More

    ವಿಡಿಯೋ: ಮೊಸಳೆಗೂ ಬೇಸರ….! ಮಾಂಸದ ತುಂಡು ಹಿಡಿಯಲಾಗದ್ದಕ್ಕೆ ಕೋಪಿಸಿಕೊಂಡು ನೀರಿಗಿಳಿಯಿತು…!

    ಸಾಕುಪ್ರಾಣಿಗಳೊಂದಿಗೆ ಆಟವಾಡೋದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಅಂತೆಯೇ ಕೆಲವರು ಕಾಡುಪ್ರಾಣಿಗಳೊಂದಿಗೆ ಅಷ್ಟೇ ಸಲೀಸಾಗಿ ನಡೆದುಕೊಳ್ಳುತ್ತಾರೆ.

    ಅಮೆರಿಕ ಫ್ಲೋರಿಡಾದ ಎವರ್​ಗ್ಲೇಡ್ಸ್​ ಹಾಲಿಡೇ ಪಾರ್ಕ್​ನಲ್ಲಿರುವ ಮೊಸಳೆಯ ವಿಡಿಯೋವೊಂದು ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾಲೀಕ ನೀಡಿದ ಮಾಂಸದ ತುಣುಕನ್ನು ಹಿಡಿಯಲಾಗದ ಮೊಸಳೆ ಬೇಸರಿಸಿಕೊಂಡು, ಅದನ್ನು ನೆಲದ ಮೇಲೆ ಬಿಟ್ಟು ನೀರಿಗಿಳಿಯುತ್ತದೆ.

    ಇದನ್ನೂ ಓದಿ; 9 ತಾಸಿನ ನಿದ್ದೆಯೇ ಉದ್ಯೋಗ; ಲಕ್ಷ ರೂ. ಸಂಬಳ; ಷರತ್ತುಗಳು ಅನ್ವಯ….! 

    ಸೆವೆನ್​ ಎಂದು ಕರೆಯಲಾಗುವ ಮೊಸಳೆ ಜತೆಗೆ ಯುವಕ ಹಾಗೂ ಯುವತಿ ಆಟವಾಡುತ್ತಿರುತ್ತಾರೆ. ಆಗ ಯುವಕನ ಕೈಯಲ್ಲಿದ್ದ ಮಾಂಸದ ತುಂಡನ್ನು ಮೊಸಳೆಗೆ ಹಿಡಿಯಲಾಗುವುದಿಲ್ಲ. ಆತ ಮಾಂಸದ ತುಂಡನ್ನು ಕೈಬಿಟ್ಟಾಗ ಅದರ ಬಾಯಿಗೆ ಬೀಳದೇ ನೆಲದ ಪಾಲಾಗುತ್ತದೆ. ಇದರಿಂದ ಅವಮಾನಕ್ಕೊಳಗಾದೆ ಎಂಬಂತೆ ಮೊಸಳೆ ಅದರತ್ತ ನೋಡದೆ ನೀರಿಗಿಳಿಯುತ್ತದೆ.

    ಪ್ರಾಣಿಗಳು ಯಾವುದೇ ಇರಲಿ ಅವುಗಳ ವರ್ತನೆ ಕೂಡ ಅಷ್ಟೇ ವಿಶಿಷ್ಟವಾಗಿರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಜತೆಗೆ, ನೆಟ್ಟಿಗರ ಪ್ರಶಂಸೆಗೂ ಪಾತ್ರವಾಗಿದೆ.

    ಈ ಮುದ್ದು ಮೊಸಳೆಗೂ ಬೇಸರ…..!

    ಮಾಲೀಕನ ಕೈಯಲ್ಲಿದ್ದ ಮಾಸ ತುಂಡನ್ನು ಹಿಡಿಯಲಾಗದೇ ನೆಲಕ್ಕೆ ಬಿದ್ದಿದ್ದಕ್ಕೆ ಬೇಸರಿಸಿಕೊಂಡು ನೀರಿಗಿಳಿಯುವ ಮೊಸಳೆ…! ಕೊನೆಗೂ ಸಮಾಧಾನಗೊಂಡು ಆಹಾರ ಸ್ವೀಕರಿಸುವ ಉಭಯಚರ…! ಇದು ಫ್ಲೋರಿಡಾದ ಎವರ್​ಗ್ಲೇಡ್ಸ್​ ಹಾಲಿಡೇ ಪಾರ್ಕ್​ನಲ್ಲಿರುವ ಮೊಸಳೆ.

    Posted by Vijayavani on Monday, August 31, 2020

    ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts