More

    ಜಾನಪದ ಸಾಹಿತ್ಯಕ್ಕೆ ಕೊನೆಯಂಬುದಿಲ್ಲ

    ಚಿತ್ತಾಪುರ: ಜನಪದ ಇಂದು, ನಿನ್ನೆ ಜನಿಸಿದ ಕಲೆಯಲ್ಲ. ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಭಾಗದ ಪ್ರತಿಯೊಬ್ಬರ ಬಾಯಿಯಲ್ಲೂ ಜಾನಪದ ಹರಿದಾಡುತ್ತಿದೆ ಎಂದು ಅಳ್ಳೋಳ್ಳಿ ಸಾವಿರ ದೇವರ ಸಂಸ್ಥಾನ ಮಠದ ಶ್ರೀ ಸಂಗಮನಾಥ ಸ್ವಾಮೀಜಿ ಹೇಳಿದರು.

    ಅಳ್ಳೋಳ್ಳಿಯ ಸಾವಿರ ದೇವರ ಸಂಸ್ಥಾನ ಮಠದ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಜಾನಪದ ಪರಿಷತ್‌ನಿಂದ ಗುರುವಾರ ಹಮ್ಮಿಕೊಂಡಿದ್ದ ವಲಯ ಮಟ್ಟದ ಜಾನಪದ ಝೇಂಕಾರ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿ, ಜಾನಪದಕ್ಕೆ ಕೊನೆ ಎಂಬುದಿಲ್ಲ. ಹುಟ್ಟಿನಿಂದ ಸಾವಿನವರಗೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿ ಇರಲಿದೆ ಎಂದರು.

    ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಸಿ.ಎಸ್.ಮಾಲಿಪಾಟೀಲ್ ಮಾತನಾಡಿ, ಜಾನಪದ ಕಲೆ ಉಳಿಸಿ, ಬೆಳೆಸಲು ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪರಿಷತ್ ಸಾಕಷ್ಟು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.

    ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಚಂದ್ರಾಮ ಅಮ್ಮನಗಡೆ, ಶಿಕ್ಷಕ ಶಿವಕುಮಾರ ಪಾಟೀಲ್ ಭೀಮನಹಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಅಂಜನಯ್ಯ ಗುತ್ತೇದಾರ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಪರಿಷತ್ ತಾಲೂಕು ಆಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಆಶಯ ಭಾಷಣ ಮಾಡಿದರು.

    ಪ್ರಮುಖರಾದ ಕಾಶೀರಾಯ ಕಲಾಲ್, ಬಸವರಾಜ ಎಂಬತ್ತನಾಳ, ಮೋಹಿನ್ ಸಾತನೂರ, ಮಲ್ಲಿಕಾರ್ಜುನ ಮದನಕರ್, ತಿಮ್ಮರಾಯ ಭೀಮನಹಳ್ಳಿ, ದೇವಿದಾಸ ಔರಸಂಗ್, ಶ್ವೇತಾ ಪಾಟೀಲ್, ಜಯಶ್ರೀ ಅಪ್ರೋಜಿ, ಸುಲೋಚನಾ, ಅನುಸೂಯ ಮಡಿವಾಳ, ಶ್ವೇತಾ ಅನವಾರ, ಮಾಲಶ್ರೀ ಪೋಟಿ, ಸಾವಿತ್ರಿ ನಾಚವಾರ, ವಸಂತಾ, ಮಂಜುಳಾ, ಶಾಂತಮ್ಮ ವಿಶ್ವಕರ್ಮ ಇತರರಿದ್ದರು.

    ಬಸವರಾಜ ಹೊಟ್ಟಿ ಸ್ವಾಗತಿಸಿದರು. ನರಸಪ್ಪ ಚಿನ್ನಕಟ್ಟಿ ನಿರೂಪಣೆ ಮಾಡಿದರು. ಮಲ್ಲಿಕಾರ್ಜುನ ಮದನಕರ್ ವಂದಿಸಿದರು. ಭೀಮನಹಳ್ಳಿ, ಯಾಗಪುರ, ಬೆಳಗೇರಿ, ರಾಮತೀರ್ಥ, ರಾಜೋಳ್ಳಿ, ಭಂಕಲಗಿ, ಅಲ್ಲೂರ್ (ಕೆ)(ಬಿ), ದಂಡಗುಂಡ, ಸಂಕನೂರ, ಅಳ್ಳೋಳ್ಳಿ ಗ್ರಾಮಗಳ ಜಾನಪದ ಕಲಾವಿದರು ಭಾಗವಹಿಸಿ ಕಲಾ ಪ್ರದರ್ಶನ ನೀಡಿದರು.

    ಕನ್ನಡ ಜಾನಪದ ಪರಿಷತ್‌ನಿಂದ ವರ್ಷಪೂರ್ತಿ ಹಲವಾರು ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಈಗಾಗಲೇ ಜಿಲ್ಲಾ ಘಟಕದಿಂದ ವಾರಕ್ಕೊಮ್ಮೆ ಜಾನಪದ ವಿಧ್ವಾಂಸರ ಬದುಕು ಬರಹ ಕುರಿತು ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗುತ್ತಿದೆ. ಜಿಲ್ಲಾಮಟ್ಟದ ಜಾನಪದ ಸಮ್ಮೇಳನ ಆಯೋಜಿಸಲು ಸಿದ್ಧತೆ ನಡೆದಿದೆ. ಹಳೇ ಸಾಹಿತ್ಯವನ್ನು ಉಳಿಸಿ, ಬೆಳೆಸಲು ಎಲ್ಲರ ಸಹಕಾರ ಅಗತ್ಯ.
    | ಸಿ.ಎಸ್.ಮಾಲಿಪಾಟೀಲ್, ಜಿಲ್ಲಾಧ್ಯಕ್ಷ, ಕನ್ನಡ ಜಾನಪದ ಪರಿಷತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts