More

    ಸುಂದರ್​ ಪಿಚೈ ಗಳಿಕೆ 1854 ಕೋಟಿ ರೂ.!

    ಗೂಗಲ್​ ಮತ್ತು ಅಲ್ಫಾಬೆಟ್​ ಸಂಸ್ಥೆಯ ಸಿಇಒ ಸುಂದರ್​ ಪಿಚೈ 2022ರಲ್ಲಿ ವೆಚ್ಚ ಕಡಿತದ ಬಳಿಕವೂ ಬರೋಬ್ಬರಿ 226 ಮಿಲಿಯನ್​ ಡಾಲರ್​ (1854 ಸಾವಿರ ಕೋಟಿ ರೂ.)ಗಳಿಸಿದ್ದಾರೆ. ಈ ಹಣ ಸಾಮಾನ್ಯ ಉದ್ಯೋಗಿಗಳ ವೇತನಕ್ಕಿಂತಲೂ 800ಪಟ್ಟು ಅಧಿಕವಾಗಿದೆ. ಸಿಇಒ ಪದವಿಗೆ ಬಡ್ತಿ, ಹಲವು ಪ್ರಾಡಕ್ಟ್​ಗಳನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕಾಗಿ ಸುಂದರ್​ ಪಿಚೈಗೆ ಅಲ್ಫಾಬೆಟ್​ ಸಂಸ್ಥೆ ಇಷ್ಟು ದೊಡ್ಡ ಮೊತ್ತದ ರಿವಾರ್ಡ್​ ನೀಡಿದೆ. ಗೂಗಲ್​ನಲ್ಲಿ ಕಳೆದ ಕೆಲ ದಿನಗಳಿಂದ ಉದ್ಯೋಗ ಕಡಿತದಿಂದ ಹಲವರು ನಿರುದ್ಯೋಗಿಗಳಾಗಿದ್ದಾರೆ. ಆದ್ರೆ ಇದರ ಹೊರತಾಗಿಯೂ ಗೂಗಲ್​ ಸಿಇಒ ಅತಿಹೆಚ್ಚು ಸಂಪಾದನೆ ಮಾಡಿದ್ದಾರೆ.

    ಇದನ್ನೂ ಓದಿ: PHOTOS | ಸ್ಕೇಟಿಂಗ್ ಬೋರ್ಡ್ ಮೇಲೆ ಅಜ್ಜಿಯಂದಿರ ಸಾಹಸ! ಫೋಟೋ ನೋಡಿ ಗೊಂದಲಕ್ಕೊಳಗಾದ ನೆಟ್ಟಿಗರು…

    ಸ್ಟಾಕ್​ ರಿವಾರ್ಡ್​

    2019ರಲ್ಲೂ ಗೂಗಲ್​ ಸಿಇಒ ಸುಂದರ್​ ಪಿಚೈ ಸ್ಟಾಕ್​ ರಿವಾರ್ಡ್​ ಪಡೆದಿದ್ದರು. ಪ್ರತಿ 3 ವರ್ಷಗಳಿಗೊಮ್ಮೆ ನೀಡುವ ಈ ಸ್ಟಾಕ್​ ರಿವಾರ್ಡ್​ನಿಂದಾಗಿ ಪಿಚೈ 2022ರಲ್ಲೂ ಅತಿಹೆಚ್ಚು ವೇತನ ಗಳಿಸಿದ್ದಾರೆ.

    ಉದ್ಯೋಗಿಗಳ ಸರಾಸರಿ ವೇತನ ಎಷ್ಟು?

    ಕಳೆದ ವರ್ಷ ಅಲ್ಫಾಬೆಟ್​ ಸಂಸ್ಥೆಯ ಉದ್ಯೋಗಿಗಳ ಸರಾಸರಿ ಸಂಬಳ 2.42 ಕೋಟಿ ರೂ. (2,95,884 ಡಾಲರ್​) ಆಗಿತ್ತು. ಅಮೆರಿಕದ 20 ಅತಿದೊಡ್ಡ ಕಂಪನಿಗಳಿಗೆ ಹೋಲಿಸಿದರೆ 153% ಹೆಚ್ಚು ಸಂಬಳವಾಗಿತ್ತು.

    ಇದನ್ನೂ ಓದಿ: VIDEO | ವೀಕೆಂಡ್​ನಲ್ಲಿ ಕೊಹ್ಲಿ-ಅನುಷ್ಕಾ ಸಿಟಿ ರೌಂಡ್ಸ್; ಸಿಟಿಆರ್‌ ಹೋಟೆಲ್​​ನಲ್ಲಿ ಮಸಾಲೆದೋಸೆ ಸವಿದ ಸ್ಟಾರ್ ಜೋಡಿ…

    ಸಂಬಳದ ಅಂತರ ವಿರುದ್ಧ ಪ್ರತಿಭಟನೆ

    ವಿಶ್ವದ ಹಲವು ದೇಶಗಳಲ್ಲಿ ಗೂಗಲ್​ ಉದ್ಯೋಗಿಗಳು ಸಂಬಳದಲ್ಲಿನ ಅಂತರ, ವೆಚ್ಚ ಕಡಿತಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ತಿಂಗಳ ಆರಂಭದಲ್ಲೇ ಲಂಡನ್​ನ ಗೂಗಲ್​ ಕಚೇರಿ ಮುಂಭಾಗ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದರು. ಇಂತಹ ಸಂದರ್ಭದಲ್ಲಿ ಗೂಗಲ್​ ಸಿಇಒ ಸುಂದರ್​ ಪಿಚೈ ವೇತನ ಉದ್ಯೋಗಿಗಳ ವೇತನಕ್ಕಿಂತಲೂ 800 ಪಟ್ಟು ಜಾಸ್ತಿಯಾಗಿದ್ದು ಉದ್ಯೋಗಿಗಳ ಕೆಂಗಣ್ಣಿಗೆ ಗುರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts