More

    ಎಲ್ಲೆಲ್ಲೂ ಮಹಿಳೆಯರೇ: ನೈಋತ್ಯ ರೈಲ್ವೇಯಿಂದ ಸಂಪೂರ್ಣ ಸ್ತ್ರೀಮಯ ಮಹಿಳಾ ದಿನಾಚರಣೆ

    ಬೆಂಗಳೂರು: ಇಂದು ಬೆಂಗಳೂರಿನಿಂದ ಬಸವ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದವರಿಗೆ ಒಂದು ವಿಶೇಷ ಕಾಣಿಸಿತ್ತು. ಅವರಿಗೆ ಆ ರೈಲಿನಲ್ಲಿ, ರೈಲ್ವೇ ನಿಲ್ದಾಣದಲ್ಲಿ ಎಲ್ಲ ಸಿಬ್ಬಂದಿ ಮಹಿಳೆಯರೇ ಆಗಿದ್ದರು. ಆ ಮೂಲಕ ನೈಋತ್ಯ ರೈಲ್ವೇ ಇಲಾಖೆ ವಿಶೇಷವಾಗಿ ಮಹಿಳಾ ದಿನವನ್ನು ಆಚರಿಸಿತು.

    ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಪ್ಲ್ಯಾಟ್​ಫಾರಂ-8ರ ಮೂಲಕ ಬೆಳಗ್ಗೆ 11.15ಕ್ಕೆ ಬಾಗಲಕೋಟೆಗೆ ಹೊರಟ ಬಸವ ಎಕ್ಸ್‌ಪ್ರೆಸ್ ರೈಲಿನಲ್ಲಿ ಅದರ ಲೋಕೋ ಪೈಲಟ್, ಟಿಕೆಟ್ ಕಲೆಕ್ಟರ್ ಸೇರಿ ಎಲ್ಲ ಸಿಬ್ಬಂದಿ ಮಹಿಳೆಯರೇ ಇದ್ದರು. ಅದೇ ರೀತಿ ಮಧ್ಯಾಹ್ನ 12.15ರಿಂದ 1 ಗಂಟೆಯವರೆಗೆ ಕೆ.ಆರ್.ಪುರದ ರೈಲ್ವೆ ವೇರ್‌ಹೌಸ್‌ನ ಎಲ್ಲ ಕಾರ್ಯದ ನಿಯಂತ್ರಣವನ್ನು ಮಹಿಳಾ ಸಿಬ್ಬಂದಿಯೇ ನಿರ್ವಹಿಸಿದರು.

    ಎಲ್ಲೆಲ್ಲೂ ಮಹಿಳೆಯರೇ: ನೈಋತ್ಯ ರೈಲ್ವೇಯಿಂದ ಸಂಪೂರ್ಣ ಸ್ತ್ರೀಮಯ ಮಹಿಳಾ ದಿನಾಚರಣೆ
    ಮಹಿಳಾ ಸಿಬ್ಬಂದಿ ಇರುವ ರೈಲಿಗೆ ಮಹಿಳೆಯರಿಂದಲೇ ಹಸಿರು ನಿಶಾನೆ

    ಅಡಿಷನಲ್ ಡಿವಿಷನಲ್ ರೈಲ್ವೇ ಮ್ಯಾನೇಜರ್ (ಅಡ್ಮಿನ್​) ಕುಸುಮಾ ಹರಿಪ್ರಸಾದ್ ಅವರು ಈ ರೈಲಿಗೆ ಹಸಿರು ನಿಶಾನೆ ತೋರಿದರು. ಸೀನಿಯರ್ ಡಿವಿಷನಲ್ ಸೆಕ್ಯುರಿಟಿ ಕಮಿಷನರ್ ದೇಬಶ್ಮಿತಾ ಚಟ್ಟೋಪಾಧ್ಯಾಯ ಬ್ಯಾನರ್ಜಿ ಹಾಗೂ ಇತರ ಮಹಿಳಾ ಅಧಿಕಾರಿಗಳು ಉಪಸ್ಥಿತರಿದ್ದರು. ಈ ರೈಲಿಗೆ ಶಿರೀಷಾ ಗಜಿನಿ ಲೋಕೋ ಪೈಲಟ್​, ಮಿನಿ ಮುಬಾರಕ್ ಅಸಿಸ್ಟೆಂಟ್​ ಲೋಕೋಪೈಲಟ್​, ರಿಚಾ ಮಣಿ ತ್ರಿಪಾಠಿ ಗಾರ್ಡ್ ಆಗಿದ್ದರು. ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ಸ್, ಕ್ಯಾರಿಯೇಜ್ ಆ್ಯಂಡ್ ವ್ಯಾಗನ್, ಏರ್ ಕಂಡಿಷನ್​ ಮಾತ್ರವಲ್ಲದೆ ರೈಲ್ವೇ ಪ್ರೊಟೆಕ್ಷನ್​ ಫೋರ್ಸ್​​ ಸಿಬ್ಬಂದಿ ಕೂಡ ಮಹಿಳೆಯರೇ ಆಗಿದ್ದರು. ಹೀಗೆ ವಿಶೇಷವಾಗಿ ಮಹಿಳಾ ದಿನವನ್ನು ಆಚರಿಸಿದ ನೈಋತ್ಯ ರೈಲ್ವೇ ಇಲಾಖೆಯು ಆ ಕುರಿತ ದೃಶ್ಯಾವಳಿ ಇರುವ ವಿಡಿಯೋವೊಂದನ್ನು ಕೂಡ ಬಿಡುಗಡೆ ಮಾಡಿದೆ.

    ಚನ್ನಸಂದ್ರ- ಜೋಲಾರ್​ಪೆಟ್ಟೈ ನಡುವಿನ ಗೂಡ್ಸ್ ರೈಲಲ್ಲೂ ಎಲ್ಲ ಸಿಬ್ಬಂದಿ ಮಹಿಳೆಯರಾಗಿದ್ದು, ಇದಕ್ಕೆ ಕೆ.ಆರ್.ಪುರದಲ್ಲಿ ಹಸಿರು ನಿಶಾನೆ ತೋರಲಾಗಿತ್ತು. ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗದಲ್ಲಿ ಇರುವ 9957 ಸಿಬ್ಬಂದಿ ಪೈಕಿ 1135 ಮಂದಿ ಮಹಿಳೆಯರು ಎಂಬುದಾಗಿ ಇಲಾಖೆ ತಿಳಿಸಿದೆ.

    ಅವರ ತಲೆ; ನೈತಿಕತೆ ಅಂತೆ ನೈತಿಕತೆ… ಯಡಿಯೂರಪ್ಪ ಗರಂ

    ದೂರು ನೀಡಲು ಹೋದ ಮಹಿಳೆಯ ರೇಪ್ ! ಪೊಲೀಸ್​ ಕಾಂಪೌಂಡಲ್ಲೇ ಅಪರಾಧ ?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts