More

    821 ಜನರಿಗೆ ಮನೆ ಹಂಚಿಕೆ

    ದಾಂಡೇಲಿ: ನಗರದ ಜಿ+2 ಯೋಜನೆಯಲ್ಲಿ ಫಲಾನುಭವಿಗಳಿಗೆ ಅತ್ಯಂತ ಪಾರದರ್ಶಕವಾಗಿ ಮನೆಗಳ ಹಂಚಿಕೆಯ ಪ್ರಕ್ರಿಯೆ ಜರುಗಿಸಲಾಗುತ್ತಿದೆ ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.
    ನಗರದ ಡಾ. ಅಂಬೇಡ್ಕರ್ ಭವನದಲ್ಲಿ ಶುಕ್ರವಾರ ವಸತಿ ಯೋಜನೆಯಡಿ ನಿರ್ವಿುಸಲಾಗಿರುವ ಜಿ+2 ಮನೆಗಳ ಹಂಚಿಕೆ ಕುರಿತು ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆ ನಂಬರ್​ಗಳನ್ನು ಹಂಚಿಕೆ ಮಾಡಿ ಅವರು ಮಾತನಾಡಿದರು.
    3 ಕಂತುಗಳನ್ನು ಪೂರ್ಣ ತುಂಬಿದ ಫಲಾನುಭವಿಗಳಲ್ಲಿ ಮೊದಲ ಹಂತದಲ್ಲಿ ಅಂಗವಿಕಲರಿಗೆ 15, ಹಿರಿಯ ನಾಗರಿಕರಿಗೆ 71 ಹಾಗೂ ಇತರೆ 735 ಒಟ್ಟು 821 ಫಲಾನುಭವಿಗಳಿಗೆ ಲಾಟರಿ ಮೂಲಕ ಹೆಸರು ಆಯ್ಕೆ ಮಾಡಿ ಮನೆಗಳ ನಂಬರ್ ಜತೆ ಹಕ್ಕು ಪತ್ರ ವಿತರಿಸಲಾಗುತ್ತಿದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.
    ಜಿ+2 ಫಲಾನುಭವಿಗಳಿಗೆ ಬ್ಯಾಂಕಿನ ಅಧಿಕಾರಿಗಳ ಸಲಹೆಯಂತೆ ಚೆಕ್ ಬಂದಿಯೊಡನೆ ಹಕ್ಕು ಪತ್ರ ವಿತರಿಸಿದ ನಂತರ ಬ್ಯಾಂಕಿನ ಸಾಲದ ಮೊತ್ತ ಫಲಾನುಭವಿಗಳಿಗೆ ದೊರಕಲಿದೆ ಎಂದರು.
    ನಾನು ಯಾವ ಸಂದರ್ಭದಲ್ಲಿಯೂ ಕೂಡ ಜಿ+2 ಮನೆಗಳು ಪೂರ್ಣಗೊಂಡಿದೆ ಎಂಬ ಹೇಳಿಕೆ ನೀಡಿಲ್ಲ. ಮನೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

    ಮನೆಗಳ ಹಂಚಿಕೆಯಲ್ಲಿ ಏನಾದರೂ ವ್ಯತ್ಯಾಸವಿದ್ದರೆ ಕಂತು ಪೂರ್ಣಗೊಳಿಸದ ಫಲಾನುಭವಿಗಳು ಸೋಮವಾರ ನಗರಸಭೆ ಪೌರಾಯುಕ್ತರಿಗೆ ತಮ್ಮ ಅಹವಾಲುಗಳನ್ನು ಸಲ್ಲಿಸಿ ಸಮಸ್ಯೆ ಬಗೆಹರಿಸಕೊಳ್ಳಬೇಕೆಂದು ಸಲಹೆ ನೀಡಿದರು.
    ವೇದಿಕೆಯಲ್ಲಿ ಉಪವಿಭಾಗಾಧಿಕಾರಿ ಡಾ. ಜಯಲಕ್ಷ್ಮೀ ಜಿಲ್ಲಾ ನಗರಾಭಿವೃದ್ಧಿ ಯೋಜನಾ ನಿರ್ದೇಶಕಿ ಸ್ಟೇಲಾ ವರ್ಗಿಸ್, ಧಾರವಾಡದ ಹೌಸಿಂಗ್ ಬೋರ್ಡ್ ಅಧಿಕಾರಿ ಜ್ಯೋತಿ, ನಗರಸಭೆ ಅಧ್ಯಕ್ಷೆ ಹಾಗೂ ಆಶ್ರಯ ಯೋಜನೆಯ ಸದಸ್ಯೆ ಸರಸ್ಪತಿ ರಜಪೂತ, ದಾಂಡೇಲಿ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಉಪಸ್ಥಿತರಿದ್ದರು. ಪೌರಾಯುಕ್ತ ರಾಜಾರಾಂ ಪವಾರ ಸ್ವಾಗತಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts