ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!

ನವದೆಹಲಿ: ಗಾಳಿಪಟ ಉತ್ಸವವೊಂದರಲ್ಲಿ ಬೃಹತ್​ ಗಾಳಿಪಟವೊಂದು ಮೂರು ವರ್ಷದ ಹೆಣ್ಣುಮಗುವನ್ನು ನೂರಡಿಗೂ ಅಧಿಕ ಎತ್ತರಕ್ಕೆ ಹಾರಿಸಿದೆ. ಅದೃಷ್ಟವಶಾತ್​ ಸಣ್ಣಪುಟ್ಟ ಗಾಯಗಳೊಂದಿಗೆ ಮಗು ಪಾರಾಗಿದೆ. ಈ ಘಟನೆ ನಡೆದಿದ್ದು ತೈವಾನ್​ನ ಸಿಂಚು ನಗರದಲ್ಲಿ. ಸ್ಥಳೀಯರು ಆಯೋಜಿಸಿದ್ದ ಗಾಳಿಪಟ ಉತ್ಸವದಲ್ಲಿ ಬೃಹತ್​ ಗಾಳಿಪಟವೊಂದನ್ನು ಹಾರಿಸಲು ಸಿದ್ಧತೆ ನಡೆದಿತ್ತು. ಹತ್ತಾರು ಜನರು ಅದನ್ನು ಹಿಡಿದು ಹಾರಿಸಲು ಮುಂದಾಗಿದ್ದರು. ಅಷ್ಟರಲ್ಲಿ ಬೀಸಿದ ಗಾಳಿಯಿಂದಾಗಿ ಗಾಳಿಪಟದ ಬಾಲ ಮಗುವಿನ ಸೊಂಟಕ್ಕೆ ಸುತ್ತಿಕೊಂಡಿದೆ. ಗಾಳಿಯೊಂದಿಗೆ ಗಾಳಿಪಟವೂ ಹಾರಾಡ ತೊಡಗಿ ಮಗು ಕೂಡ ನೂರಡಿಗೂ ಹೆಚ್ಚು ಎತ್ತರಕ್ಕೆ … Continue reading ವಿಡಿಯೋ: ಮೂರು ವರ್ಷದ ಮಗುವನ್ನು 100 ಅಡಿ ಎತ್ತರಕ್ಕೆ ಕೊಂಡೊಯ್ದ ಗಾಳಿಪಟ…!