More

    ಈ ತಿಂಗಳ ಕೊನೆಯವರೆಗೂ ಎಲ್ಲ ಥರದ ಪಟಾಕಿ ನಿಷೇಧ; ಆರೋಗ್ಯ ಸಚಿವರಿಂದ ಘೋಷಣೆ

    ದೆಹಲಿ: ಕರೊನಾ ಸೋಂಕು ದೊಡ್ಡ ಪ್ರಮಾಣದಲ್ಲಿ ಇನ್ನೂ ಇರುವುದರಿಂದ, ಅದರ ಜತೆಗೆ ಪಟಾಕಿ ಹೊಗೆಯೂ ಸೇರಿಕೊಂಡರೆ ಸೋಂಕಿತರು ಮತ್ತಷ್ಟು ಸಂಕಷ್ಟ ಎದುರಿಸಬೇಕಾಗುವ ಸಾಧ್ಯತೆ ಇರುತ್ತದೆ ಎಂಬ ತಜ್ಞರ ಅನಿಸಿಕೆ ಹಿನ್ನೆಲೆಯಲ್ಲಿ ಪಟಾಕಿ ನಿಷೇಧ ಕುರಿತು ಕರ್ನಾಟಕದಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕ ಚರ್ಚೆ ನಡೆಯುತ್ತಿದೆ.

    ಇದೇ ಹಿನ್ನೆಲೆಯಲ್ಲಿ ದೆಹಲಿ, ಪಶ್ಚಿಮ ಬಂಗಾಲದಲ್ಲೂ ವ್ಯಾಪಕ ಚರ್ಚೆಗಳು ನಡೆದಿವೆ. ಈ ಮಧ್ಯೆ ಪಶ್ಚಿಮ ಬಂಗಾಲ ಸರ್ಕಾರ ಪಟಾಕಿ ಹೊಡೆಯಬಾರದು ಎಂದು ಮನವಿ ಮಾಡಿಕೊಂಡಿದ್ದ ಬೆನ್ನಲ್ಲೇ ಅಲ್ಲಿನ ಹೈಕೋರ್ಟ್​ ದೀಪಾವಳಿ ಹಾಗೂ ಕಾಳಿ ಪೂಜೆ ಸಂದರ್ಭ ಪಟಾಕಿ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಿ ಗುರುವಾರ ಆದೇಶ ಹೊರಡಿಸಿತ್ತು.

    ಇದನ್ನೂ ಓದಿ: ದೀಪಾವಳಿಗೆ ಪಟಾಕಿ ಮಾರಾಟ-ಬಳಕೆ ನಿಷೇಧ; ಹೈಕೋರ್ಟ್​ ಆದೇಶ 

    ಇನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರು, ಪಟಾಕಿ ಹೊಡೆಯುವುದು ನಿಮ್ಮ ಕುಟುಂಬದವರ ಜೀವದ ಜತೆ ಚೆಲ್ಲಾಟವಾಡಿದಂತೆ, ಏನೇ ಆಗಲಿ.. ದಯವಿಟ್ಟು ಯಾರೂ ಪಟಾಕಿ ಹೊಡೆಯಬೇಡಿ ಎಂದು ದೆಹಲಿಯ ಜನತೆಯಲ್ಲಿ ಗುರುವಾರ ಮನವಿ ಮಾಡಿಕೊಂಡಿದ್ದರು. ಇವತ್ತು ಇದೀಗ ಅಲ್ಲಿನ ಆರೋಗ್ಯ ಸಚಿವರು ಪಟಾಕಿ ಕುರಿತು ಮತ್ತೊಂದು ವಿಷಯವನ್ನು ಪ್ರಕಟಿಸಿದ್ದಾರೆ. ದೆಹಲಿ ಸರ್ಕಾರವು ನ. 7ರಿಂದ ನ. 30ರ ವರೆಗೆ ರಾಜ್ಯದಲ್ಲಿ ಎಲ್ಲ ಥರದ ಪಟಾಕಿಗಳನ್ನು ನಿಷೇಧಿಸಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶುಕ್ರವಾರ ತಿಳಿಸಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಏನೇ ಆಗಲಿ.. ದಯವಿಟ್ಟು ಪಟಾಕಿ ಹೊಡೆಯಬೇಡಿ; ಕೇಜ್ರಿವಾಲ್ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts