More

    ನಾಳೆಯಿಂದ ಅಂಬಟ್ಟಿ ಮಖಾಂ ಉರುಸ್

    ಗೋಣಿಕೊಪ್ಪ: ವಿರಾಜಪೇಟೆ ಸಮೀಪದ ಅಂಬಟ್ಟಿ ದರ್ಗಾ ಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಶೇಕ್ ವಲಿಯುಲ್ಲಾಹಿ ಅವರ ಹೆಸರಿನಲ್ಲಿ ವರ್ಷಂಪ್ರತಿ ನಡೆಯುವ ಅಂಬಟ್ಟಿ ಮಖಾಂ ಉರುಸ್ (ಅಂಬಟ್ಟಿ ನೇರ್ಚೆ) ಫೆ.16 ರಿಂದ 20 ರವರೆಗೆ ನಡೆಯಲಿದೆ.

    16ರಂದು ಅಂಬಟ್ಟಿ ಜಮಾಅತಿನ ಅಧ್ಯಕ್ಷ ಎ.ಎಚ್. ಶಾದುಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಉರುಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಖಾಂ ಆವರಣದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನೆಗೆ ಅಂಬಟ್ಟಿ ಜುಮಾ ಮಸೀದಿಯ ಖತೀಬ ರಫೀಕ್ ಸಅದಿ ನೇತೃತ್ವ ವಹಿಸಲಿದ್ದಾರೆ. ರಾತ್ರಿ 7 ಗಂಟೆಗೆ ಉರುಸ್‌ನ ಆಕರ್ಷಣೆ ಅಂಬಟ್ಟಿ ಮಖಾಂ ಅಲಂಕಾರ ಮತ್ತು ಸಂದಲ್ ಕಾರ್ಯಕ್ರಮ ಆಯೋಜಿಸಲಾಗಿದೆ.

    ಫೆ.17ರಿಂದ 20ರವರೆಗೆ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು, ಫೆ.20ರಂದು ಮಂಗಳವಾರ ಮಧ್ಯಾಹ್ನ ಅಂಬಟ್ಟಿ ಗ್ರಾಮವಾಸಿಗಳ ಸಂಗಮದ ನಂತರ ಉರುಸ್‌ಗೆ ತೆರೆ ಬೀಳಲಿದೆ ಎಂದು ಅಂಬಟ್ಟಿ ಜುಮ್ಮಾ ಮಸೀದಿ ಹಾಗೂ ಅಂಬಟ್ಟಿ ಮಖಾಂ ಉರುಸ್ ಆಯೋಜನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts