು ಶ್ರಮ

    ಕೂಡ್ಲಿಗಿ: ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸ್ವಾತಂತ್ರೃದ ಭಾರತದ ಪ್ರಥಮ ಕಾನೂನು ಮಂತ್ರಿಯಾಗಿ ಭಾರತದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಎಸ್.ದುರುಗೇಶ್ ಹೇಳಿದರು.

    ಅಂಬೇಡ್ಕರರ ಕೊಡುಗೆ ಅಪಾರ

    ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ದಲಿತ ಸಂಘನೆಗಳು ಹಮ್ಮಿಕೊಂಡ ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಭಾರತ ಸಂವಿಧಾನ ರಚಿಸುವಲ್ಲಿ ಅಂಬೇಡ್ಕರ್ ಅವರು ಹಗಲಿರುಳು ಶ್ರಮಿಸಿದ್ದಾರೆ. ಭಾರತದ ಎಲ್ಲ ವರ್ಗದ ಜನರಿಗೂ ಸೌಲಭ್ಯಗಳು ತಲುಪಲು ಪ್ರಮುಖ ಪಾತ್ರವಹಿಸಿದ್ದರು ಎಂದರು.

    ಇದನ್ನೂ ಓದಿ: ಯತ್ನಾಳ್​​ ಒತ್ತಾಯದ ಮೇರೆಗೆ PSI Exam ಮುಂದೂಡಿಕೆ

    ಅಂಬೇಡ್ಕರ್ ಅವರು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಸಫಲರಾಗಿದ್ದಾರೆ. ಇಡೀ ವಿಶ್ವದಲ್ಲೇ ಭಾರತದ ಸಂವಿಧಾನಕ್ಕೆ ತನ್ನದೇ ಆದ ಘನತೆಯನ್ನು ಹೊಂದಿದೆ. ಅದರ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಂವಿಧಾನ ರಚಿಸಿ ಇಡೀ ವಿಶ್ವಕ್ಕೆ ಸಮಾನತೆ ಸಾರಿದ ಈ ಶತಮಾನದ ಯುಗ ಪುರುಷ ಎಂದು ಬಣ್ಣಿಸಿದರು.

    ಡಿಎಸ್‌ಎಸ್ ತಾಲೂಕಾಧ್ಯಕ್ಷ ಡಿ.ಎಚ್.ದುರುಗೇಶ್, ಜಿಲ್ಲಾ ಸಂಘಟನಾ ಸಂಚಾಲಕ ಕಂದುಗಲ್ಲು ಪರಶುರಾಮ,ಅಂಬೇಡ್ಕರ್ ಸಂಘದ ಅಧ್ಯಕ್ಷ ಗುಣಸಾಗರ ಕೃಷ್ಣಪ್ಪ, ತಾಲೂಕು ಸಂಚಾಲಕ ಹೊಸಹಳ್ಳಿ ಗಂಗಾಧರ, ಮುಖಂಡರಾದ ಹಿರೇಕುಂಬಳಗುಂಟೆ ಉಮೇಶ್, ಡಿ.ಹನುಮೇಶ್, ಸಾಲುಮನಿ ರಾಘವೇಂದ್ರ, ಬಂಡೆ ರಾಘವೇಂದ್ರ, ಮೂಗಪ್ಪ, ಬಿ.ಮಹೇಶ, ಅಜ್ಜಯ್ಯ, ತುಂಬರಗುದ್ದಿ ದುರುಗೇಶ್.ಎಚ್.ರಮೇಶ್ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts