More

    PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ

    ಲಂಡನ್: ಕರೊನಾ ಭೀತಿಯಿಂದಾಗಿ ಕ್ರಿಕೆಟ್ ಚಟುವಟಿಕೆ ಪುನರಾರಂಭಗೊಂಡಾಗ ಎಲ್ಲಕ್ಕಿಂತ ಮೊದಲಾಗಿ ಪ್ರೇಕ್ಷಕರನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ಕ್ರಿಕೆಟ್ ಪ್ರೇಮಿಗಳು ಟಿವಿಯಲ್ಲಷ್ಟೇ ಕ್ರಿಕೆಟ್ ಆಡದ ಆನಂದವನ್ನು ಸವಿಯುವಂತಾಗಿತ್ತು. ಆದರೆ ಈಗ ಪ್ರೇಕ್ಷಕರಿಗೆ ಮತ್ತೆ ಕ್ರೀಡಾಂಗಣಕ್ಕೆ ಹಾಜರಾಗಿ ಕ್ರಿಕೆಟ್ ಪಂದ್ಯಗಳನ್ನು ನೇರವಾಗಿ ವೀಕ್ಷಿಸುವ ಅವಕಾಶ ಕಲ್ಪಿಸಲಾಗಿದೆ.

    PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ

    ಇಂಗ್ಲೆಂಡ್‌ನಲ್ಲಿ ಭಾನುವಾರ ನಡೆದ ಸೌಹಾರ್ದ ಪಂದ್ಯದಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಕೋವಿಡ್-19 ಹಾವಳಿಯ ನಡುವೆ ಇಂಥ ಅದೃಷ್ಟ ಕೂಡಿಬಂದಿದೆ. ಸರ‌್ರೆ ಮತ್ತು ಮಿಡ್ಲ್‌ಸೆಕ್ಸ್ ನಡುವಿನ ಪಂದ್ಯವನ್ನು ಸುಮಾರು ಒಂದು ಸಾವಿರದಷ್ಟು ಪ್ರೇಕ್ಷಕರು ಕ್ರೀಡಾಂಗಣಕ್ಕೆ ಬಂದು ವೀಕ್ಷಿಸಿದರು. ಇದು ಕ್ರಿಕೆಟ್ ಹಿಂದಿನ ಸ್ಥಿತಿಗೆ ಮರಳುವ ಮೊದಲ ಹೆಜ್ಜೆ ಎಂದೂ ಪರಿಗಣಿಸಲಾಗಿದೆ.

    PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ

    ಇದನ್ನೂ ಓದಿ: ಏಷ್ಯಾಡ್ ಸ್ವರ್ಣವನ್ನು ಕರೊನಾ ವಾರಿಯರ್ಸ್‌ಗೆ ಅರ್ಪಿಸಿದ ಹಿಮಾ ದಾಸ್

    PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ

    ಓವಲ್‌ನಲ್ಲಿ ನಡೆಯುತ್ತಿರುವ ಈ ದ್ವಿದಿನ ಪಂದ್ಯ ಕಳೆದ ಮಾರ್ಚ್ ಬಳಿಕ ಪ್ರೇಕ್ಷಕರಿಗೆ ಅವಕಾಶ ಕಲ್ಪಿಸಿದ ಮೊದಲ ಪಂದ್ಯವೆನಿಸಿದೆ. ಪ್ರೇಕ್ಷಕರು ಗ್ಯಾಲರಿಯಲ್ಲಿ ಸಾಮಾಜಿಕ ಅಂತವನ್ನು ಕಾಯ್ದುಕೊಂಡೇ ಕುಳಿತುಕೊಳ್ಳಬೇಕಾಗಿತ್ತು. ಇದರಿಂದಾಗಿ ಕ್ರೀಡಾಂಗಣ ಶೇ. 30ರಷ್ಟು ಮಾತ್ರ ತುಂಬಿತ್ತು. ಪಂದ್ಯ ಹಾಜರಾದವರು ಸರ‌್ರೆ ಮತ್ತು ಮಿಡ್ಲ್‌ಸೆಕ್ಸ್ ಕೌಂಟಿ ಸದಸ್ಯರೇ ಆಗಿದ್ದರು. ಸೀಟಿನಲ್ಲಿ ಕುಳಿತಿದ್ದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿರಲಿಲ್ಲ. ಆದರೆ ಓಡಾಡುವಾಗ ಮಾಸ್ಕ್ ಧರಿಸಿರಬೇಕಿತ್ತು.

    PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ

    PHOTO | ಕ್ರಿಕೆಟ್ ಪಂದ್ಯಕ್ಕೆ ಮತ್ತೆ ಪ್ರೇಕ್ಷಕರ ಹಾಜರಿ

    VIDEO | ಐಪಿಎಲ್‌ಗಾಗಿ ಸುರೇಶ್ ರೈನಾ, ರಿಷಭ್ ಪಂತ್ ಬ್ಯಾಟ್ ಶಾಪಿಂಗ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts