More

    ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕೊಡಿ; ವಿವಿಗಳಿಗೆ UGC ಸೂಚನೆ

    ನವದೆಹಲಿ: ಇಂಗ್ಲೀಷ್​ ಭಾಷೆಯಲ್ಲಿ ಕೋರ್ಸ್​ಗಳ ಬೋಧನೆ ಮಾಡಿದ್ದರೂ ವಿದ್ಯಾರ್ಥಿಗಳಿಗೆ ಸ್ಥಳೀಯ ಭಾಷೆ/ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ವಿಶ್ವವಿದ್ಯಾಲಯಗಳಿಗೆ ಯೂನಿವರ್ಸಿಟಿ ಗ್ರ್ಯಾಂಟ್ಸ್​ ಕಮಿಷನ್(UGC) ಸೂಚಿಸಿದೆ.

    ಮಾತೃ/ಸ್ಥಳೀಯ ಭಾಷೆಯಲ್ಲಿ ಭೋಧನೆ, ಕಲಿಕಾ ಪ್ರಕ್ರಿಯೆ ಹಾಗೂ ಪಠ್ಯ ಪುಸ್ತಕಗಳನ್ನು ಸಿದ್ದಪಡಿಸುವಲ್ಲಿ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು UGC ಅಭಿಪ್ರಾಯಪಟ್ಟಿದೆ.

    ಇದನ್ನೂ ಒದಿ: RCB vs CSK ಪಂದ್ಯ ನೋಡಲು ಬೈಕ್​ ಮಾರಿದ ಭೂಪ; ಅಸಲಿ ಕಾರಣವೇನು?

    ಬಲ ತುಂಬುವುದು ಅತ್ಯಗತ್ಯ

    ಮಾತೃ/ಸ್ಥಳೀಯ ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ರಚಿಸಲು ಬಲ ತುಂಬುವುದು ಅತ್ಯಗತ್ಯ. ಬೇರೆ ಭಾಷೆಗಳಲ್ಲಿರುವ ಪಠ್ಯಗಳನ್ನು ಭಾಷಾಂತರಿಸುವುದಕ್ಕೆ UGC ಪ್ರೋತ್ಸಾಹ ನೀಡುತ್ತದೆ.

    ಕಾಲೇಜುಗಳು ವಿದ್ಯಾರ್ಥಿಗಳಿಗೆ ಇಂಗ್ಲೀಷ್​ನಲ್ಲಿ ಭೋದನೆ ಮಾಡಿದ್ದರೂ ಸಹ ವಿದ್ಯಾರ್ಥಿಗಳಿಗೆ ಸ್ಥಳೀಯ/ಮಾತೃ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಸ್ಥಳೀಯ ಭಾಷೆಗಳಿಗೆ ಮೂಲ ಬರವಣಿಗೆಯ ಅನುವಾದವನ್ನು ಉತ್ತೇಜಿಸಬೇಕು ಎಂದು ಉಈನಿವರ್ಸಿಟಿ ಗ್ರ್ಯಾಂಟ್ಸ್​ ಕಮಿಷನ್​ ತನ್ನ ಸುತ್ತೋಲೆಯ್ಲಲಿ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts