More

    ಬೆಂಗಳೂರಿನ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಜೊಮ್ಯಾಟೊ, ಸ್ವಿಗ್ಗಿಗೆ ಹೊಸ ಪ್ರತಿಸ್ಪರ್ಧಿ ಅಮೆಜಾನ್​!

    ನವದೆಹಲಿ: ಬೆಂಗಳೂರಿನ ಫುಡ್​ ಡೆಲಿವರಿ ಕ್ಷೇತ್ರದಲ್ಲಿ ಸದ್ಯಕ್ಕೆ ಜೊಮ್ಯಾಟೋ ಮತ್ತು ಸ್ವಿಗ್ಗಿ ಮುಂಚೂಣಿಯಲ್ಲಿದ್ದು, ಇವರೆಡಕ್ಕೆ ಪ್ರತಿಸ್ಪರ್ಧಿಯಾಗಿ ಈಗ ಆನ್​ಲೈನ್ ಮಾರ್ಕೆಟ್ ದಿಗ್ಗಜ ಸಂಸ್ಥೆ ಅಮೆಜಾನ್ ಕೂಡ ಕಾಲಿಡುತ್ತಿದೆ. ಅಮೆಜಾನ್ ಇಂಡಿಯಾಗ ಗುರುವಾರ ಈ ವಿಷಯವನ್ನು ಪ್ರಕಟಿಸಿದ್ದು, ಬೆಂಗಳೂರಿನ ಆಯ್ದ ಭಾಗಗಳಲ್ಲಿ ಫುಡ್​ ಡೆಲಿವರಿಯನ್ನು ಮಾಡುವುದಾಗಿ ಘೋಷಿಸಿದೆ.

    ಜೊಮ್ಯಾಟೋ ಮತ್ತು ಸ್ವಿಗ್ಗಿ ಕೋವಿಡ್​ 19 ಲಾಕ್​ಡೌನ್​ ಕಾರಣಕ್ಕೆ 1,600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದ ಬೆನ್ನಿಗೇ ಅಮೆಜಾನ್​ನ ಈ ನಡೆ ಹೊಸ ಆಶಾಕಿರಣವನ್ನೂ ಉದ್ಯೋಗ ವಲಯದಲ್ಲಿ ಮೂಡಿಸಿದೆ. ಕೆಲವು ತಿಂಗಳುಗಳ ಮಟ್ಟಿಗೆ ಇದು ಪ್ರಾಯೋಗಿಕವಾಗಿರಲಿದೆ ಎಂಬುದನ್ನೂ ಅದು ಘೋಷಿಸಿದೆ. ಅಗತ್ಯ ವಸ್ತುಗಳ ಜತೆಗೆ ಆಹಾರವನ್ನೂ ಆರ್ಡರ್​ ಮಾಡಲು ಬಯಸುತ್ತಿರುವುದಾಗಿ ಅನೇಕ ಗ್ರಾಹಕರು ಅಮೆಜಾನ್​ಗೆ ತಿಳಿಸಿದ್ದು, ಅದನ್ನು ಈಡೇರಿಸಲು ಪ್ರಯತ್ನಿಸುವುದಕ್ಕೆ ಇದು ಸಕಾಲ ಎಂದು ಕಂಪನಿ ಮನಗಂಡಿದೆ. ಹೀಗಾಗಿಯೇ ಸ್ಥಳೀಯ ಆಹಾರೋದ್ಯಮಗಳನ್ನು ಗುರುತಿಸಿ ಅವುಗಳ ಜತೆಗೆ ಒಪ್ಪಂದ ಮಾಡಿಕೊಂಡು ಬೆಂಗಳೂರಿನ ಆಯ್ದ ಭಾಗಗಳಲ್ಲಿ ಫುಡ್ ಡೆಲಿವರಿ ಮಾಡಲು ಮುಂದಾಗಿದ್ದೇವೆ ಎಂದು ಅಮೆಜಾನ್ ಇಂಡಿಯಾದ ವಕ್ತಾರ ತಿಳಿಸಿದ್ದಾರೆ.

    ಇದನ್ನೂ ಓದಿ: ಅಮೆಜಾನ್​ನಿಂದ 10 ಲಕ್ಷ ಉದ್ಯೋಗ ಸೃಷ್ಟಿ; ಸಣ್ಣ ಕೈಗಾರಿಕೆಗಳಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ, ದೇಶಿ ಉತ್ಪನ್ನಗಳ ರಫ್ತಿಗೆ ಸಿದ್ಧತೆ

    ಆರಂಭಿಕ ಹಂತದಲ್ಲಿ ಬೆಂಗಳೂರಿನ ಆಯ್ದ ಪಿನ್​ಕೋಡ್​ಗಳಲ್ಲಿ ಅಂದರೆ ಮಹದೇವಪುರ, ಮಾರತ್ತಹಳ್ಳಿ, ವೈಟ್​ಫೀಲ್ಡ್​, ಬೆಳ್ಳಂದೂರು ವ್ಯಾಪ್ತಿಯಲ್ಲಿ ಲಭ್ಯವಿರಲಿದೆ. ಇಲ್ಲಿನ ಬಾಕ್ಸ್8, ಚಾಯ್​ ಪಾಯಿಂಟ್​, ಫಸ್ಸೋಸ್​, ಮಾಡ್​ ಓವರ್ ಡೋನಟ್ಸ್​, ರಾಡಿಸ್ಸನ್​, ಮ್ಯಾರಿಯಟ್​​ ಸೇರಿ 100ಕ್ಕೂ ಹೆಚ್ಚು ರೆಸ್ಟೋರೆಂಟ್​ಗಳ ಜತೆಗೆ ಅಮೆಜಾನ್ ಒಪ್ಪಂದ ಮಾಡಿಕೊಂಡಿದೆ. ಅಮೆಜಾನ್ ಆ್ಯಪ್​ ಬಳಕೆದಾರರು ಈ ಪಿನ್ ಕೋಡ್ ವ್ಯಾಪ್ತಿಗೆ ಬಂದಾಗ ಅಥವಾ ಇಲ್ಲಿರುವ ಅಮೆಜಾನ್ ಬಳಕೆದಾರ ಆ್ಯಪ್​ನಲ್ಲಿ ಫುಡ್​ ಆರ್ಡರ್ ಆಪ್ಶನ್ ಕಾಣಿಸಕೊಳ್ಳಲಿದೆ. ಮುಂದಿನ ಆರು ತಿಂಗಳ ಅವಧಿಗೆ ಈ ಪ್ರಾಯೋಗಿಕ ಸೇವೆ ಮುಂದುವರಿಯಲಿದ್ದು, ತೃಪ್ತಿಕರವೆನಿಸಿದಲ್ಲಿ ದೇಶಾದ್ಯಂತ ಈ ಸೇವಾಜಾಲ ವಿಸ್ತರಣೆಗೊಳ್ಳಲಿದೆ. ಆದರೆ, ಯಾವ ರೀತಿ ವಿಸ್ತರಣೆ ಆಗಲಿದೆ ಎಂಬುದನ್ನು ಕಂಪನಿ ವಕ್ತಾರರು ತಿಳಿಸಿಲ್ಲ.

    ಇದನ್ನೂ ಓದಿ: ಕಾನೂನುಗಳನ್ನು ಮುರಿದು ಉದ್ಯೋಗ ಸೃಷ್ಟಿಸುವ ಅವಶ್ಯಕತೆ ಇಲ್ಲ: ಅಮೆಜಾನ್​ಗೆ ಪಿಯೂಷ್​ ಗೋಯೆಲ್​ ಪ್ರತಿಕ್ರಿಯೆ

    ಇದಕ್ಕೂ ಮುನ್ನ ಈ ಕ್ಷೇತ್ರದಲ್ಲಿ ಜೊಮ್ಯಾಟೋ ಭಾರತದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸುವ ಸಲುವಾಗಿ ಉಬರ್ ಈಟ್ಸ್​ ಅನ್ನು ಖರೀದಿಸಿತ್ತು. ಆದಾಗ್ಯೂ ಮಾರ್ಚ್ 25ರಿಂದ ಚಾಲ್ತಿಯಲ್ಲಿರುವ ಲಾಕ್​ಡೌನ್​ ಕಾರಣ ಜೊಮ್ಯಾಟೋ ಮತ್ತು ಸ್ವಿಗ್ಗಿಗಳ ವಹಿವಾಟಿಗೆ ಹೊಡೆತ ಉಂಟಾಗಿದೆ. (ಏಜೆನ್ಸೀಸ್)

    ‘ಫೇಸ್​ಬುಕ್​ ಶಾಪ್ಸ್​’ನಲ್ಲಿ Buy ಗೆ ಮಾರ್ಪಾಡಾಗುತ್ತೆ Like; ಆನ್​ಲೈನ್​ ಶಾಪಿಂಗ್​ನಲ್ಲಿ ಅಮೆಜಾನ್​ ವಿರುದ್ಧ ಸೆಣಸು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts