More

    ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಅಗತ್ಯಕ್ಕಿಂತ ಹೆಚ್ಚಿಲ್ಲ: ಮಾಯಣ್ಣಗೌಡ

    ಶಿವಮೊಗ್ಗ: ತುಂಗಾ ನದಿಯಲ್ಲಿ ಅಲ್ಯೂಮಿನಿಯಂ ಅಂಶ ಅಗತ್ಯಕ್ಕಿಂತ ಹೆಚ್ಚಾಗಿರುವ ಬಗ್ಗೆ ಬಂದಿರುವ ವರದಿ ಆಘಾತಕಾರಿ. ಆದರೆ ಮತ್ತೊಂದು ವರದಿಯಲ್ಲಿ ಅಲ್ಯೂಮಿನಿಯಂ ಅಂಶ ಅಗತ್ಯಕ್ಕಿಂತ ಹೆಚ್ಚಾಗಿಲ್ಲ ಎಂಬುದು ತಿಳಿದುಬಂದಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ತಿಳಿಸಿದರು.

    ಶಾಸಕರ ಕರ್ತವ್ಯ ಭವನದಲ್ಲಿ ಮಂಗಳವಾರ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಅಲ್ಯೂಮಿನಿಯಂ ಅಂಶ ಆರಂಭದಿಂದ ಇದ್ದು 12 ಕಡೆ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ವಿಸ್ತೃತ ವರದಿಯನ್ನು ಸರ್ಕಾರಕ್ಕೆ ನೀಡಲಾಗುವುದು ಎಂದರು.
    ಸರ್ಕಾರದಿಂದ ಬಂದಿರುವ ಅನುದಾನವನ್ನು ಶುದ್ಧ ತುಂಗಾ ಯೋಜನೆಗೆ ಬಳಸಲು ಅವಕಾಶವಿದೆ. 2.82 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ನೀರು ಶುದ್ಧಿಕರಣ ಘಟಕಗಳ ಬಲವರ್ಧನೆ, 40 ಕೋಟಿ ರೂ. ವೆಚ್ಚದಲ್ಲಿ ತುಂಗಾ ನದಿ ಶುದ್ಧೀಕರಿಣ ಹಾಗೂ 20 ಕೋಟಿ ರೂ. ವೆಚ್ಚದಲ್ಲಿ ನಗರ ವ್ಯಾಪ್ತಿಯ 5 ಕೆರೆಗಳನ್ನು ಅಭಿವೃದ್ಧಿ ಪಡಿಸಿ ಕಲುಷಿತ ನೀರು ಕೆರೆಗಳಿಗೆ ಸೇರದಂತೆ ತಡೆಯಬೇಕಿದೆ ಎಂದು ಹೇಳಿದರು.
    ಮೂರು ಹಣದ ಮೂಲವನ್ನು ಬಳಸಿಕೊಂಡು ನದಿಗೆ ಕಲುಷಿತ ನೀರು ಸೇರದಂತೆ ಕ್ರಮ ವಹಿಸಲು ಕ್ರಿಯಾಯೋಜನೆ ರೂಪಿಸಬೇಕಿದೆ. ನಗರದ 9 ಕಡೆ ಕಲುಷಿತ ನೀರನ್ನು ಶುದ್ಧಿಕರಿಸಿ ನದಿಗೆ ಬಿಡಬೇಕು. ಈ ನಿಟ್ಟಿನಲ್ಲಿ ಕೊಳಚೆ ನಿರ್ಮೂಲನಾ ಮಂಡಳಿ ಮಾಡುವ ಈ ಕೆಲಸಗಳಿಗೆ ಪಾಲಿಕೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು. ಮಂಡಳಿ ಅಧಿಕಾರಿಗಳು ಅಗತ್ಯ ತಾಂತ್ರಿಕತೆ, ಯೋಜನೆ ರೂಪಿಸುವ ಕೆಲಸ ಮಾಡಬೇಕು ಎಂದರು.
    ಇದಕ್ಕೆ ಪ್ರತಿಕ್ರಿಯಿಸಿದ ಒಳ ಚರಂಡಿ ಮಂಡಳಿ ಇಂಜಿನಿಯರ್ ಮಿಥುನ್‌ಕುಮಾರ್, ತ್ಯಾಜ್ಯ ನೀರು ನದಿಗೆ ಸೇರದಂತೆ ಮಾಡಬೇಕು. ಹಳೇ ಶಿವಮೊಗ್ಗ ಭಾಗದಲ್ಲಿ 30 ವರ್ಷಗಳ ಹಿಂದೆ ವಿನ್ಯಾಸ ಮಾಡಿದ್ದು ಅದನ್ನು ಹೊಸದಾಗಿ ಮಾಡಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts