More

    18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಲಭ್ಯಗೊಳಿಸಿ, ಅಲ್ಪಾವಧಿ ಲಾಕ್​ಡೌನ್ ವಿಧಿಸಿ : ಐಎಂಎ

    ನವದೆಹಲಿ : ದೇಶದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕರೊನಾ ಲಸಿಕೆ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಲಸಿಕಾ ಅಭಿಯಾನದಲ್ಲಿ ಖಾಸಗಿ ಆಸ್ಪತ್ರೆಗಳೊಂದಿಗೆ ಖಾಸಗಿ ಫ್ಯಾಮಿಲಿ ಕ್ಲಿನಿಕ್​ಗಳನ್ನೂ ಸಕ್ರಿಯವಾಗಿ ಬಳಸಿಕೊಳ್ಳಬಹುದು ಎಂದಿದೆ.

    ಜೊತೆಗೆ, ರೋಗ ಹರಡುವಿಕೆಯ ಸಂಪರ್ಕ ಕೊಂಡಿಯನ್ನು ಮುರಿಯುವುದಕ್ಕಾಗಿ, ಅಲ್ಪಾವಧಿಯ ನಿರಂತರ ಲಾಕ್​ಡೌನ್​ಗಳನ್ನು ವಿಧಿಸಬೇಕು. ವಿಶೇಷವಾಗಿ ಸಿನಿಮಾ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡೆಗಳು ಮುಂತಾದ ಎಲ್ಲಾ ಅನಿವಾರ್ಯವಲ್ಲದ ಪ್ರದೇಶಗಳಿಗೆ ನಿರ್ಬಂಧ ವಿಧಿಸಬೇಕು ಎಂದೂ ಐಎಂಎ ಸಲಹೆ ನೀಡಿದೆ.

    ಇದನ್ನೂ ಓದಿ: ಇಂದಿನಿಂದ ರಾಜಧಾನಿಯಲ್ಲಿ ರಾತ್ರಿ ಕರ್ಫ್ಯೂ

    ಕರೊನಾ ಸಾಂಕ್ರಾಮಿಕದ ಉಲ್ಬಣ ಪ್ರಮಾಣವು ದಾಖಲೆ ಗರಿಷ್ಠ ಮಟ್ಟಗಳನ್ನು ತಲುಪುತ್ತಿದೆ ಎಂದಿರುವ ಐಎಂಎ “ವೈಯಕ್ತಿಕ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹೆಚ್ಚಿಸುವ ಮೂಲಕ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಹಿಂಡಿನ ರೋಗನಿರೋಧಕ ಶಕ್ತಿಯನ್ನು ಸೃಷ್ಟಿಸಿ ರೋಗದ ತೀವ್ರತೆಯನ್ನು ಕಡಿಮೆ ಮಾಡಲು ಕರೊನಾ ಲಸಿಕೆ ಏಕೈಕ ಪುರಾವೆ-ಆಧಾರಿತ ಸಂಪನ್ಮೂಲವಾಗಿದೆ” ಎಂದು ಐಎಂಎ ತನ್ನ ಪತ್ರದಲ್ಲಿ ಹೇಳಿದೆ.

    “ಪ್ರಸ್ತುತ ನಾವು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿದ್ದೇವೆ. ಕರೊನಾದ ಎರಡನೇ ಅಲೆಯಲ್ಲಿ ಸೋಂಕು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಲಸಿಕೆ ನೀಡಿಕೆಯ ಕಾರ್ಯತಂತ್ರವನ್ನು ತ್ವರಿತಗೊಳಿಸಿ ಸಮರವೇಗದಲ್ಲಿ ನಡೆಸುವ ಅಗತ್ಯವಿದೆ. ಎಲ್ಲರಿಗೂ ತಮ್ಮ ಹತ್ತಿರದ ಸ್ಥಳದಲ್ಲಿ ಉಚಿತವಾಗಿ ವಾಕ್-ಇನ್ ಸೌಲಭ್ಯದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಕಲ್ಪಿಸಬೇಕು” ” ಎಂದು ಈ ಅಖಿಲ ಭಾರತೀಯ ವೈದ್ಯರ ಸಂಘಟನೆ ಹೇಳಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 5,279 ಜನರಿಗೆ ಕರೊನಾ ಸೋಂಕು; ಕರೊನಾದಿಂದಾಗಿ ಇವತ್ತು 32 ಮಂದಿ ಸಾವು

    ಕಡ್ಡಾಯಗೊಳಿಸಿ : ಈ ಕಾರಣದಿಂದ ಎಲ್ಲಾ ವೈದ್ಯರು ಮತ್ತು ಫ್ಯಾಮಿಲಿ ಫಿಸಿಷಿಯನ್​ಗಳ ಬಳಿ ಕರೊನಾ ಲಸಿಕೆ ಲಭ್ಯವಿರುವುದು ಲಸಿಕಾ ಅಭಿಯಾನದ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ. ಜನರು ಲಸಿಕೆ ಪಡೆಯುವಂತೆ ಪ್ರೇರೇಪಿಸಲು, ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸಲು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿಯಲ್ಲಿ ಉತ್ಪನ್ನಗಳನ್ನು ಸ್ವೀಕರಿಸುವುದಕ್ಕೆ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಬೇಕು ಎಂದೂ ಐಎಂಎ ಸಲಹೆ ನೀಡಿದೆ.

    ಜಂಟಿ ಟ್ಯಾಸ್ಕ್ ಫೋರ್ಸ್ : ಲಸಿಕಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ತಯಾರಾಗಿರುವುದಾಗಿ ಐಎಂಎ ಹೇಳಿದೆ. “ತ್ವರಿತ ವ್ಯಾಕ್ಸಿನೇಷನ್​​ಗಾಗಿ ಐಎಂಎ ತನ್ನ ಸಂಪೂರ್ಣ ಮಾನವಶಕ್ತಿ ಮತ್ತು ಮೂಲಸೌಕರ್ಯ ಸೌಲಭ್ಯಗಳ ಬೆಂಬಲವನ್ನು ನೀಡುತ್ತದೆ ಮತ್ತು ಈ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಕ್ಕೆ ಬೆಂಬಲವಾಗಿ ನಿಲ್ಲುತ್ತದೆ” ಎಂದು ಪತ್ರದಲ್ಲಿ ಬರೆದಿದೆ. ಸರ್ಕಾರಿ ಮತ್ತು ಖಾಸಗಿ ಭಾಗವಹಿಸುವಿಕೆಯೊಂದಿದೆ ಜಿಲ್ಲಾ ಮಟ್ಟಗಳಲ್ಲಿ ವ್ಯಾಕ್ಸಿನ್ ಟ್ಯಾಸ್ಕ್ ಫೋರ್ಸ್​​ಅನ್ನು ಮಾಡಬೇಕು. ಸಾಮೂಹಿಕ ಲಸಿಕಾಕರಣ ಕಾರ್ಯಕ್ರಮಗಳನ್ನು ನಡೆಸಲು ಮತ್ತು ಯಾವುದೇ ಅಡ್ಡಪರಿಣಾಮಗಳು ಆಗದಂತೆ ನಿಗಾ ವಹಿಸಲು ಇದು ಉಪಯುಕ್ತವಾಗುತ್ತದೆ ಎಂದಿದೆ. (ಏಜೆನ್ಸೀಸ್)

    ರಾಜಧಾನಿಯ 260 ಕೇಂದ್ರಗಳಲ್ಲಿ 24 ಗಂಟೆಗಳೂ ಕರೊನಾ ಲಸಿಕೆ ಲಭ್ಯ

    45 ಜನರಿಗೆ ಕರೊನಾ ಪಾಸಿಟಿವ್; ಅಕ್ಷಯ್ ಅಭಿನಯದ ರಾಮ್​ಸೇತು ಸ್ಥಗಿತ

    90 ಮತದಾರರಿದ್ದ ಬೂತ್​ನಲ್ಲಿ 171 ಮತ ಚಲಾವಣೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts