More

    ವೇಯ್ಟಲಿಫ್ಟಿಂಗ್ ಚಾಂಪಿಯನ್‌ಷಿಪ್, ಆಳ್ವಾಸ್ ಕಾಲೇಜಿಗೆ ಅವಳಿ ಪ್ರಶಸ್ತಿ

    ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಕಾಲೇಜು ಸಹಯೋಗದಲ್ಲಿ ಸ್ಕೌಟ್ಸ್-ಗೈಡ್ಸ್ ಕನ್ನಡ ಭವನದಲ್ಲಿ ಆಯೋಜಿಸಿದ್ದ ವಿವಿ ಮಟ್ಟದ ಅಂತರ್ ಕಾಲೇಜು ವೇಯ್ಟಲಿಫ್ಟಿಂಗ್ ಚಾಂಪಿಯನ್‌ಷಿಪ್‌ನ ಪುರುಷ ಹಾಗೂ ಮಹಿಳೆಯರ ಎರಡೂ ವಿಭಾಗಗಳಲ್ಲಿ ಅತಿಥೇಯ ಆಳ್ವಾಸ್ ಕಾಲೇಜು ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

    ಒಟ್ಟು 19 ನೂತನ ಕೂಟ ದಾಖಲೆ ನಿರ್ಮಾಣಗೊಂಡಿದ್ದು, ಅವುಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು 13 ಕೂಟ ದಾಖಲೆ ನಿರ್ಮಿಸಿದ್ದಾರೆ. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಸತತ 18ನೇ ಬಾರಿಗೆ ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

    ನೂತನಕೂಟ ದಾಖಲೆಗಳು: ಪುರುಷರ 55 ಕೆ.ಜಿ. ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಪ್ರಶಾಂತ ಕ್ಲೀನ್ ಮತ್ತು ಜರ್ಕ್-113 ಕೆ.ಜಿ. ಭಾರ ಎತ್ತುವ ಮೂಲಕ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ. 109 ಕೆ.ಜಿ. ವಿಭಾಗದಲ್ಲಿ ಆಳ್ವಾಸ್‌ನ ಪ್ರತ್ಯುಷ್ ಸ್ನ್ಯಾಚ್-117 ಕೆ.ಜಿ. ಕ್ಲೀನ್ ಮತ್ತು ಜರ್ಕ್-162 ಕೆ.ಜಿ. ಒಟ್ಟು 279 ಕೆ.ಜಿ. ಭಾರ ಎತ್ತುವ ಮೂಲಕ ಮೂರು ವಿಭಾಗಗಳಲ್ಲಿಯೂ ನೂತನ ಕೂಟ ದಾಖಲೆ ಬರೆದಿದ್ದಾರೆ.

    ಮಹಿಳೆಯರ ವಿಭಾಗದಲ್ಲಿ 45 ಕೆ.ಜಿ.ವಿಭಾಗದಲ್ಲಿ ಆಳ್ವಾಸ್ ಕಾಲೇಜಿನ ಯಾಸ್ಮಿನ್(ಸ್ನ್ಯಾಚ್-33 ಕೆ.ಜಿ. ಕ್ಲೀನ್ ಮತ್ತು ಜರ್ಕ್-53 ಕೆ.ಜಿ. ಒಟ್ಟು-88 ಕೆ.ಜಿ), 55 ಕೆ.ಜಿ. ವಿಭಾಗದಲ್ಲಿ ಲಕ್ಷ್ಮೀ (ಸ್ನ್ಯಾಚ್- 69 ಕೆ.ಜಿ. ಕ್ಲೀನ್ ಜರ್ಕ್-91 ಕೆ.ಜಿ. ಒಟ್ಟು-160 ಕೆ.ಜಿ.), ತನುಷಾ ಸ್ನ್ಯಾಚ್-76 ಕೆ.ಜಿ. ಕ್ಲೀನ್ ಮತ್ತು ಜರ್ಕ್-105 ಕೆ.ಜಿ. ಒಟ್ಟು-181 ಕೆ.ಜಿ. ಭಾರ ಎತ್ತುವ ಮೂಲಕ ಮೂರು ವಿಭಾಗಗಳಲ್ಲಿ ನೂತನ ಕೂಟ ದಾಖಲೆ ಬರೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts