More

    ವೈನ್ ಗೋಸ್ಕರ ಸಾಮಾನ್ಯನಂತೆ ಅಲೆದಾಡಿದ ಅಲ್ಲು ಅರ್ಜುನ್; ಇಂದಿಗೂ ವಿಡಿಯೋ ವೈರಲ್!

    ಗೋವಾ: ಅವರು ಸೌತ್ ಇಂಡಿಯಾದ ಐಕಾನ್ ಮತ್ತು ಸ್ಟೈಲಿಶ್ ಸ್ಟಾರ್. ಅವರನ್ನು ಭೇಟಿಯಾಗಲು ಅಭಿಮಾನಿಗಳು, ಸಾಮಾನ್ಯ ಜನರು ಚಾತಕ ಪಕ್ಷಿಗಳಂತೆ ಕಾಯುತ್ತಿರುತ್ತಾರೆ. ಆದರೆ, ಅದೊಂದು ದಿನ ಅವರು ಮಾತ್ರ ಸಾಮಾನ್ಯನಂತೆ ಬೀದಿಗಳಲ್ಲಿ ಅಲೆದಾಡುತ್ತಿದ್ದರು. ಅಂದಹಾಗೆ, ಅವರು ಯಾರೋ ಅಲ್ಲ, ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್. ಹೌದು, ಡಿ.17 ರಂದು ಬಿಡುಗಡೆಯಾದ ನಟ ಅಲ್ಲು ಅರ್ಜುನ್ ಅವರ ಪುಷ್ಪಸಿನಿಮಾ ಇಡೀ ದೇಶದಲ್ಲಿ ಸಂಚಲನ ಮೂಡಿಸಿದೆ. ರಲೀಸ್ ನಂತರ ಮೂರೇ ದಿನಗಳಲ್ಲಿ ಬರೋಬ್ಬರಿ 131 ಕೋಟಿ ಕೂಡ ಗಳಿಸಿದೆ. ಅಂತಹ ಸಿನಿಮಾದ ಶೂಟಿಂಗ್ ವೇಳೆ ವೈನ್ ಗೋಸ್ಕರ ಅಲ್ಲು ಗೋವಾ ಬೀದಿಗಳಲ್ಲಿ ಸಾಮಾನ್ಯನಂತೆ ಅಲೆದಾಡಿರುವ ವಿಡಿಯೋಗಳು ಕೆಲ ತಿಂಗಳುಗಳ ಹಿಂದೆ ಹರಿದಾಡುತ್ತಿದ್ದವು

    ವೈನ್ ಗೋಸ್ಕರ ಸಾಮಾನ್ಯನಂತೆ ಅಲೆದಾಡಿದ ಅಲ್ಲು ಅರ್ಜುನ್; ಇಂದಿಗೂ ವಿಡಿಯೋ ವೈರಲ್! ವೈನ್ ಗೋಸ್ಕರ ಸಾಮಾನ್ಯನಂತೆ ಅಲೆದಾಡಿದ ಅಲ್ಲು ಅರ್ಜುನ್; ಇಂದಿಗೂ ವಿಡಿಯೋ ವೈರಲ್!

    ಈ ವಿಡಿಯೋದಲ್ಲಿ ನಟ ಅಲ್ಲು ಅರ್ಜುನ್ ಗೋವಾದಲ್ಲಿ ಸಾಮಾನ್ಯರಂತೆ ವೈನ್​ ಬಾಟಲಿಯನ್ನು, ಒಂದು ಮಾಮೂಲಿ ಮದ್ಯದ ಅಂಗಡಿಯಲ್ಲಿ ಶಾಪಿಂಗ್ ಮಾಡಿರುವುದು ಕಂಡುಬಂದಿದೆ. ಸೌತ್​ನ ಸೂಪರ್ ಸ್ಟಾರ್ ಅಗಿದ್ದ ಅವರು ಗೋವಾದ ವೈನ್ ಶಾಪ್​ನಲ್ಲಿ ಕಾಣಿಸಿಕೊಂಡ ಈ ವಿಡಿಯೋ ಇದೀಗ ಪುಷ್ಪಸಿನಿಮಾದ ಬಿಡುಗಡೆಯ ನಂತರವೂ ವೈರಲ್ ಆಗುತ್ತಿದೆ. ನಟನ ಈ ಸರಳತೆಯನ್ನು ಜನ ಮೆಚ್ಚಿಕೊಂಡಿದ್ದು ಎಲ್ಲರೂ ಅವರ ವಿಡಿಯೋವನ್ನು ವೈರಲ್ ಮಾಡುತ್ತಾ, ಸಿಕ್ಕಾಪಟ್ಟೆ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಈ ವಿಡಿಯೋವನ್ನು ಎಲ್ಲರೂ ಹಂಚಿಕೊಳ್ಳುತ್ತಿದ್ದು ಲಕ್ಷ ಗಟ್ಟಲೆ ವೀಕ್ಷಣೆಗಳು ಈಗ ವಿಡಿಯೋಗೆ ಲಭಿಸುತ್ತಿದೆ. ಅದೇನೆ ಇರಲಿ, ಮದ್ಯದ ಮೇಲೆ ಸ್ಟಾರ್ ನಟರಿಗೂ ಇರುವ ಪ್ರೀತಿ ಅವರನ್ನೂ ಸಾಮಾನ್ಯರಂತೆ ಮಾಡುತ್ತದೆ ಎಂಬ ಮಾತುಗಳೂ ಕೆಲವರಿಂದ ಈಗ ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts