More

    ಖಾಸಗಿ ಬಸ್ ನಿಲ್ದಾಣದಲ್ಲಿಲ್ಲ ಸ್ವಚ್ಛತೆ

    ಹನೂರು: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಜಾಗವನ್ನು ಕಳೆದೆರಡು ದಿನಗಳಿಂದ ಸ್ವಚ್ಛಗೊಳಿಸದ ಪರಿಣಾಮ ಅಶುಚಿತ್ವ ತಾಂಡವವಾಡುತ್ತಿದೆ.


    ಹನೂರು ತಾಲೂಕು ಕೇಂದ್ರ. ಹಾಗಾಗಿ ಇಲ್ಲಿಗೆ ಕೆಲಸ, ಕಾರ್ಯಗಳ ನಿಮಿತ್ತ ಸುತ್ತಮುತ್ತಲ ಗ್ರಾಮಗಳಿಂದ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಬಳಿಕ ತಮ್ಮ ಊರುಗಳಿಗೆ ತೆರಳಲು ಹೆಚ್ಚಿನ ಜನರು ಖಾಸಗಿ ಬಸ್ ನಿಲ್ದಾಣಕ್ಕೆ ಆಗಮಿಸುತ್ತಾರೆ. ಇದರಲ್ಲಿ ಜಲ್ಲಿಪಾಳ್ಯ, ಹೂಗ್ಯಂ, ಪೊನ್ನಾಚಿ ಹಾಗೂ ಇನ್ನಿತರ ಗ್ರಾಮದ ಜನರು ಸಮರ್ಪಕ ಬಸ್ಸಿಲ್ಲದ ಪರಿಣಾಮ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಬೇಕಿದೆ. ಬಸ್ ನಿಲ್ದಾಣವನ್ನು ಪೌರ ಕಾರ್ಮಿಕರಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಆದರೆ ಕಳೆದೆರಡು ದಿನಗಳಿಂದ ಸ್ವಚ್ಛಗೊಳಿಸಿಲ್ಲ. ಇದರಿಂದ ಅಲ್ಲಲ್ಲಿ ಬಿಡಾಡಿ ದನಗಳ ಸಗಣಿ ಬಿದ್ದಿರುವುದು ಒಂದೆಡೆಯಾದರೆ ಪ್ಲಾಸ್ಟಿಕ್, ಪೇಪರ್ ತ್ಯಾಜ್ಯ ಹರಡಿದೆ. ಗಲೀಜು ಆವರಿಸಿ ದುರ್ವಾಸನೆ ಬೀರುತ್ತಿದ್ದು, ಪ್ರಯಾಣಿಕರು ಕಿರಿಕಿರಿ ಅನುಭವಿಸುವಂತಾಗಿದೆ. ರೋಗ-ರುಜಿನಗಳ ಭೀತಿ ಆವರಿಸಿದೆ.


    3 ದಿನಗಳಿಂದ ಆಗಾಗ್ಗೆ ಮಳೆಯಾಗುತ್ತಿರುವುದು ಬಸ್ ನಿಲ್ದಾಣ ಮತ್ತಷ್ಟು ಹದಗೆಟ್ಟಿದ್ದು, ಅನೈರ್ಮಲ್ಯ ಮನೆ ಮಾಡಿದೆ. ಇದರಿಂದ ಬೆಳಗ್ಗೆಯೂ ಸಾರ್ವಜನಿಕರು ಸೊಳ್ಳೆಗಳ ಕಾಟ ಅನುಭವಿಸಬೇಕಿದೆ. ಮಂಗಳವಾರ ರಾತ್ರಿ ವಾಹನಕ್ಕೆ ಸಿಲುಕಿ ಬೀದಿ ನಾಯಿಯೊಂದು ಮೃತಪಟ್ಟಿದೆ. ಕಳೇಬರ ಬಸ್ ನಿಲ್ದಾಣದ ಸಮೀಪವೇ ಬಿದ್ದಿದ್ದು, ದುರ್ನಾತ ಬೀರುತ್ತಿದೆ. ಆದರೆ ನಿಲ್ದಾಣ ಸ್ವಚ್ಛತೆ ಬಗ್ಗೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಕಿಂಚಿತ್ತೂ ಗಮನಹರಿದೆ ಇರುವುದು ವಿಪರ್ಯಾಸ.


    ಕೂಡಲೇ ಪಪಂ ಅಧಿಕಾರಿಗಳು ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ ಶುಚಿತ್ವ ಕಾಪಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts