More

    ಹನುಮ ಧ್ವಜ ಹಾರಾಟಕ್ಕೆ ಅನುಮತಿ ನೀಡಿ

    ಸಾಗರ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ ತೆರವುಗೊಳಿಸಿರುವುದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಉಪವಿಭಾಗಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

    ಕೆರಗೋಡು ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಗ್ರಾಪಂ ಅನುಮತಿ ಪಡೆದು ಹಾಕಿರುವ ಹನುಮ ಧ್ವಜವನ್ನು ಸ್ಥಳೀಯ ಹಿಂದು ವಿರೋಧಿಗಳು ಕಿತ್ತುಹಾಕಿರುವುದು ಖಂಡನೀಯ. ಧರ್ಮ, ರಾಷ್ಟ್ರ ವಿರೋಧಿಗಳು, ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಕರ್ನಾಟಕ ಸರ್ಕಾರವು ಹನುಮ ಧ್ವಜ ತೆರವುಗೊಳಿಸಿದ್ದು, ಇದು ಧರ್ಮ ವಿರೋಧಿ ಕೃತ್ಯ ಎಂದು ಪ್ರತಿಭಟನಾನಿರತರು ಕಿಡಿಕಾರಿದರು.
    ಹಿಂದುಗಳ ಭಾವನೆಗೆ ಧಕ್ಕೆಯಾಗದಂತೆ ಅದೇ ಜಾಗದಲ್ಲಿ ಹನುಮ ಧ್ವಜಾರೋಹಣ ಮಾಡುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರು ಸೂಕ್ತ ನಿದೇರ್ಶನ ನೀಡಬೇಕು ಎಂದು ಆಗ್ರಹಿಸಿದರು.
    ಪ್ರಮುಖರಾದ ಅ.ಪು.ನಾರಾಯಣಪ್ಪ, ಕೆ.ವಿ.ಪ್ರವೀಣ್, ಪ್ರತಿಮಾ ಜೋಗಿ, ಐ.ವಿ.ಹೆಗಡೆ, ಸಂತೋಷ್ ಶಿವಾಜಿ, ಕೆ.ಎಚ್.ಸುದರ್ಶನ್, ನಾರಾಯಣಮೂರ್ತಿ ಕಾನುಗೋಡು, ವ.ಶಂ.ರಾಮಚಂದ್ರ ಭಟ್, ಆದಿತ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts