More

    ಶಾಂತಿಯುತ ಚುನಾವಣೆಗೆ ಸಕಲ ಸಿದ್ಧತೆ

    ಜಮಖಂಡಿ: ನಗರದಲ್ಲಿ ಡಿ.23ರಂದು ನಡೆಯಲಿರುವ ದಿ.ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕಿನ ಚುನಾವಣೆಯನ್ನು ಶಾಂತಿಯುತ, ಪಾರದರ್ಶಕವಾಗಿ ನಡೆಸಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಸದಾಶಿವ ಮಕ್ಕೋಜಿ ಹೇಳಿದರು.

    ಇದನ್ನೂ ಓದಿ: ಪ್ರಗತಿಗೆ ಮತ್ತೊಂದು ಹೆಸರು ವೀರಶೈವ ಲಿಂಗಾಯತ

    ನಗರದ ದಿ. ಜಮಖಂಡಿ ಅರ್ಬನ್ ಕೋ-ಆಪ್ ಬ್ಯಾಂಕಿನ ಸಭಾಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

    ಈ ಚುನಾವಣೆಯಲ್ಲಿ ಅಕ್ರಮ ತಡೆಯುವ ನಿಟ್ಟಿನಲ್ಲಿ 2 ತಂಡ ರಚಿಸಲಾಗಿದ್ದು, ಅಕ್ರಮ ಕಂಡು ಬಂದಲ್ಲಿ ಅಂಥವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.

    ಬ್ಯಾಂಕಿನ ಒಟ್ಟು 22,464 ಸದಸ್ಯರಲ್ಲಿ 7,941 ಅರ್ಹ ಮತದಾರರಿದ್ದಾರೆ. ನ್ಯಾಯಾಲಯದ ಎರಡು ಆದೇಶದನ್ವಯ 1,148 ಮತ್ತು 509 ಮತಗಳು ಅರ್ಹತೆ ಪಡೆದಿವೆ ಎಂದರು.

    ಮತದಾನವು ನಗರದ ಪಿಬಿ ಹೈಸ್ಕೂಲ್‌ನಲ್ಲಿ 26 ಮತಗಟ್ಟೆಗಳನ್ನು ಮಾಡಲಾಗಿದೆ. ಜಿ.ಜಿ. ಹೈಸ್ಕೂಲನಲ್ಲಿ 6 ಮತಗಟ್ಟೆ ಸೇರಿ 21 ಮತಗಟ್ಟೆಗಳನ್ನು ನಿರ್ಮಿಸಲಾಗಿದೆ. ಒಂದು ಮತಗಟ್ಟೆಯಲ್ಲಿ ಸುಗಮ ಮತ ಚಲಾಯಿಸಲು 4 ಟೇಬಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಚುನಾವಣೆಯಲ್ಲಿ ಬಿಗಿ ಬಂದೋಬಸ್ತ್‌ಗಾಗಿ 1ಡಿಎಸ್‌ಪಿ, 1 ಸಿಪಿಐ, 4 ಪಿಎಸ್‌ಐ ಸೇರಿ 120 ಆರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಪ್ರತಿ ಮತಗಟ್ಟೆಗೆ 7 ರಂತೆ ಮತಗಟ್ಟೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

    ಮತದಾರರಿಗೆ ಸದಸ್ಯತ್ವದ ಗುರುತಿನ ಚೀಟಿ ಕಡ್ಡಾಯವಾಗಿದ್ದು, ಇಲ್ಲದ ಮತದಾರರು ಬ್ಯಾಂಕಿನ ಅವಧಿಯಲ್ಲಿ ಪಡೆದುಕೊಳ್ಳಲು ಅವಕಾಶವಿದೆ ಎಂದು ಹೇಳಿದರು.

    ಇದನ್ನೂ ಓದಿ: ಆಧುನಿಕ ಐಟಿ ತಂತ್ರಜ್ಞಾನದ ಸಹಕಾರ ಅಗತ್ಯ

    ಬಸವಭವನದಲ್ಲಿ ನೀಡಲಾಗುವ ಮತದಾನದ ಪ್ರತಿಯನ್ನು ತೆಗೆದುಕೊಂಡು ಮತದಾನಕ್ಕೆ ತೆರಳಬೇಕು. ಅಭ್ಯರ್ಥಿಗಳು ನೀಡುವ ಯಾವುದೇ ಮತದಾರರ ಪ್ರತಿಗೆ ಮಾನ್ಯತೆ ನೀಡಲ್ಲ. ನ್ಯಾಯಾಲಯದ ಆದೇಶದನ್ವಯ ಅರ್ಹರು ಆಧಾರಕಾರ್ಡ್ ಕಡ್ಡಾಯವಾಗಿ ತರಬೇಕು ಎಂದರು.

    ಸಹಾಯಕ ಚುನಾವಣಾಧಿಕಾರಿ ಸಿದ್ದಗಿರಿ ನ್ಯಾಮಗೌಡ ಮಾತನಾಡಿ, ಡಿ.23 ರಂದು ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದ್ದು ನ್ಯಾಯಾಲಯದ ಆದೇಶದ ಮೇರೆಗೆ ನಿಗದಿ ಪಡಿಸಿದ ದಿನಾಂಕದಂದು ಮತ ಎಣಿಕೆ ಮಾಡಲಾಗುವುದು. ಡಿ.21ರ ರಾತ್ರಿ 10 ಗಂಟೆವರೆಗೆ ಮಾತ್ರ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗುವುದೆಂದು ತಿಳಿಸಿದರು.

    ಬ್ಯಾಂಕಿನ ಜಿಎಂ ಎಸ್.ಆರ್. ತುಪ್ಪದ, ವ್ಯವಸ್ಥಾಪಕ ಸಂತೋಷ ಹಲ್ಯಾಳ, ಎಸ್.ಕೆ. ಸಾರವಾಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts