More

    ಕೆರೆಕಟ್ಟೆಗಳಿಗೆ ಜೀವಕಳೆ

    ಅರಕಲಗೂಡು: ತಾಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಗೆ ಬತ್ತಿದ್ದ ಕೆರೆ ಕಟ್ಟೆಗಳಿಗೆ ಜೀವಕಳೆ ಬಂದಂತಾಗಿದೆ.


    ಮಳೆಯಿಲ್ಲದೆ ಬರದಿಂದ ತತ್ತರಿಸಿದ್ದ ರೈತರು ಬೆಳೆಗಳನ್ನು ಕಳೆದುಕೊಳ್ಳುವಂತಾಗಿತ್ತು. ಬೇಸಿಗೆ ತಾಪಕ್ಕೆ ಕೆರೆಕಟ್ಟೆಗಳು ಬತ್ತಿ ಭಣಗುಡುತ್ತಿದ್ದವು. ಅಂತರ್ಜಲ ಪಾತಾಳಕ್ಕೆ ಕುಸಿದು ಹನಿ ನೀರಿಗಾಗಿ ಪರಿತಪಿಸುವಂತಾಗಿತ್ತು. ಇದೀಗ ಕೆಲ ದಿನಗಳಿಂದ ಎಡೆಬಿಡದೆ ಅಬ್ಬರಿಸುತ್ತಿರುವ ಮಳೆಗೆ ಹನಿ ನೀರಿಲ್ಲದೆ ಬಿರಿದು ಬಾಯ್ತೆರೆದಿದ್ದ ಕೆರೆಕಟ್ಟೆಗಳಿಗೆ ನೀರು ಬಂದಿದೆ. ಹೀಗಾಗಿ ಕೆರೆಕಟ್ಟೆಗಳ ಅಚ್ಚುಕಟ್ಟುಗಳಿಗೆ ಜೀವಸೆಲೆ ಬಂದಂತಾಗಿದ್ದು ಇವುಗಳನ್ನೇ ಆಶ್ರಯಿಸಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ.


    ನಾಲ್ಕೈದು ದಿನಗಳಿಂದ ಸತತವಾಗಿ ಬೀಳುತ್ತಿರುವ ಮಳೆಗೆ ಜಮೀನುಗಳಲ್ಲಿ ನೀರು ನಿಂತಿದ್ದು ಕೃಷಿ ಕಾರ್ಯಗಳಿಗೆ ಹಿನ್ನಡೆಯಾಗಿದೆ. ತಂಬಾಕು ನಾಟಿ ಕಾರ್ಯ ಶೇ.60 ಮುಗಿದಿದೆ. ಉಳಿದವರು ನಾಟಿ ಕಾರ್ಯ ನಡೆಸಲು ಮಳೆ ಅಡ್ಡಿಯಾಗಿದೆ. ಆಲೂಗಡ್ಡೆ, ಅಲಸಂದೆ, ಹೆಸರು, ಮುಸುಕಿನ ಜೋಳ ಬಿತ್ತನೆಗೆ ಭೂಮಿ ಹದಗೊಳಿಸಲು ಮಳೆ ಬಿಡುವು ನೀಡುತ್ತಿಲ್ಲ. ಜಾನುವಾರುಗಳ ಮೇವಿಗಾಗಿ ಬಿತ್ತನೆ ಮಾಡಿದ್ದ ಮುಸುಕಿನ ಜೋಳ ಮಳೆಗೆ ಸಿಲುಕಿ ಹಾಳಾಗಿದೆ. ಇಳಿಜಾರು ಪ್ರದೇಶದ ಜಮೀನುಗಳ ಮೇಲ್ಮೈ ಮಣ್ಣು ಮಳೆಯಿಂದ ಕೊಚ್ಚಿ ಹೋಗಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts